ETV Bharat / city

Tokyo Paralympics-2020: ಇಬ್ಬರು ಸ್ಪರ್ಧಾರ್ಥಿಗಳಿಗೆ ಸನ್ಮಾನ, ತಲಾ 10ಲಕ್ಷ ರೂ. ಪ್ರೋತ್ಸಾಹಧನ - ಇಬ್ಬರು ಸ್ಪರ್ಧಾರ್ಥಿಗಳಿಗೆ ಸನ್ಮಾನ, ತಲಾ 10ಲಕ್ಷ ರೂ. ಪ್ರೋತ್ಸಾಹಧನ,

ರಾಜ್ಯದಿಂದ ಟೋಕಿಯೋ ಪ್ಯಾರಾಲಂಪಿಕ್ಸ್-2020 ಗೆ ಅರ್ಹತೆ ಪಡೆದಿರುವ ಕು.ಶಕೀನ ಖಾತುನ್, (ಪ್ಯಾರಾ ಪವರ್ ಲಿಫ್ಟಿಂಗ್) ಹಾಗೂ ನಿರಂಜನ್ ಮುಕುಂದನ್ (ಪ್ಯಾರಾ ಈಜು)ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾಪಟುಗಳಿಗೆ ಟೋಕಿಯೋ ಪ್ಯಾರಾಲಂಪಿಕ್ಸ್​ನಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದ ಕ್ರಿಡಾ ಸಚಿವರು ಪ್ರೋತ್ಸಾಹಧನ ನೀಡಿದರು.

tokyo-paralympics-competitors-honored-by-sports-minister
ಟೋಕಿಯೋ ಪ್ಯಾರಾಲಂಪಿಕ್ಸ್
author img

By

Published : Aug 16, 2021, 8:01 PM IST

ಬೆಂಗಳೂರು : ಟೋಕಿಯೋ ಪ್ಯಾರಾಲಿಂಪಿಕ್ಸ್ -2020ರಲ್ಲಿ ಭಾಗವಹಿಸುತ್ತಿರುವ ರಾಜ್ಯದ ಇಬ್ಬರು ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಚೆಕ್ ನೀಡುವ ಮೂಲಕ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ, ಸಚಿವ ಡಾ. ನಾರಾಯಣ ಗೌಡ ಪ್ರೋತ್ಸಾಹಿಸಿದರು.

ವಿಧಾನಸೌಧದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯದಿಂದ ಟೋಕಿಯೋ ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಕು.ಶಕೀನ ಖಾತುನ್, (ಪ್ಯಾರಾ ಪವರ್ ಲಿಫ್ಟಿಂಗ್) ಹಾಗೂ ನಿರಂಜನ್ ಮುಕುಂದನ್ (ಪ್ಯಾರಾ ಈಜು)ಅವರನ್ನು ಸನ್ಮಾನಿಸಲಾಯಿತು.

ಟೋಕಿಯೋ ಪ್ಯಾರಾಲಂಪಿಕ್ಸ್ ಸ್ಪರ್ಧಾರ್ಥಿಗಳಿಗೆ ಸನ್ಮಾನ

ಕ್ರೀಡಾಪಟುಗಳಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಲೆಂದು ಸಚಿವರು ಶುಭ ಹಾರೈಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಕ್ರೀಡಾ ಸಾಧನೆ ಮಾಡಲು ಪ್ರತಿಭಾವಂತ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರವು ಸದಾ ಸಿದ್ಧವಾಗಿದೆ ಎಂದು ಅಭಯ ನೀಡಿದರು.

ಶಿಖರದಿಂದ ಸಾಗರ ಅಭಿಯಾನಕ್ಕೆ ಚಾಲನೆ

ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿರುವ 'ಶಿಖರದಿಂದ ಸಾಗರ' ಅಭಿಯಾನಕ್ಕೆ ಸಚಿವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಟೋಕಿಯೋ ಪ್ಯಾರಾಲಿಂಪಿಕ್ಸ್​ಗೆ ಇಬ್ಬರು‌ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಪ್ಯಾರಾ ಪವರ್ ಲಿಫ್ಟಿಂಗ್​ನಲ್ಲಿ ಶಕೀನ ಖಾತುನ್ ಹಾಗೂ ಪ್ಯಾರಾ ಈಜುನಲ್ಲಿ ನಿರಂಜನ್ ಕುಮಾರ್ ಭಾಗವಹಿಸಲು ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರದಿಂದ ಬಹುಮಾನ ಘೋಷಣೆ : ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದರೆ ಬಹುಮಾನ 5 ಕೋಟಿ ರೂ. ಬೆಳ್ಳಿ ಗೆದ್ದರೆ 3 ಕೋಟಿ ರೂ. ಕಂಚು ಗೆದ್ದರೆ 2 ಕೋಟಿ ರೂ. ಬಹುಮಾನವನ್ನು ಸಚಿವರು ಘೋಷಣೆ ಮಾಡಿದರು.

ರಾಜ್ಯವನ್ನು ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೆ ತರಬೇಕು. ಅದಕ್ಕಾಗಿ ಖೇಲೋ‌ ಇಂಡಿಯಾ ಗೇಮ್ ಮಾಡುತ್ತೇವೆ. ಅದು ಬೆಂಗಳೂರಿನಲ್ಲೇ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಉದ್ದೇಶ ಇದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಅನುಮತಿ ಪಡೆಯುತ್ತೇವೆ ಎಂದು ಹೇಳಿದರು.

2021 ಅಗಸ್ಟ್​​​​​ 24ರಿಂದ ಪ್ಯಾರಾಲಿಂಪಿಕ್ಸ್​ ಪ್ರಾರಂಭ

ಜಪಾನ್ ದೇಶದ ಟೋಕಿಯೋ ನಗರದಲ್ಲಿ ಪ್ಯಾರಾಲಿಂಪಿಕ್ಸ್-2020 ಕ್ರೀಡಾಕೂಟವು 2021ರ ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತ ದೇಶದಿಂದ 54 ಕ್ರೀಡಾಪಟುಗಳು 09 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿ ಪದಕ ಗೆದ್ದು ಭಾರತ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರದಲ್ಲಿ ಹಾರಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಶಿಖರದಿಂದ ಸಾಗರದಲ್ಲಿ ರಾಜ್ಯ 5 ಜನ ಯುವತಿಯರು ಭಾಗಿ

ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ 'ಶಿಖರದಿಂದ ಸಾಗರ' ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕಕ್ಕೆ ಸೇರಿದ 5 ಯುವತಿಯರು ಕಾಶ್ಮೀರದ ಕೊಲ್ಹೋಯ್ (Kolhoi 5425m) ಶಿಖರವನ್ನು ಏರುವ ಮೂಲಕ ಶುರುವಾಗಿ ತದನಂತರ 3,000 ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಿ ಈ ಯಾನವನ್ನು ಮುಕ್ತಾಯಗೊಳಿಸುತ್ತಾರೆ.

ಇದು ಸುಮಾರು 45 ದಿನಗಳ ಎಕ್ಸಿಪಿಡಿಷನ್ ಆಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ನಾರಿಯ ಜೊತೆ ಪುರುಷರ ವಿಕಾಸ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ವಿಭಿನ್ನವಾದ ಕಾರ್ಯಕ್ರಮವಾಗಿರುತ್ತದೆ. ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನಕ್ಕೆ ಇಂದು ಚಾಲನೆ ನೀಡಲಾಯಿತು.

ಸಾಹಸ ಯಾನ ತಂಡದ ಸದಸ್ಯರು

  1. ಐಶ್ವರ್ಯ.ವಿ.- ಮೂಲತಃ ಶಿವಮೊಗ್ಗದವರಾಗಿದ್ದು, 2017 ರಲ್ಲಿ ಓಂಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್​​ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಸ್ಪಿಡಿಷನ್‌ನ ಭದ್ರಾನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
  2. ಧನಲಕ್ಷ್ಮೀ- ಮೂಲತಃ ಶಿವಮೊಗ್ಗದವರಾಗಿದ್ದು, 2017 ರಲ್ಲಿ ಓರಿಯೆಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಡ್​ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಕ್ಸಿಡಿಷನ್ನ ಭದ್ರಾನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2021 ರಲ್ಲಿ ಖೇಲೋ ಇಂಡಿಯಾ ವಿಂಟರ್ಗೇಮ್ನಲ್ಲಿ 5 ಕಿ.ಮೀ ಹಾಗೂ 1.5 ಕಿ.ಮೀ ಸ್ಕೋ ಪೂಸ್ ಓಡುವ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗಳಿಸಿರುವುದು ಅಲ್ಲದೇ, 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್‌ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
  3. ಆಶಾ - ಬೆಂಗಳೂರಿನ ನಿವಾಸಿಯಾಗಿರುವ ಆಶಾ, 2019 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಡ್​ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಡಿಷನ್ನ 'ಭದಾನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ.
  4. ಪುಪ್ಪ- ಮೂಲತಃ ಮಡಿಕೇರಿಯವರಾಗಿದ್ದು, 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಡ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕೈಂಬಿಂಗ್ ತರಬೇತಿ ಪೂರ್ಣಗೊಳಿಸಿರುತ್ತಾರೆ. ಶಿಬಿರಗಳಲ್ಲಿ ತೇರ್ಗಡೆ ಹೊಂದಿದ್ದಾರೆ.
  5. ಬಿಂದು- ಮೈಸೂರಿನ ಬಿಂದು, 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ಟಳಲ್ಲಿ ತೇರ್ಗಡೆಹೊಂದಿದ್ದು, 2020 ಮೊಟ್ಟಮೊದಲ ಬಾರಿಗೆ ಮಧುಗಿರಿಯಲ್ಲಿ ನಡೆದ ಮಹಿಳೆಯರ ಶಿಲಾರೋಹಣ ಅಭಿಯಾನದಲ್ಲಿ 350 ಮೀಟರ್ನ 'ನಿರ್ಭಯ' 6 ಸಿ ಗ್ರೇಡ್ ಮಾರ್ಗ ತೆರೆದ ತಂಡದ ಅಭ್ಯರ್ಥಿಯಾಗಿದ್ದ ಹೆಗ್ಗಳಿಕೆ ಹಾಗೂ 2020 ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಂಬಿಂಗ್ ತರಬೇತಿ ಶಿಬಿರಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಅಲ್ಲದೇ 2021 ರಲ್ಲಿ ಕೋಲಾರ್‌ ಬೌಲರಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಗಳಿಸಿರುತ್ತಾರೆ.

ಟೋಕಿಯೋ ಪ್ಯಾರಾ ಓಲಿಂಪಿಕ್ಸ್​ಗೆ ಆಯ್ಕೆಯಾಗಿರುವ ರಾಜ್ಯದ ಇಬ್ಬರು ಕ್ರೀಡಾಪಟುಗಳು

  • ಶಕೀನ್ ಖಾತುನ್- ಪ್ಯಾರಾ ಪವರ್ ಲಿಫ್ಟಿಂಗ್, ಜಪಾನ್‌ನ ಟೋಕಿಯೋ ಪ್ಯಾರಾ ಓಲಂಪಿಕ್‌ಗೆ ಆಯ್ಕೆಯಾಗಿರುವ ಶಕೀನ್ ಖಾಕುನ್ ಏಕಲವ್ಯ ಪ್ರಶಸ್ತಿ ವಿಜೇತರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
  1. 2014- ಕಾಮನ್​ವೆಲ್ತ್ ಗೇಮ್ಸ್, ಗ್ಲಾಸ್ಕೋ ಕಂಚಿನ ಪದಕ
  2. 2018- ವಿಶ್ವ ಪ್ಯಾರಾ ಪವರ್ ಲಿಫ್ಟಿಂಗ್ (ವಿಶ್ವಕಪ್) ದುಬೈ- ಬೆಳ್ಳಿ ಪದಕ
  3. 2018- ಕಾಮನ್​ವೆಲ್ತ್ ಗೇಮ್ಸ್ ಭಾಗವಹಿಸುವಿಕೆ. * 2018- ಏಷ್ಯನ್​ ಪ್ಯಾರಾ ಗೇಮ್ಸ್, ಇಂಡೋನೇಷಿಯಾ- ಬೆಳ್ಳಿ ಪದಕ.
  4. 2018- 9ನೇ FAZZA ವರ್ಲ್ಡ್ ಪ್ಯಾರಾ ಪವರ್‌ಲಿಫ್ಟಿಂಗ್ ವರ್ಲ್ಡ್‌ಕಪ್, ದುಬೈ-ಬೆಳ್ಳಿ ಪದಕ
  5. 2019- ವರ್ಲ್ಡ್ ಪ್ಯಾರಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್- ಭಾಗವಹಿಸುವಿಕೆ
  • ನಿರಂಜನ್ ಮುಕುಂದನ್ - ಪ್ಯಾರಾ ಈಜು. ಜಪಾನ್‌ನ ಟೋಕಿಯೋ ಪ್ಯಾರಾ ಓಲಂಪಿಕ್‌ಗೆ ಆಯ್ಕೆಯಾಗಿರುವ ನಿರಂಜನ್ ಮುಕುಂದನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
  1. 2013- 13ನೇ ನ್ಯಾಷನಲ್ ಪ್ಯಾರಾಲಂಪಿಕ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ | ಚಿನ್ನ, 1 ಬೆಳ್ಳಿ ಹಾಗೂ 2 ಕಂಚು
  2. 2015- ನೆದರ್‌ಲ್ಯಾಂಡ್ ನಲ್ಲಿ ನಡೆದ ಐವಾಸ್ ವರ್ಲ್ಡ್ ಜೂನಿಯರ್ ಗೇಮ್ಸ್ - ಚಿನ್ನ
  3. 2016_ Prague ನಲ್ಲಿ ನಡೆದ ಐವಾಸ್ ವರ್ಲ್ಡ್ ಯು-23ವರ್ಲ್ಡ್ ಗೇಮ್ಸ್- 3 ಚಿನ್ನ, 2 ಬೆಳ್ಳಿ ಮತ್ತು ಕಂಚಿನ ಪದಕ
  4. 2018- ಓಪನ್ ಪ್ಯಾರಾ ನ್ಯಾಷನಲ್ ಚಾಂಪಿಯನ್ ಶಿಪ್- ಚಿನ್ನದ ಪದಕ ಗೆದ್ದಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.