ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 19 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 279 ಕ್ಕೇರಿದೆ.
ರಾಜ್ಯದಲ್ಲಿ ಈವರೆಗೆ 12 ಜನ ಸಾವನ್ನಪ್ಪಿದ್ದು, ಇಂದು ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ 80 ಜನ ಗುಣಮುಖರಾಗಿದ್ದಾರೆ. 187 ಪ್ರಕರಣಗಳಲ್ಲಿ 184 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು, 03 ಜನರನ್ನು ತೀವ್ರ ನಿಗಾ ಘಟಕದಲ್ಲಿಡಲಾಗಿದೆ. ರಾಜ್ಯಾದ್ಯಂತ ಒಟ್ಟು 13,182 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 12,483 ಮಾದರಿಗಳ ಪೈಕಿ 279 ಮಾದರಿಗಳು ಖಚಿತಗೊಂಡಿದ್ದು, ಪಾಸಿಟಿವ್ ಸೂಚ್ಯಂಕ ಕೇವಲ 2.23 ಮಾತ್ರವಿದೆ. ಗುಜರಾತ್ (4.63%) ಮಹಾರಾಷ್ಟ್ರ (6.7%) ಕೇರಳ (2.73%) ಸೇರಿದಂತೆ ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಇದೆ.
ಕೋವಿಡ್-19 ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕಿತರು ಆಸ್ಪತ್ರೆ ಅಥವಾ ಕ್ವಾರಂಟೈನ್ ನಿಂದ ಬಿಡುಗಡೆ ಹೊಂದಿದ ನಂತರದ ಫಾಲೋ ಅಪ್ ಕುರಿತಂತೆ ಹೊಸ ಸಲಹಾಸೂಚಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇನ್ಮುಂದೆ ಕೋವಿಡ್ ಪ್ರಕರಣಗಳ ಪತ್ತೆ ಹಚ್ಚುವಿಕೆ, ತಡೆಗಟ್ಟುವಿಕೆ ಸೇರಿದಂತೆ ಸಲಹೆ ಸೂಚನೆಗಳನ್ನು ನೀಡಲು ರಾಜ್ಯಾದ್ಯಂತ ವೈದ್ಯಕೀಯ ತಜ್ಞರನ್ನು ಒಳಗೊಂಡ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ.
ಜಿಲ್ಲಾವಾರು ಅಂಕಿ ಅಂಶ:
ಬೆಂಗಳೂರು - 71 ಪ್ರಕರಣ
ಮೈಸೂರು - 58 ಪ್ರಕರಣ
ದಕ್ಷಿಣ ಕನ್ನಡ - 11 ಪ್ರಕರಣ
ಬೆಳಗಾವಿ - 19 ಪ್ರಕರಣ
ಉತ್ತರ ಕನ್ನಡ - 11 ಪ್ರಕರಣ
ಚಿಕ್ಕಬಳ್ಳಾಪುರ - 13 ಪ್ರಕರಣ
ಕಲಬುರಗಿ - 17 ಪ್ರಕರಣ
ಬೆಂಗಳೂರು ಗ್ರಾಮಾಂತರ - 12 ಪ್ರಕರಣ
ಬೀದರ್ - 13 ಪ್ರಕರಣ
ದಾವಣಗೆರೆ - 2 ಪ್ರಕರಣ
ಉಡುಪಿ - 3 ಪ್ರಕರಣ
ಬಳ್ಳಾರಿ - 6 ಪ್ರಕರಣ
ಕೊಡಗು - 1 ಪ್ರಕರಣ
ಧಾರವಾಡ - 6 ಪ್ರಕರಣ
ತುಮಕೂರು - 2 ಪ್ರಕರಣ
ಬಾಗಲಕೋಟೆ - 14 ಪ್ರಕರಣ
ಮಂಡ್ಯ - 8 ಪ್ರಕರಣ
ಗದಗ - 1 ಪ್ರಕರಣ
ವಿಜಯಪುರ - 10 ಪ್ರಕರಣಗಳು ಪತ್ತೆಯಾಗಿವೆ.