ಬೆಂಗಳೂರು: ರಾಜ್ಯದಲ್ಲಿಂದು 97 ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈವರೆಗೆ ಬರೋಬ್ಬರಿ 2.03 ಲಕ್ಷ ಜನರಿಗೆ ಕೋವಿಡ್-19 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು ಇದರಲ್ಲಿ 2,056 ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟೀಟ್ವ್ ಮಾಡಿದ್ದು, ಇಂದಿಗೆ ರಾಜ್ಯದಲ್ಲಿ 2.03 ಲಕ್ಷ ಕೊರೊನಾ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 16 ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಸಲಾಗಿದೆ. ಈಗ ನಮ್ಮಲ್ಲಿ 57 ಲ್ಯಾಬ್ಗಳು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕಾಗಿ ನಮ್ಮ ಎಲ್ಲಾ ಅಧಿಕಾರಿಗಳು, ವೈದ್ಯರು ಲ್ಯಾಬ್ ಟೆಕ್ನಿಷಿಯನ್ಗಳ ನಿರಂತರ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಇಂದು ಹಾಸನದಲ್ಲಿ -14, ಚಿಕ್ಕಬಳ್ಳಾಪುರ-26, ಉಡುಪಿ-18, ದಾವಣಗೆರೆ-4, ದಕ್ಷಿಣಕನ್ನಡ -1, ಕಲಬುರಗಿ-6, ಮಂಡ್ಯ -15, ತುಮಕೂರು-2, ಯಾದಗಿರಿ-6, ಉತ್ತರಕನ್ನಡ- 2, ವಿಜಯಪುರ-1, ಕೊಡಗು-1, ಧಾರವಾಡ- 1 ಪಾಸಿಟಿವ್ ಕೇಸ್ ಪತ್ತೆಯಾಗಿದೆ. 73 ಕೇಸ್ಗಳು ಮಹಾರಾಷ್ಟ್ರದಿಂದ ಪ್ರಯಾಣ ಬೆಳೆಸಿದವರಿಂದ ಹರಡಿದೆ. ಇಂದು ಬೆಂಗಳೂರಿನಲ್ಲಿ ಯಾವುದೇ ಪಾಸಿಟಿವ್ ಕೇಸ್ಗಳು ಪತ್ತೆಯಾಗಿಲ್ಲ.
10 ದಿನಗಳಲ್ಲಿ ಒಂದು ಸಾವಿರ ಕೊರೊನಾ ಪಾಸಿಟಿವ್:
ಕೊರೊನಾ ಹರಡುವಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ ಕರುನಾಡಿನಲ್ಲಿ ಒಂದು ಸಾವಿರ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಸದ್ಯಕ್ಕೆ ಮೇ ಒಳಗೆ 3,000 ಸಾವಿರ ಗಡಿದಾಟಿ ಬಿಡುತ್ತಾ ಎನ್ನುವ ಆತಂಕ ಹೆಚ್ಚಿಸಿದೆ. ಮೇ14 -28, ಮೇ15 ರಂದು 69, ಮೇ 16 ರಂದು 36, ಮೇ 17 ರಂದು 55, ಮೇ 18 ರಂದು 99, ಮೇ 19 ರಂದು 149, ಮೇ 20 ರಂದು 67, ಮೇ 21 ರಂದು 143, ಮೇ 22 ರಂದು 138, ಮೇ 23 ರಂದು 216 ಒಟ್ಟು1000 ಕೇಸ್ ಪತ್ತೆಯಾಗಿದ್ದು, ಇಂದು ಮಧ್ಯಾಹ್ನದ ವರೆಗೆ 97 ಹೊಸ ಪಾಸಿಟಿವ್ ಕೇಸ್ ಗಳು ಕಂಡುಬಂದಿದೆ.