ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 443ಕ್ಕೆ ತಲುಪಿದೆ.
ಬೆಂಗಳೂರು 9, ವಿಜಯಪುರ 2, ಹುಬ್ಬಳ್ಳಿ-ಧಾರವಾಡ 2, ದಕ್ಷಿಣ ಕನ್ನಡ 1, ಮಂಡ್ಯದಲ್ಲಿ 2 ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ಈವರೆಗೆ ಒಟ್ಟು 17 ಶಂಕಿತರು ಮರಣ ಹೊಂದಿದ್ದಾರೆ. 141 ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕಳೆದ ನಾಲ್ಕು ದಿನದಲ್ಲಿ ಕೇವಲ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಟ್ಟಿದ್ದವು. ಆದರೆ, ಇಂದು 9 ಪ್ರಕರಣ ಕಂಡುಬರುವ ಮೂಲಕ ಮತ್ತೆ ಆತಂಕ ಹೆಚ್ಚಾಗುವಂತೆ ಮಾಡಿದೆ. ರೋಗಿ-419ರ ಸಂಪರ್ಕದಿಂದ ಬೆಂಗಳೂರಿನಲ್ಲಿ 9ಮಂದಿಗೆ ಸೋಂಕು ತಗುಲಿದೆ. ಇಂದು ಸೋಂಕು ಪತ್ತೆಯಾದ ಎಲ್ಲರಿಗೂ ಆಯಾ ಜಿಲ್ಲೆಗಳಲ್ಲಿ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿಗಳ ಚಲನವಲನ
- ರೋಗಿ-428: ವಿಜಯಪುರದ 32 ವರ್ಷದ ಯುವಕ. ರೋಗಿ-221ರ ಸಂಪರ್ಕ.
- ರೋಗಿ-429: ವಿಜಯಪುರದ 25 ವರ್ಷದ ಮಹಿಳೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
- ರೋಗಿ-430: ಹುಬ್ಬಳ್ಳಿ-ಧಾರವಾಡ 30 ವರ್ಷದ ಮಹಿಳೆ. ರೋಗಿ-236 ರ ಸಂಪರ್ಕ.
- ರೋಗಿ-431: ಹುಬ್ಬಳ್ಳಿ-ಧಾರವಾಡ 13 ವರ್ಷದ ಬಾಲಕಿ. ರೋಗಿ-236 ರ ಸಂಪರ್ಕ.
- ರೋಗಿ-432: ದಕ್ಷಿಣ ಕನ್ನಡದ ಬಂಟ್ವಾಳದ 78 ವರ್ಷದ ವೃದ್ಧ. ರೋಗಿ-390ರ ಸಂಪರ್ಕ.
- ರೋಗಿ-433: ಬೆಂಗಳೂರು ನಗರದ 30 ವರ್ಷದ ಯುವಕ. ರೋಗಿ-419ರ ಸಂಪರ್ಕ.
- ರೋಗಿ-434: ಬೆಂಗಳೂರು ನಗರ 30 ವರ್ಷದ ಯುವಕ. ರೋಗಿ-419ರ ಸಂಪರ್ಕ.
- ರೋಗಿ-435: ಬೆಂಗಳೂರು ನಗರದ 22 ವರ್ಷದ ಯುವಕ. ರೋಗಿ-419ರ ಸಂಪರ್ಕ.
- ರೋಗಿ-436: ಬೆಂಗಳೂರು ನಗರದ 40 ವರ್ಷದ ಪುರುಷ. ರೋಗಿ-419ರ ಸಂಪರ್ಕ.
- ರೋಗಿ-437: ಬೆಂಗಳೂರು ನಗರದ 30 ವರ್ಷದ ಯುವಕ. ರೋಗಿ-419ರ ಸಂಪರ್ಕ.
- ರೋಗಿ-438: ಬೆಂಗಳೂರು ನಗರದ 25 ವರ್ಷದ ಯುವಕ. ರೋಗಿ-419ರ ಸಂಪರ್ಕ.
- ರೋಗಿ-439: ಬೆಂಗಳೂರು ನಗರದ 37 ವರ್ಷದ ಪುರುಷ. ರೋಗಿ-419ರ ಸಂಪರ್ಕ.
- ರೋಗಿ-440: ಬೆಂಗಳೂರು ನಗರದ 43 ವರ್ಷದ ಪುರುಷ. ರೋಗಿ-419ರ ಸಂಪರ್ಕ.
- ರೋಗಿ-441: ಬೆಂಗಳೂರು ನಗರದ 24 ವರ್ಷದ ಯುವಕ. ರೋಗಿ-419 ರ ಸಂಪರ್ಕ.
- ರೋಗಿ-442: ಮಂಡ್ಯದ 47 ವರ್ಷದ ಪುರುಷ. ರೋಗಿ-171 ಮತ್ತು 371ರ ಸಂಪರ್ಕ.
- ರೋಗಿ-443: ಮಂಡ್ಯದ ಮಳವಳ್ಳಿಯ 28 ವರ್ಷದ ಯುವತಿ. ರೋಗಿ-179 ರ ಸಂಪರ್ಕ.