ETV Bharat / city

ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಮೆದುಳು ಜ್ವರಕ್ಕೆ ಸಾವಿರಾರು ಮಂದಿ ಬಲಿ - ಏನಿದು ಮೆದುಳು ಜ್ವರ

ಇತ್ತೀಚಿನ ದಿನಗಳಲ್ಲಿ ಅನೇಕರು ಮೆದುಳು ಜ್ವರದ ಸಮಸ್ಯೆ ಎದುರಿಸುತ್ತಿದ್ದು, ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಮೆದುಳು ಜ್ವರ ಅಂದ್ರೆ ಒಂದು ರೀತಿಯ ಮೆದುಳಿನ ಸೋಂಕು. ಪ್ರತಿವರ್ಷ ಈ ಮೆದುಳು ಸೋಂಕಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ ವಯಸ್ಕರು ಬಲಿಯಾಗುತ್ತಿದ್ದಾರೆ.

brain fever
brain fever
author img

By

Published : Feb 22, 2021, 7:33 AM IST

ಬೆಂಗಳೂರು: ಬದಲಾಗುತ್ತಿರುವ ವಾತಾವರಣ ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಹಲವಾರು ರೋಗಗಳು ನಮ್ಮನ್ನು ಆವರಿಸುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅನೇಕರು ಮೆದುಳು ಜ್ವರದ ಸಮಸ್ಯೆ ಎದುರಿಸುತ್ತಿದ್ದು, ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.

ಏನಿದು ಮೆದುಳು ಜ್ವರ?

ಮೆದುಳು ಜ್ವರ ಅಂದ್ರೆ ಒಂದು ರೀತಿಯ ಮೆದುಳಿನ ಸೋಂಕು. ಪ್ರತಿವರ್ಷ ಈ ಮೆದುಳು ಸೋಂಕಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ ವಯಸ್ಕರು ಬಲಿಯಾಗುತ್ತಿದ್ದಾರೆ. ಅಂದರೆ ಪ್ರತಿ ನಿಮಿಷಕ್ಕೆ ಒಬ್ಬ ವ್ಯಕ್ತಿಯು ಮೆದುಳು ಸೋಂಕಿಗೆ ತುತ್ತಾಗುತ್ತಿದ್ದಾನೆ. ಈ ಸೋಂಕಿನಿಂದ ಗುಣವಾದವರಿಗೆ ಅಪಸ್ಮಾರ ಅಂದರೆ ಎಪಿಲೆಪ್ಸಿ, ಅತೀವ ಸುಸ್ತು, ಮಾನಸಿಕ ತೊಂದರೆಗಳು, ಮರೆವಿನ ತೊಂದರೆಗಳು ಕಾಡುತ್ತವೆ.

ಜಾಗತಿಕ ಮಟ್ಟದಲ್ಲೂ ಕಾಡುತ್ತಿದೆ ಮೆದುಳು ಜ್ವರ:

ತೀವ್ರತರನಾದ ಮೆದುಳು ಜ್ವರ ಅಥವಾ ಉರಿಯೂತದ ಲಕ್ಷಣವು ಭಾರತವನ್ನೂ ಒಳಗೊಂಡಂತೆ ಜಾಗತಿಕವಾಗಿ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಒಂದು ದೊಡ್ಡ ಸವಾಲಾಗಿ ಮುಂದುವರಿಯುತ್ತಿದೆ. ಈ ಸೋಂಕನ್ನು ಶೀಘ್ರವಾಗಿ ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡುವುದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಬಹುದು.

ಪ್ರತಿ ವರ್ಷವೂ ಭಾರತದಲ್ಲಿ ಸಾವಿರ ರೋಗಿಗಳು ಮೆದುಳು ಜ್ವರ ಪೀಡಿತರಾಗುತ್ತಿದ್ದಾರೆ ಎಂದು ರಾಷ್ಟ್ರೀಯ ವೆಕ್ಟರ್ ಬೋರ್ನ್ ಕಾಯಿಲೆಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ವರದಿಯಾಗಿದೆ. ಹಾಗೆಯೇ ಪ್ರತಿ 250 ಮೆದುಳು ಜ್ವರದ ಸೋಂಕಿನಿಂದ ದಾಖಲಾದ ಪ್ರಕರಣಗಳಲ್ಲಿ 1 ಸಾವು ಸಂಭವಿಸುತ್ತಿದೆ.

2018ರಲ್ಲಿ ವರದಿಯಾದ ಪ್ರಕಾರ, 10,485 ಮೆದುಳು ಜ್ವರದ ಪ್ರಕರಣಗಳಲ್ಲಿ ಒಟ್ಟಾರೆ 632 ಮಂದಿ ಸಾವನ್ನಪ್ಪಿದ್ದಾರೆ. ದಾಖಲಾದ ಪ್ರಕರಣಗಳ ಮಾರಣಾಂತಿಕ ಪ್ರಮಾಣ ಶೇಕಡಾ 6ರಷ್ಟು ಇದೆ. ಈ ಮೆದುಳಿನ ಉರಿಯೂತ ಅಥವಾ ಜ್ವರದ ಪ್ರಕರಣಗಳು ಪ್ರಮುಖವಾಗಿ ಅಸ್ಸಾಂ, ಬಿಹಾರ, ಜಾರ್ಖಂಡ್, ಕರ್ನಾಟಕ, ಮಣಿಪುರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಲ್ಲಿ ದಾಖಲಾಗಿದೆ.

ಒಂದು ಅಂದಾಜಿನ ಪ್ರಕಾರ ಕನಿಷ್ಠ 50,000 ದಿಂದ 1,75,000 ದಷ್ಟು ಪ್ರಕರಣಗಳಲ್ಲಿ ಪ್ರತಿವರ್ಷ ಹತ್ತರಿಂದ ಹದಿನೈದು ಸಾವಿರ ರೋಗಿಗಳು ಮೃತಪಡುತ್ತಿದ್ದಾರೆ. 2008 ರಿಂದ 2014ರ ಮಧ್ಯದಲ್ಲಿ ಕೇವಲ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ 44,000 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, 6,000 ಸಾವು ಉಂಟಾಗಿರುವ ಕುರಿತು ವರದಿಯಾಗಿದೆ. 2016ರಲ್ಲಿ ಮೆದುಳು ಜ್ವರದ ಪ್ರಕರಣಗಳು ಹೆಚ್ಚಾಗಿದ್ದು, ಗೋರಖಪುರ ಒಂದರಲ್ಲೇ 12ಕ್ಕೂ ಹೆಚ್ಚು ಮಕ್ಕಳು ಒಂದೇ ಆಸ್ಪತ್ರೆಯಲ್ಲಿ ನಿಧನ ಹೊಂದಿದ ವಿಷಯ ವರದಿಯಾಗಿದೆ.

ಇತ್ತೀಚೆಗೆ ಮೆದುಳು ಸೋಂಕು ಅಥವಾ ಮೆದುಳು ಜ್ವರದ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಕಾರಣ ಉತ್ತರಪ್ರದೇಶ ಮತ್ತು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಕಾಯಿಲೆಯನ್ನು ಸಮಯೋಚಿತ ಹಾಗೂ ನಿಖರವಾಗಿ ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಸುಧಾರಿತ ಫಲಿತಾಂಶಗಳನ್ನು ಕಾಣಬಹುದಾಗಿದೆ. ಜೊತೆಗೆ ಹೊಸ ಹೊಸ ಸೂಕ್ಷ್ಮಾಣು ಜೀವಿಗಳು ಕಂಡು ಬರುತ್ತಿರುವುದರಿಂದ ಒಂದು ಮಾದರಿ ನಿರ್ವಹಣೆ ಮತ್ತು ಆರೈಕೆ ಪದ್ಧತಿಯನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗುತ್ತದೆ.

ಇಂತಹ ಒಂದು ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ನಿಲ್ಲುತ್ತದೆ. ಕರ್ನಾಟಕವು ಜಪಾನೀಸ್ ಮೆದುಳು ಜ್ವರವನ್ನು ಯಶಸ್ವಿಯಾಗಿ ತನ್ನ ಪರಿಣಾಮಕಾರಿ ಲಸಿಕಾ ಕಾರ್ಯಕ್ರಮದಿಂದ ತಡೆಗಟ್ಟಿ ನಿಯಂತ್ರಿಸುವಲ್ಲಿ ಸಫಲವಾಗಿದೆ. ನಿಮ್ಹಾನ್ಸ್ ಸಂಸ್ಥೆಯು ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.