ETV Bharat / city

ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ರೆ ಹುಷಾರ್​- ನಿಮ್ಮನ್ನು ಎಚ್ಚರಿಸಲು ಬಂತು ತಂತ್ರಾಂಶ! ವಿಡಿಯೋ - new social distance software news

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಪೊಲೀಸರು ಪದೇ ಪದೇ ಮನವಿ ಮಾಡುತ್ತಿದ್ದರೂ ಕೆಲ‌ ಪ್ರದೇಶಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಕೆಲವರು ಓಡಾಡುತ್ತಲೇ ಇದ್ದಾರೆ. ಇಂತವರನ್ನು ಕುಳಿತ ಜಾಗದಲ್ಲಿಯೇ ವೀಕ್ಷಿಸುವಂತಹ ತಂತ್ರಾಂಶವೊಂದನ್ನು ದೀವಿಯಾ ಸಾಫ್ಟ್​​ವೇರ್ ಕಂಪನಿಯ ಸಹ ಸಂಸ್ಥಾಪಕ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದವರನ್ನು ಸೂಚಿಸುತ್ತಿರುವ ತಂತ್ರಾಂಶ

author img

By

Published : Apr 21, 2020, 5:30 PM IST

Updated : Apr 22, 2020, 1:40 PM IST

ಬೆಂಗಳೂರು: ಕೊರೊನಾ ವೈರಸ್​ಗೆ ಇನ್ನೂ ಮದ್ದು ಕಂಡು ಹಿಡಿದಿಲ್ಲ. ಹಾಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಸದ್ಯದ ಮಟ್ಟಿಗೆ ದೊಡ್ಡ ಔಷಧಿಯಾಗಿದೆ. ಇದೀಗ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಗರದಲ್ಲಿ ಪೊಲೀಸರ ಕಣ್ತಪ್ಪಿಸಿ ಓಡಾಡುವವರನ್ನು ಕುಳಿತ ಜಾಗದದಿಂದಲೇ ವೀಕ್ಷಿಸುವಂತಹ ಹೊಸ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದವರನ್ನು ಸೂಚಿಸುತ್ತಿರುವ ತಂತ್ರಾಂಶ

ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಿ ಎಂದು ಪೊಲೀಸರು ಪದೇ ಪದೇ ಮನವಿ ಮಾಡುತ್ತಿದ್ದರೂ ಕೆಲ‌ವರು ಮಾತು ಕೇಳುತ್ತಿಲ್ಲ. ಇಂತವರನ್ನು ಕುಳಿತ ಜಾಗದಿಂದಲೇ ವೀಕ್ಷಿಸುವಂತೆ ಖಾಸಗಿ ಕಂಪನಿಯೊಂದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹೊಸ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದೆ.

ದೀವಿಯಾ ಸಾಫ್ಟ್​ವೇರ್ ಕಂಪನಿಯ ಸಹ ಸಂಸ್ಥಾಪಕ ಅಪೂರ್ವ್ ಅಂಕದ ಹಾಗೂ ಅವರ ತಂಡ ಈ ತಂತ್ರಾಂಶವನ್ನು ಕಂಡುಹಿಡಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳದವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ನಗರ ಪೊಲೀಸ್ ವತಿಯಿಂದ ನಗರದಲ್ಲಿ 700 ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಿದ್ದು, ಕಂಟ್ರೋಲ್ ರೂಮ್​ ಮೂಲಕ ಜನರ ಚಲನವಲನ ಗಮನಿಸಬಹುದಾಗಿದೆ.

ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶವನ್ನು ವಿಡಿಯೋ ದಾಖಲಿಸುವ ಪ್ರಮುಖ ಸರ್ವರ್​ನ ಹಾರ್ಡ್ ಡಿಸ್ಕ್​ನಲ್ಲಿ ಅಳವಡಿಸಿದರೆ ಸುಲಭವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಓಡಾಡುವವರನ್ನು ಪತ್ತೆ ಹಚ್ಚಬಹುದಾಗಿದೆ. ಒಂದು ವೇಳೆ ಸಾಮಾಜಿಕ ಅಂತರ ಇಲ್ಲದಿದ್ದರೆ ಕೆಂಪು ಬಣ್ಣ, ಎಲ್ಲವೂ ಸರಿಯಿದ್ರೆ ಹಸಿರು ಬಣ್ಣದಲ್ಲಿ ಎಚ್ಚರಿಸುವ ಕೆಲಸವನ್ನು ಈ ತಂತ್ರಾಂಶ ಮಾಡಲಿದೆ.

ತಂತ್ರಜ್ಞಾನದ ಮೂಲಕ ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಿಗೆ ಧ್ವನಿವರ್ಧಕ ಅಳವಡಿಸಿದರೆ ಗುಂಪಾಗಿ ಓಡಾಡುವ ಜನರನ್ನು ಅಲಾರಾಂ ಮೂಲಕ ಎಚ್ಚರಿಸುವ ಕೆಲಸ ಮಾಡಬಹುದು. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಪಾಡದ ವ್ಯಕ್ತಿಯನ್ನು‌ ಗುರುತಿಸಿ ಅವರನ್ನು ಎಚ್ಚರಿಸುವ ಕೆಲಸ ಮಾಡಬಹುದಾಗಿದೆ‌. ಜೊತೆಗೆ ಅಪರಾಧ ಪ್ರಕರಣಗಳು, ಸಂಚಾರಿ ನಿಯಮ ಉಲ್ಲಂಘಿಸದಂತೆಯೂ ಸಹ ತಡೆಯಬಹುದಾಗಿದೆ.

ಇನ್ನು, ಸಿಎಸ್​ಆರ್ ಮೇರೆಗೆ ಈ ತಂತ್ರಾಂಶವನ್ನು ಪೊಲೀಸ್ ಇಲಾಖೆಗೆ ನೀಡಲು ಸಿದ್ಧವಿದ್ದೇನೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅಪೂರ್ವ್ 'ಈಟಿವಿ ಭಾರತ' ಕ್ಕೆ ತಿಳಿಸಿದ್ದಾರೆ.

Last Updated : Apr 22, 2020, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.