ETV Bharat / city

ಬಿಎಸ್​ವೈ ಸಂಪುಟದಲ್ಲಿ ಈ 11 ಜಿಲ್ಲೆಗಳಿಗೆ ಸಿಗಲಿಲ್ಲ ಅವಕಾಶ.. ಬೊಮ್ಮಾಯಿ ಕ್ಯಾಬಿನೆಟ್​​ನಲ್ಲಾದ್ರೂ ಸಿಗುತ್ತಾ ಚಾನ್ಸ್? - ಬೊಮ್ಮಾಯಿ ಸಂಪುಟ

ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಸಿಗದ 11 ಜಿಲ್ಲೆಗಳ ಶಾಸಕರಿಗೆ ಬೊಮ್ಮಾಯಿ ಸಂಪುಟದಲ್ಲಿ ಆದ್ಯತೆ ಸಿಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಆಯಾ ಜಿಲ್ಲೆಗಳ ಶಾಸಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

cm
cm
author img

By

Published : Aug 3, 2021, 1:27 PM IST

ಬೆಂಗಳೂರು: ರಾಜ್ಯದ 31 ಜಿಲ್ಲೆಗಳಲ್ಲಿ 11 ಜಿಲ್ಲೆಗಳಿಗೆ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈಗ ಬೊಮ್ಮಾಯಿ ಪ್ರಾದೇಶಿಕ ಸಮತೋಲನ ಕಾಯ್ದುಕೊಂಡು ಸಂಪುಟ ರಚಿಸುವ ಹೇಳಿಕೆ ನೀಡಿರುವುದರಿಂದ ಸಚಿವ ಸ್ಥಾನ ವಂಚಿತ ಜಿಲ್ಲೆಗಳ ಶಾಸಕರಲ್ಲಿ ಆಕಾಂಕ್ಷೆ ಹೆಚ್ಚಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿ 32 ಸಚಿವರಿದ್ದರೂ 11 ಜಿಲ್ಲೆಗಳಿಗೆ ಅವಕಾಶ ಸಿಕ್ಕಿರಲಿಲ್ಲ. ಬಳ್ಳಾರಿ, ವಿಜಯಪುರ, ಚಾಮರಾಜನಗರ, ದಾವಣಗೆರೆ, ಕಲಬುರಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಯಚೂರು, ಯಾದಗಿರಿ ಜಿಲ್ಲೆಗಳಿಂದ ಯಾರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಚಿಕ್ಕಮಗಳೂರು ಮತ್ತು ಕೋಲಾರಕ್ಕೆ ಮೊದಲು ಅವಕಾಶ ಕೊಟ್ಟು ನಂತರ ಸಿ.ಟಿ ರವಿ ಮತ್ತು ಹೆಚ್. ನಾಗೇಶ್ ರಾಜೀನಾಮೆಯಿಂದ ಆ ಜಿಲ್ಲೆಗಳು ಅವಕಾಶ ಕಳೆದುಕೊಂಡಿದ್ದವು. ಆದರೂ ಬಿಎಸ್​ವೈ ಎರಡು ವರ್ಷದ ಅವಧಿಯಲ್ಲಿ 11 ಜಿಲ್ಲೆಗಳಿಗೆ ಅವಕಾಶ ಸಿಕ್ಕಿರಲಿಲ್ಲ.

ಈಗ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಗೆ ಮುಂದಾಗಿದ್ದು, ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಈ 11 ಜಿಲ್ಲೆಗಳ ಬಿಜೆಪಿ ಶಾಸಕರಿದ್ದಾರೆ. ಪ್ರಾದೇಶಿಕ ಅಸಮತೋಲನ ಇಲ್ಲದಂತೆ ಸಮತೋಲಿತ ಸಂಪುಟ ರಚನೆಯ ಹೇಳಿಕೆ ನೀಡಿರುವುದರಿಂದ ಈ ಬಾರಿ ಹೆಚ್ಚಿನ ಜಿಲ್ಲೆಗಳಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

(ಇಂದು ರಾತ್ರಿ ನೂತನ ಸಚಿವರ ಪಟ್ಟಿ ಪ್ರಕಟ... ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಬೊಮ್ಮಾಯಿ)

ಅವಕಾಶ ವಂಚಿತ ಜಿಲ್ಲೆಗಳ ಆಕಾಂಕ್ಷಿಗಳು:

ಬಳ್ಳಾರಿಯಿಂದ ಸೋಮಶೇಖರ ರೆಡ್ಡಿ, ವಿಜಯಪುರದಿಂದ ಬಸನಗೌಡ ಪಾಟೀಲ್ ಯತ್ನಾಳ್, ಚಾಮರಾಜನಗರದಿಂದ ನಿರಂಜನಕುಮಾರ್, ದಾವಣಗೆರೆಯಿಂದ ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಕಲಬುರಗಿಯಿಂದ ದತ್ತಾತ್ರೇಯ ಪಾಟೀಲ್ ರೇವೂರ, ರಾಜ್​ಕುಮಾರ್ ಪಾಟೀಲ್ ತೆಲ್ಕೂರ, ಹಾಸನದಿಂದ ಪ್ರೀತಂಗೌಡ, ಕೊಪ್ಪಳದಿಂದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಮೈಸೂರಿನಿಂದ ಎಸ್.ಎ.ರಾಮದಾಸ್, ರಾಯಚೂರಿನಿಂದ ಶಿವನಗೌಡ ನಾಯಕ್ ಮತ್ತು ಯಾದಗಿರಿಯಿಂದ ರಾಜುಗೌಡ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಆ ಜಿಲ್ಲೆಗೂ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಕ್ಷೇತ್ರದ ಜನರೂ ಇದ್ದಾರೆ.

ಇದರ ಜೊತೆ ಚಿಕ್ಕಮಗಳೂರಿನಿಂದ ಸಿಟಿ ರವಿ ರಾಜೀನಾಮೆ ನೀಡಿದ್ದು, ಆ ಜಾಗಕ್ಕೆ ಎಂ.ಪಿ.ಕುಮಾರಸ್ವಾಮಿ, ಕಡೂರು ಶಾಸಕ ಪ್ರಕಾಶ್ ಆಕಾಂಕ್ಷಿಗಳಾಗಿದ್ದಾರೆ. ಮತ್ತು ಕೋಲಾರದಿಂದ ನಾಗೇಶ್ ರಾಜೀನಾಮೆ ನೀಡಿದ್ದು ಮತ್ತೊಮ್ಮೆ ಸಂಪುಟದಲ್ಲಿ ಅವಕಾಶ ಪಡೆಯುವ ಆಕಾಂಕ್ಷಿಗಳಾಗಿದ್ದಾರೆ.

ಬೆಂಗಳೂರು ನಗರಕ್ಕೆ ಸಂಪುಟದಲ್ಲಿ ಸಿಂಹ ಪಾಲು ಸಿಕ್ಕಿತ್ತು. ಬೆಂಗಳೂರು ನಗರಕ್ಕೆ 8 ಸ್ಥಾನ ಮತ್ತು ಬೆಳಗಾವಿ ಜಿಲ್ಲೆಗೆ ಎರಡನೇ ಹೆಚ್ಚು ಸ್ಥಾನವಾಗಿ ನಾಲ್ಕು ಜನರಿಗೆ ಅವಕಾಶ ನೀಡಲಾಗಿತ್ತು. ಹಾವೇರಿ ಜಿಲ್ಲೆಗೆ ಮೂರು, ಶಿವಮೊಗ್ಗ ಮತ್ತು ಬಾಗಲಕೋಟೆ ಜಿಲ್ಲೆಗೆ ತಲಾ ಎರಡು ಸ್ಥಾನ ನೀಡಿದ್ದು, ಈ ಬಾರಿ ಯಾವ ರೀತಿಯ ಹಂಚಿಕೆ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

(ಹೊಸ ಸಂಪುಟದಲ್ಲಿ ಡಿಸಿಎಂ ಸ್ಥಾನದ ಚರ್ಚೆ: ಹೊಸಬರಿಗೆ ಮಣೆ ಹಾಕುವುದೇ ಹೈಕಮಾಂಡ್?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.