ETV Bharat / city

ಏನೇ ಆದರೂ ಹೆದ್ರಲ್ಲ, ಬೇಕಿದ್ರೆ ಕೇಸ್ ಹಾಕಿ ಅರೆಸ್ಟ್ ಮಾಡ್ಲಿ, ಪಾದಯಾತ್ರೆ ನಡೆದೇ ನಡೆಯುತ್ತೆ: ಡಿಕೆಶಿ ಸವಾಲ್​ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ಎಲೆಕ್ಷನ್​ ಮಾಡಬಹುದು, ಇವರು ಬಹಿರಂಗ ಸಭೆ ಮಾಡಬಹುದು, ಎಲ್ಲಾ ಕೇಂದ್ರ ಸರ್ಕಾರದ ಸಚಿವರನ್ನ ಕರೆಸಿ ಜನಾಶೀರ್ವಾದ ಸಭೆ ಮಾಡಬಹುದು. ಪ್ರಧಾನ ಮಂತ್ರಿ ಎಲೆಕ್ಷನ್ ರ್ಯಾಲಿ ಮಾಡಬಹುದು, ನಾವು ನೀರಿಗೋಸ್ಕರ ಹೋರಾಟ ಮಾಡುತ್ತಿದ್ದೇವೆ, ರಾಜ್ಯದ ಜನತೆಗಾಗಿ ಹೋರಾಟ ಮಾಡುತ್ತಿದ್ದೇವೆ, ನಮ್ಮ ಹಕ್ಕು, ನಮ್ಮ ನೀರು, ಇದಕ್ಕಾಗಿ ಹೋರಾಟ ಮಾಡೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿದ್ದಾರೆ.

KPCC president DK Shivkumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​
author img

By

Published : Jan 5, 2022, 6:02 AM IST

Updated : Jan 5, 2022, 1:29 PM IST

ಬೆಂಗಳೂರು: ನಾವು ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ, ಬಿಜೆಪಿಯವರ ರೀತಿ ಜನಾಶೀರ್ವಾದ ಯಾತ್ರೆಯಲ್ಲ. ನಾವೂ ಏನೇ ಆದರೂ ಪಾದಯಾತ್ರೆ ಮಾಡೇ ತೀರುತ್ತೇವೆ. ಬೇಕಾದರೆ ಅವರು ನಮ್ಮನ್ನ ಅರೆಸ್ಟ್​ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಂಗಳವಾರ ಸವಾಲು ಹಾಕಿದ್ದಾರೆ.

ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹಿರಿಯ ನಾಯಕರ ಜತೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಮಾಲೋಚನೆ ನಡೆಸಿದರು.

ಮೇಕೆದಾಟು ಪಾದಯಾತ್ರೆ ನಡೆದೇ ನಡೆಯುತ್ತೆ: ಡಿಕೆ ಶಿವಕುಮಾರ್​

ನಂತರ ಮಾತನಾಡಿದ ಡಿಕೆ ಶಿವಕುಮಾರ್, ಬೆಳಗ್ಗೆಯಿಂದ ಪಾದಯಾತ್ರೆ ಕುರಿತು ಚರ್ಚೆ ಮಾಡಿದ್ದೇವೆ. 100 ವೈದ್ಯರು,10 ಆ್ಯಂಬುಲೆನ್ಸ್ ತಯಾರಿ ಮಾಡಿಕೊಳ್ಳಲಾಗಿದೆ. ಸಂಪೂರ್ಣ ಕೋವಿಡ್ ನಿಯಮ ಪಾಲನೆಗೆ ಮುಂದಾಗಿದ್ದೇವೆ. ರಾಜ್ಯದ ಎಲ್ಲ ಕಡೆ ಜನ ಪಾಲ್ಗೊಳ್ಳುತ್ತಿದ್ದಾರೆ. ಎರಡನೇ ದಿನ ಮೈಸೂರು ಜಿಲ್ಕೆಯವರು ಬರ್ತಾರೆ. 5ನೇ ದಿನ ಮಂಡ್ಯ, ಹಾಸನದವರು ಬರ್ತಾರೆ. ನಂತರ ತುಮಕೂರಿನವರು ಬಂದು ಪಾದಯಾತ್ರೆಯಲ್ಲಿ ಭಾಗಿಯಾಗ್ತಾರೆ. ಜನವರಿ 19ರವರೆಗೆ ಈ ಪಾದಯಾತ್ರೆ ನಡೆಯಲಿದೆ. 1800 ಜನ ಪಾದಯಾತ್ರೆಗೆ ನೋಂದಣಿ ಮಾಡಿದ್ದಾರೆ ಎಂದರು.

congress Mekedatu padayatra
ಮೇಕೆದಾಟು ಪಾದಯಾತ್ರೆ ಕುರಿತು ಕಾಂಗ್ರೆಸ್​ ನಾಯಕರ ಸಮಾಲೋಚನೆ ಸಭೆ

ನಮ್ಮ ಹೋರಾಟ ನೀರಿಗಾಗಿ:

ಎಲೆಕ್ಷನ್​ ಮಾಡಬಹುದು ಇವರು, ಬಹಿರಂಗ ಸಭೆಯನ್ನೂ ಮಾಡಬಹುದು, ಎಲ್ಲ ಕೇಂದ್ರ ಸರ್ಕಾರದ ಸಚಿವರನ್ನ ಕರೆಸಿ ಜನಾಶೀರ್ವಾದ ಸಭೆ ಮಾಡಬಹುದು. ಪ್ರಧಾನ ಮಂತ್ರಿ ಎಲೆಕ್ಷನ್ ರ್ಯಾಲಿ ಮಾಡಬಹುದು, ನಾವು ನೀರಿಗೋಸ್ಕರ ಹೋರಾಟ ಮಾಡುತ್ತಿದ್ದೇವೆ, ರಾಜ್ಯದ ಜನತೆಗಾಗಿ ಹೋರಾಟ ಮಾಡುತ್ತಿದ್ದೇವೆ, ನಮ್ಮ ಹಕ್ಕು, ನಮ್ಮ ನೀರು, ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ, ನಮಗೆ ಮಾತ್ರ ಕೊರೊನಾ ಬರುತ್ತದೆಯೇ? ಯಾರು ಏನೇ ಅಡಚಣೆ ಮಾಡಿದರೂ ಈ ಪಾದಯಾತ್ರೆ ನಡೆಯುತ್ತದೆ, ಯಾರನ್ನ ಬೇಕಾದರೂ ಅರೆಸ್ಟ್​ ಮಾಡಿಕೊಳ್ಳಲಿ, ಏನು ಬೇಕಾದರೂ ಮಾಡಲಿ, ಇದಕ್ಕೆಲ್ಲಾ ನಾವು ಹೆದರಲ್ಲ ಎಂದು ಸವಾಲೆಸೆಸಿದ್ದಾರೆ.

ಇನ್ನೂ ಸ್ವತಃ ಸಿಎಂ ಬೊಮ್ಮಾಯಿ ಅವರೇ ಒಂದು ಕಾರ್ಯಕ್ರಮದಲ್ಲಿ ಸಿಕ್ಕಿದ್ದರು. ಆಸ್ಪತ್ರೆಗಳಿಗೆ ನಾನೇ ಹೇಳಿದ್ದೇನೆ ಅಂತ ಹೇಳಿದ್ದಾರೆ. ಪಾಪ ಅವರು ಯಾಕೆ ಅವಕಾಶ ಕೊಡಲ್ಲ ಎಂದು ಹೇಳ್ತಾರೆ. ಜೊತೆಗೆ ನಾನು ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ. ಎಲ್ಲ ರೀತಿಯಲ್ಲಿ ಸಹಕಾರ ಕೊಡ್ತೀವಿ ಅಂತ ಹೇಳಿದ್ದಾರೆ. ಯಾರೋ ಕೆಲವೊಬ್ಬ ಸಚಿವರು ತಡೆಯುವ ಕೆಲಸ ಮಾಡ್ತಿತಿದ್ದಾರೆ ಎಂದು ಪರೋಕ್ಷವಾಗಿ ಅಶ್ವತ್ಥ ನಾರಾಯಣ ವಿರುದ್ಧ ಕಿಡಿ ಕಾರಿದರು.

ಕುತ್ತಿಗೆ ಕೊಯ್ದು ಕುತಂತ್ರ ರಾಜಕಾರಣ ಮಾಡ್ತಾರೆ ಎಂಬ ಅಶ್ವತ್ಥ ನಾರಾಯಣ್ ಹೇಳಿಕೆ ವಿಚಾರಕ್ಕೆ, ಬೇರೆ ಟೈಂನಲ್ಲಿ ಉತ್ತರ ಕೊಡೋಣ. ಬಹಳ ಸಂತೋಷ. ಅವರು ನಮ್ ಬ್ರದರ್ ಅಲ್ವಾ , he is Also My Brother. ಅಶ್ವತ್ಥ ನಾರಾಯಣ್ ಅಣ್ಣಾ ಎಂದು ವ್ಯಂಗ್ಯವಾಡಿದರು.

ಈ ಸಮಾಲೋಚನಾ ಸಭೆಯಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಧೃವನಾರಾಯಣ್, ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ:ಅವರು ರಾಮನಗರಕ್ಕೆ ಕಳಂಕ, ಕುತಂತ್ರದ ಮೂಲಕ ಬೆಳೆದವರು: ಡಿಕೆ ಬ್ರದರ್ಸ್​ ವಿರುದ್ಧ ಅಶ್ವತ್ಥ್ ನಾರಾಯಣ್ ವಾಗ್ದಾಳಿ

Last Updated : Jan 5, 2022, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.