ETV Bharat / city

ಚಾಮರಾಜಪೇಟೆ ಚಂದ್ರು ಹತ್ಯೆ ಪ್ರಕರಣ.. ನ್ಯಾಯಾಂಗ ತನಿಖೆಗೆ ಉಗ್ರಪ್ಪ ಆಗ್ರಹ

ಯುವಕ ಚಂದ್ರು ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರ‌ ಹೇಳಿಕೆ ಸರಿಯಲ್ಲ. ಗೃಹ ಸಚಿವರು, ರವಿಕುಮಾರ್ ತಮ್ಮ ಮನಸ್ಸಿಗೆ ತೋಚಿದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್​ ಮುಖಂಡ ಉಗ್ರಪ್ಪ ಆಗ್ರಹಿಸಿದ್ದಾರೆ.

there-will-be-a-judicial-probe-into-the-murder-of-chandru-says-ugrappa
ಚಾಮರಾಜಪೇಟೆ ಚಂದ್ರು ಹತ್ಯೆಯ ನ್ಯಾಯಾಂಗ ತನಿಖೆ ಆಗಲಿ: ಉಗ್ರಪ್ಪ
author img

By

Published : Apr 10, 2022, 9:07 AM IST

ಬೆಂಗಳೂರು: ರವಿಗೆ ಕಾಣದ್ದು ಕವಿ ಕಂಡ ಅನ್ನುತ್ತೇವೆ. ಹಾಗೆ ಪೊಲೀಸ್ ಆಯುಕ್ತರಿಗೆ ಕಾಣದ್ದು ಬಿಜೆಪಿ ಎಂಎಲ್​ಸಿ ರವಿಕುಮಾರ್ ಗೆ ಕಂಡಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಲೇವಡಿ ಮಾಡಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್​ ಎಂ ರೇವಣ್ಣ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯುವಕ ಚಂದ್ರು ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರ‌ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್​ ಸದಸ್ಯ ರವಿಕುಮಾರ್ ತಮ್ಮ ಮನಸ್ಸಿಗೆ ತೋಚಿದ ರೀತಿ ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರು ಮೊದಲಿಗೆ ಬೇರೆ ಹೇಳಿಕೆ ನೀಡಿದ್ದರು. ಬಳಿಕ ಚುಚ್ಚಿ ಚುಚ್ಚಿ ಕೊಂದಿದ್ದಾರೆಂದು ಹೇಳಿದ್ದರು. ನಂತರ ಆಕ್ಸಿಡೆಂಟ್ ನಿಂದ ಹತ್ಯೆ ಎಂಬ ಗೊಂದಲದ ಹೇಳಿಕೆ ಕೊಟ್ಟಿದ್ದರು. ಬಳಿಕ ಮೃತ ಚಂದ್ರು ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರವಿಕುಮಾರ್ ಭೇಟಿ ನೀಡಿದ್ದು, ಆಗ ಈ ವಿವಾದಗಳು ಹುಟ್ಟಿಕೊಂಡಿವೆ ಎಂದು ಉಗ್ರಪ್ಪ ಆರೋಪಿಸಿದರು.

ಪೊಲೀಸ್ ಆಯುಕ್ತರ ಹೇಳಿಕೆ ಸುಳ್ಳು ಎಂದು ರವಿಕುಮಾರ್ ಆಯುಕ್ತರ ವಿರುದ್ಧ ಮಾತನಾಡಿದ್ದಾರೆ. ಹಾಗಾದ್ರೆ ಗೃಹ ಸಚಿವರು ನಾಲಾಯಕ್ಕಾ? ಅವರು ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರು ಸರಿಯಾದ ನಿಲುವು ತೆಗೆದುಕೊಳ್ಳುತ್ತಿಲ್ಲ. ಇಂತಹ ಗೃಹ ಸಚಿವರ ಅವಶ್ಯಕತೆ ರಾಜ್ಯಕ್ಕಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಗೃಹ ಸಚಿವರನ್ನು ಕೆಳಗಿಳಿಸಬೇಕು. ತನಿಖೆ ಮಾಡುವವರು ಪೊಲೀಸರು. ಸಿ.ಟಿ. ರವಿ ಯಾವಾಗ ಪೊಲೀಸ್ ಆದರು. ರವಿಕುಮಾರ್ ಯಾವಾಗ ಪೊಲೀಸ್ ಆದರು ಎಂಬುದು ಗೊತ್ತಿಲ್ಲ. ಸಿ.ಟಿ.ರವಿ, ರವಿಕುಮಾರ್ ಅವರನ್ನು ಬಂಧಿಸಬೇಕು. ಇಲ್ಲಾ ಬಿಜೆಪಿ ನಿಲುವು ಸರಿಯಿದ್ದರೆ ಆಯುಕ್ತರದ್ದು ತಪ್ಪು. ಆಯುಕ್ತರು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು. ಜೆ ಜೆ ನಗರ ಠಾಣೆ ಪೊಲೀಸರ ವಿರುದ್ಧ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಉಗ್ರಪ್ಪ ಕಿಡಿಕಾರಿದರು.

ರಾಜ್ಯದ ಜನ ಇವತ್ತು ಆತಂಕದಲ್ಲಿದ್ದಾರೆ. ಪೊಲೀಸರನ್ನು ಅನುಮಾನದಿಂದ ನೋಡುವಂತಾಗಿದೆ. ಹಾಗಾಗಿ, ಈ ಕೂಡಲೇ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಕಮೀಷನರ್ ತಪ್ಪಿದ್ದರೆ ಅವರ ಮೇಲೆ ಕೇಸ್ ಹಾಕಿ. ಬಿಜೆಪಿಯವರದ್ದು ತಪ್ಪಿದ್ದರೆ ಅವರ ಮೇಲೆ ಕೇಸ್ ಹಾಕಿ. ಪ್ರಕರಣದಲ್ಲಿ ಯಾರ್ಯಾರು ಇದ್ದಾರೆ ಹೊರಬರಬೇಕು. ಸತ್ಯಾಸತ್ಯತೆ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಾಗಬೇಕು. ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಬಿಜೆಪಿಯವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪೊಲೀಸರು ಸಮಾಜ ಸ್ವಾಸ್ಥ್ಯ ಕಾಪಾಡಲು ಹೆಣಗುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ಈ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಅನ್ನೋದು ಹೊರಬಿದ್ದಿದೆ. ಚುನಾವಣೆ ದೃಷ್ಟಿಯಿಂದ ಇದೆಲ್ಲವನ್ನು ಮಾಡುತ್ತಿದ್ದಾರೆ. ಗೃಹ ಸಚಿವರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಚಂದ್ರು ಘಟನೆ ಬಗ್ಗೆಯೂ ಸರಿಯಾದ ಕ್ರಮ ಕೈಗೊಂಡಿಲ್ಲ. ದೂರು ಕೊಟ್ಟು 48 ಗಂಟೆಯಾದ್ರೂ ಕ್ರಮ ಜರುಗಿಸಿಲ್ಲ. ಒಂದೇ ಒಂದು ಎಫ್ ಐಆರ್ ದಾಖಲಿಸಿಲ್ಲ. ರಾಜ್ಯದ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಒಬ್ಬ ಎಂಎಲ್ ಸಿ ಆಯುಕ್ತರು ಸುಳ್ಳು ಹೇಳ್ತಿದ್ದಾರೆ ಅಂತಾರೆ. ಪೊಲೀಸ್ ಆಯುಕ್ತರ ಮೇಲೆಯೇ ಗೂಬೆ ಕೂರಿಸ್ತಾರೆ. ಇವರು ಸತ್ಯ ಹೇಳುತ್ತಿದ್ದಾರೆ ಎಂದು ಹೇಗೆ ನಂಬೋದು. ಹೀಗಾಗಿ ಇದರ ಮೇಲೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಓದಿ : ದೊಡ್ಡಬಳ್ಳಾಪುರ: ನೂತನ ಚೌಡೇಶ್ವರಿ ದೇವಾಲಯದ ಹುಂಡಿ ಒಡೆದು‌ ಹಣ ದೋಚಿದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.