ETV Bharat / city

ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಿಲ್ಲ: ಕೆಎಸ್​ಆರ್​​ಟಿಸಿ ಸ್ಪಷ್ಟನೆ - ಕೆಎಸ್​ಆರ್​​ಟಿಸಿ ಸ್ಪಷ್ಟನೆ

ಮಕ್ಕಳ ಟಿಕೆಟ್ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್​ಆರ್​​ಟಿಸಿ) ಸ್ಪಷ್ಟಪಡಿಸಿದೆ..

KSRTC
ಕೆಎಸ್​ಆರ್​​ಟಿಸಿ
author img

By

Published : May 15, 2022, 1:38 PM IST

ಬೆಂಗಳೂರು : ಕೆಎಸ್​ಆರ್​​ಟಿಸಿ ಬಸ್​​ನಲ್ಲಿ ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಕೆಲ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆ ಈ ಸಂಬಂಧ ಪ್ರಕಟಣೆ ಹೊರಡಿಸಿದೆ.‌

ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ. 6-12 ವರುಷದೊಳಗಿನ‌ ಮಕ್ಕಳಿಗೆ ಆಫ್ ಟಿಕೆಟ್, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪುಲ್ ಟಿಕೆಟ್ ದರವನ್ನು ವಿಧಿಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಮಕ್ಕಳು 4-5 ವರುಷ ಆಗಿದ್ದಾಗ, 6 ವರುಷವಾಗಿರುವ ಮಕ್ಕಳಂತೆ, ಅದೇ ರೀತಿ 11-12 ವರುಷದ ಮಕ್ಕಳು 13 ವರುಷದ ಮಕ್ಕಳಂತೆ ಕಾಣುವ ಸಂದರ್ಭಗಳಿವೆ.

ಈ ವೇಳೆ ಮಕ್ಕಳ ಪಾಲಕರು/ಪೋಷಕರು ಹಾಗೂ ಬಸ್​​ ಚಾಲನಾ ಸಿಬ್ಬಂದಿ ನಡುವೆ ಟಿಕೆಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿವೆ. ಇದನ್ನ ಮನಗಂಡು ಅಕ್ಟೋಬರ್ 2021ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಸಹ ಹೊರಡಿಸಲಾಗಿತ್ತು.‌ ಈ‌ ಬಗ್ಗೆ ಚಾಲನಾ ಸಿಬ್ಬಂದಿಗೂ ತಿಳುವಳಿಕೆ ನೀಡಲಾಗಿದೆ. ಹೀಗಾಗಿ, ಮಕ್ಕಳ ಟಿಕೆಟ್ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ. ‌

ಇದನ್ನೂ ಓದಿ: ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ 7 ಸಾವಿರಕ್ಕೂ ಹೆಚ್ಚು ಜನ ಟಿಕೆಟ್​ ರಹಿತ ಪ್ರಯಾಣ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.