ಬೆಂಗಳೂರು: ಕೊರೊನಾ, ಕಾಲರಾ ಭೀತಿ ಹಿನ್ನಲೆ ನಗರದ ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದನ್ನು ರದ್ದುಪಡಿಸಲಾಗಿದ್ದು, ಕಾರ್ಯಕ್ರಮ ನಡೆಸಿದರೆ ಹೋಟೆಲ್ ಕಲ್ಯಾಣ ಮಂಟಪಗಳ ಲೈಸೆನ್ಸ್ ರದ್ದು ಮಾಡುವುದಾಗಿ ವಲಯ ಆರೋಗ್ಯ ವೈದ್ಯಾಧಿಕಾರಿ ನೋಟಿಸ್ ಹೊರಡಿಸಿದ್ದಾರೆ.
ಆದ್ರೆ, ಬಿಬಿಎಂಪಿಯು ಈ ವೈದ್ಯಾಧಿಕಾರಿಗೆ ಇಂತಹ ಸೂಚನೆ ಹಾಗೂ ತಿಳುವಳಿಕೆ ನೀಡಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ ವೈದ್ಯಾಧಿಕಾರಿ (ಶಿವಾಜಿನಗರ) ಮೇಲ್ಕಂಡ ಪತ್ರವನ್ನು ಹಿಂಪಡೆದಿರುವುವಾಗಿ ಸ್ಪಷ್ಟೀಕರಿಸಿದ್ದಾರೆ. ಸಾರ್ವಜನಿಕರಲ್ಲಿ ಈ ಎಲ್ಲಾ ಗೊಂದಲಗಳು ಉಂಟಾಗಿರುವುದಕ್ಕೆ ವಿಶೇಷ ಆಯುಕ್ತರು (ಆರೋಗ್ಯ) ವಿಷಾದ ವ್ಯಕ್ತಪಡಿಸಿದ್ದಾರೆ.