ETV Bharat / city

ಪಂಚಮಸಾಲಿ ಪಾದಯಾತ್ರೆಗೆ ವೀರಶೈವ ಲಿಂಗಾಯತ ಸಮಾಜದ ಬೆಂಬಲವಿದೆ: ಶ್ರೀಶೈಲ ಜಗದ್ಗುರು - Panchamasaali hike

ಪಂಚಮಸಾಲಿ ಸಮಾಜ ಧಾರ್ಮಿಕ ಮುಖಂಡರನ್ನು ಮುಂದಿಟ್ಟುಕೊಂಡು 2ಎ ಮೀಸಲಾತಿಗೆ ಜಾಥಾ ಆರಂಭಿಸಿದೆ. ಇದಕ್ಕೆ ಪರ್ಯಾಯವಾಗಿ ವೀರಶೈವ ಲಿಂಗಾಯತ ಸಮುದಾಯ ಸಭೆ ನಡೆಸುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಪಂಚಮಸಾಲಿ ಕೂಡ ನಮ್ಮ ಸಮುದಾಯದ ಒಳಪಂಗಡ. ಪಂಚಮಸಾಲಿ ಪಾದಯಾತ್ರೆಗೆ ನಾವು ಬೆಂಬಲ ಕೊಡುತ್ತೇವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಶಿವಾಚಾರ್ಯ ಸ್ವಾಮೀಜಿ
ಶಿವಾಚಾರ್ಯ ಸ್ವಾಮೀಜಿ
author img

By

Published : Feb 13, 2021, 2:49 PM IST

ಬೆಂಗಳೂರು: ಪಂಚಮಸಾಲಿ ಸಮುದಾಯದ ಪಾದಯಾತ್ರೆಗೆ ಪರ್ಯಾಯವಾಗಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು ಸಭೆ ನಡೆಸುತ್ತಿಲ್ಲ. ನಮ್ಮ ಮಠಾಧೀಶರು ಪಂಚಮಸಾಲಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಅವರಿಗೆ ಬೆಂಬಲ ಕೊಡಲಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ವಿಜಯನಗರದ ಸುಜ್ಞಾನ ಮಂಟಪದಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟ ಸಭೆ

ವಿಜಯನಗರದ ಸುಜ್ಞಾನ ಮಂಟಪದಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶತಮಾನದಿಂದ ಯಾರ ಯಾರದ್ದೋ ತುಳಿತಕ್ಕೆ‌ ವೀರಶೈವ ಲಿಂಗಾಯತ ಸಮುದಾಯ ಸಿಕ್ಕಿದೆ. ಇನ್ನುಮುಂದೆ ಈ ಅನ್ಯಾಯ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಹಕ್ಕೊತ್ತಾಯ ಮಾಡಲಾಗಿದೆ. ಕಳೆದ ಬಾರಿ ಕಾಶಿಯ ಜಂಗಮವಾಡಿ ಮಠದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದಾಗ ನೇರವಾಗಿ ಅವರಿಗೆ ಮನವಿ ಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಮಠಕ್ಕೆ ಕರೆದು ಮನವಿ ಕೊಡುವುದು ಶಿಷ್ಟಾಚಾರ ಅಲ್ಲ ಎಂದು ಯಡಿಯೂರಪ್ಪ, ಸುರೇಶ್ ಅಂಗಡಿ ಹಾಗೂ ಇತರರು ಅಭಿಪ್ರಾಯಪಟ್ಟ ಕಾರಣ ಮನವಿ ಕೊಡಲು ಸಾಧ್ಯವಾಗಲಿಲ್ಲ. ನಂತರ ಕೊರೊನಾ ಬಂದ ಕಾರಣಕ್ಕೆ ವಿಳಂಬವಾಗಿ ಈಗ ಮತ್ತೆ ಈ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ ರಾಜ್ಯಗಳಲ್ಲಿ ವೀರಶೈವ ಲಿಂಗಾಯತರಿಗೆ ಮೀಸಲಾತಿ ಇದೆ. ಆದರೆ ಕರ್ನಾಟಕದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆ ನಮ್ಮ ಮುಂದಿದೆ. ಕೇಂದ್ರದ ಮೀಸಲಾತಿ ಪಟ್ಟಿ ಮತ್ತು ರಾಜ್ಯದ ಪಟ್ಟಿ ಸಮಾನವಾಗಿರಬೇಕು. ಆದರೆ ರಾಜ್ಯದ ಪಟ್ಟಿಯಲ್ಲಿ ಕೆಲ ಒಳ ಪಂಗಡಗಳು ಇವೆ. ಆದರೆ ಕೇಂದ್ರದ ಪಟ್ಟಿಯಲ್ಲಿ ಬಹಳ ವಿರಳವಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಸೌಲಭ್ಯದಿಂದ ಶೈಕ್ಷಣಿಕ, ಆರ್ಥಿಕವಾಗಿ ಅನ್ಯಾಯ ಅನುಭವಿಸುತ್ತಿರುವ ಎಲ್ಲಾ ಒಳ ಪಂಗಡಗಳಿಗೆ ನ್ಯಾಯ ಸಿಗಬೇಕು. ನಮ್ಮ ಸಮುದಾಯದ ಯುವಕರು ಮುಂದೆ ಉತ್ತಮ ಅವಕಾಶ ಪಡೆದುಕೊಳ್ಳಲು ಈ ಮನವಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಪಂಚಮಸಾಲಿ ಸಮಾಜ ಧಾರ್ಮಿಕ ಮುಖಂಡರನ್ನು ಮುಂದಿಟ್ಟುಕೊಂಡು 2ಎ ಮೀಸಲಾತಿಗೆ ಜಾಥಾ ಆರಂಭಿಸಿದೆ. ಇದಕ್ಕೆ ಪರ್ಯಾಯವಾಗಿ ನಮ್ಮ ಸಭೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ. ಪಂಚಮಸಾಲಿ ಕೂಡ ನಮ್ಮ ಸಮುದಾಯದ ಒಳಪಂಗಡ. ಹಾಗಾಗಿ ಅವರಿಗೆ ಪರ್ಯಾಯ ಎನ್ನುವ ಪ್ರಶ್ನೆಯೇ ಬರಲ್ಲ, ಅವರಿಗೆ ಒಳ್ಳೆಯದಾದಲ್ಲಿ ಮೊದಲು ಖುಷಿ ಪಡುವುದು ನಾವೇ. ಅವರ ಪಾದಯಾತ್ರೆಗೆ ನಾವು ಬೆಂಬಲ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ವೀರಶೈವ ಲಿಂಗಾಯತರಲ್ಲಿ ವೃತ್ತಿ ಆಧಾರಿತವಾಗಿ ಒಳಪಂಗಡಗಳು ಆಗಿವೆ, ಯಾವ ಕಾರಣಕ್ಕೆ ಅವರಿಗೆ ಆ ಹೆಸರು ಬಂದಿದೆಯೋ ಆ ವೃತ್ತಿಯನ್ನು ಈಗ ಯಾರೂ ಅವಲಂಬಿಸಿಲ್ಲ, ಎಲ್ಲರೂ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ವೃತ್ತಿ ಆಧಾರಿತ ಉಪ ಪಂಗಡಗಳನ್ನು ಪ್ರಮುಖ ಎಂದು ಪರಿಗಣಿಸಬೇಕಿಲ್ಲ, ಎಲ್ಲಾ ಒಳಪಂಗಡಗಳಿಗೂ ಮೀಸಲಾತಿ ಬೇಕು. ಹಾವನೂರು ವರದಿ ನಂತರ ನಮ್ಮ ಸಮಾಜವನ್ನು ಹರಿದು ಹಂಚಲು ಮುಂದೆ ಬಂದರು. ಅದರ ಕೆಟ್ಟ ಅನುಭವವನ್ನು ನಾವು ಅನುಭವಿಸುತ್ತಿದ್ದೇವೆ. ಇದನ್ನು ಇಲ್ಲಿಗೆ ‌ಇಲ್ಲಿಸಿ, ನಾವೆಲ್ಲರೂ ಒಂದಾಗಬೇಕು. ವಿಶ್ವವೇ ನಮ್ಮ ಬಂಧು ಎನ್ನಬೇಕು ಎಂದರು.

ಇನ್ನು ವೀರಶೈವ ಲಿಂಗಾಯತ ಪ್ರತ್ಯೇಕ ಎನ್ನುವ ವಾದ ಎದ್ದಿತ್ತು. ಆದರೆ ನಮ್ಮ ಜನರು, ಮಠಾಧೀಶರ ಕಾರಣದಿಂದ ಆ ವಾದ ಮುಗಿದಿದೆ. ಆ ರೀತಿಯ ವಾದ ಎತ್ತಿದವರನ್ನು ನಾವು ವಿರೋಧಿಸುವುದಿಲ್ಲ. ಇನ್ನಾದರೂ ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಇನ್ನು ಮುಂದೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಪ್ರಾಬಲ್ಯದ ಅವಕಾಶ ಸಿಗಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದ ಮೇಲೆ ಒತ್ತಡ ಹೇರಿ ಒಬಿಸಿಗೆ ಸೇರಿಸುವ ಬೇಡಿಕೆ ಅನುಷ್ಠಾನಕ್ಕೆ ತರುವಂತೆ ಮಾಡಬೇಕು. ದೇವೇಗೌಡರು ಪ್ರಧಾನಿ ಆದ ವೇಳೆ ಒಕ್ಕಲಿಗರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿದರು. ಆ ನಂತರ, ಆ ಸಮುದಾಯ ಚೆನ್ನಾಗಿ ಅಭಿವೃದ್ಧಿಯಾಗಿದೆ. ಅದೇ ರೀತಿ ಈಗ ಯಡಿಯೂರಪ್ಪ ಶಿಫಾರಸು ಮಾಡಿದರೆ ಎಂದೂ ಮರೆಯದ ಕೊಡುಗೆಯನ್ನು ಅವರು ಪಂಚಮಸಾಲಿ ಸಮಾಜಕ್ಕೆ ಕೊಟ್ಟಂತಾಗಲಿದೆ ಎಂದರು.

ನಂತರ ಆಶೀರ್ವಚನ ನೀಡಿದ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಇದು 105 ವರ್ಷಗಳಿಂದ ಬಂದಿರುವ ಹೋರಾಟ. ಆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳಾದವು. ಸಂವಿಧಾನಬದ್ದವಾಗಿ ಸಿಗುವ ಹಕ್ಕುಗಳನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಸಫಲವಾಗುತ್ತದೆ. ಬಿದ್ದವನನ್ನು ಬೀಳುತ್ತಿರುವವನನ್ನು ಮುಂದೆ ಬೀಳುವವನನ್ನು ಎತ್ತಿ ನಿಲ್ಲಿಸುವುದೆ ಧರ್ಮ. ರಾಜ್ಯ ಸರ್ಕಾರ ಈ ಶಿಫಾರಸ್ಸನ್ನು ಕೇಂದ್ರದ ಬಳಿಗೆ ಕಳುಹಿಸಿದರೆ ಮುಂದೆ ಪ್ರಧಾನಿಯವರ ಬಳಿಗೂ ಮಠಾಧೀಶರ ನಿಯೋಗ ಹೋಗಿ ಮನವರಿಕೆ ಮಾಡಿಕೊಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.