ETV Bharat / city

ಭೀಕರ ಪ್ರವಾಹದ ನಡುವೆಯೂ ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರಪೀಡಿತ! - ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಣೆ

ರಾಜ್ಯದಲ್ಲಿ ಈ ಬಾರಿ ವರುಣನ ಆರ್ಭಟ ಜೋರಾಗಿದ್ದರೂ ಮುಂಗಾರು ಹಂಗಾಮಿನಲ್ಲಿ 18 ಜಿಲ್ಲೆಗಳ 49 ತಾಲೂಕುಗಳು ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತ ಎದುರಿಸುತ್ತಿದ್ದು, ಅವುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿ ಆದೇಶಿಸಿದೆ.

ನೆರೆಯ ನಡುವೆಯೂ 49 ತಾಲೂಕುಗಳಿಗೆ ಬರ!
author img

By

Published : Oct 29, 2019, 11:44 PM IST

Updated : Oct 29, 2019, 11:49 PM IST

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ನೆರೆಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದ್ದರೆ, ಇನ್ನೊಂದೆಡೆ ಬರಗಾಲವೂ ಎದುರಾಗಿದೆ. ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಬರಪೀಡಿತ ಜಿಲ್ಲೆ ಹಾಗೂ ತಾಲೂಕುಗಳ ಪಟ್ಟಿ ಹೀಗಿದೆ

  • ಬೆಂಗಳೂರು ನಗರ ಜಿಲ್ಲೆ - ಆನೇಕಲ್, ಬೆಂಗಳೂರು ಉತ್ತರ, ಪೂರ್ವ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆ - ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ.
  • ರಾಮನಗರ ಜಿಲ್ಲೆ - ಕನಕಪುರ, ರಾಮನಗರ.
  • ಕೋಲಾರ ಜಿಲ್ಲೆ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ.
  • ಚಿಕ್ಕಬಳ್ಳಾಪುರ ಜಿಲ್ಲೆ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ.
  • ತುಮಕೂರು ಜಿಲ್ಲೆ- ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ.
  • ಚಿತ್ರದುರ್ಗ ಜಿಲ್ಲೆ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು.
  • ದಾವಣಗೆರೆ ಜಿಲ್ಲೆ - ಜಗಳೂರು.
  • ಚಾಮರಾಜನಗರ ಜಿಲ್ಲೆ - ಕೊಳ್ಳೇಗಾಲ.
  • ಬಳ್ಳಾರಿ ಜಿಲ್ಲೆ – ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ.
  • ಕೊಪ್ಪಳ ಜಿಲ್ಲೆ- ಗಂಗಾವತಿ.
  • ರಾಯಚೂರು ಜಿಲ್ಲೆ- ಮಾನ್ವಿ, ರಾಯಚೂರು, ಸಿಂಧನೂರು.
  • ಕಲಬುರಗಿ ಜಿಲ್ಲೆ – ಜೇವರ್ಗಿ, ಸೇಡಂ.
  • ಯಾದಗಿರಿ ಜಿಲ್ಲೆ- ಯಾದಗಿರಿ.
  • ಬೆಳಗಾವಿ ಜಿಲ್ಲೆ- ಅಥಣಿ.
  • ಬಾಗಲಕೋಟೆ ಜಿಲ್ಲೆ- ಬಾದಾಮಿ, ಬೀಳಗಿ, ಜಮಖಂಡಿ.
  • ವಿಜಯಪುರ ಜಿಲ್ಲೆ- ಬಸವನ ಬಾಗೇವಾಡಿ, ಇಂಡಿ, ಸಿಂಧಗಿ, ವಿಜಯಪುರ.
  • ಗದಗ ಜಿಲ್ಲೆ- ನರಗುಂದ

ಮುಂಗಾರು ಹಂಗಾಮಿನಲ್ಲಿ 18 ಜಿಲ್ಲೆಗಳ 49 ತಾಲೂಕುಗಳು ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತ ಎದುರಿಸುತ್ತಿದ್ದು, ಅವುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿ ಆದೇಶಿಸಿದೆ. ಬರದ ತೀವ್ರತೆಯನ್ನು ಅಂದಾಜಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ತಾಲೂಕುಗಳಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಬರ ನಿರ್ವಹಣೆ ಕೈಪಿಡಿ-2016 ಹಾಗೂ ಪರಿಷ್ಕೃತ ಕೈಪಿಡಿಯಲ್ಲಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಲಾಗಿದೆ.

Intro:ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ನೆರೆಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದರೆ, ಇನ್ನೊಂದೆಡೆ ಬರಗಾಲವೂ ಎದುರಾಗಿದೆ.
ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.
Body:ಮುಂಗಾರು ಹಂಗಾಮಿನಲ್ಲಿ 18 ಜಿಲ್ಲೆಗಳ 49 ತಾಲೂಕುಗಳು ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತ ಎದುರಿಸುತ್ತಿವೆ.
ಬೆಂಗಳೂರು ನಗರ ಜಿಲ್ಲೆ - ಆನೇಕಲ್, ಬೆಂಗಳೂರು ಉತ್ತರ, ಪೂರ್ವ.
ಬೆಂಗಳೂರು ಗ್ರಾಮಾಂತರ ಜಿಲ್ಲೆ - ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ.
ರಾಮನಗರ ಜಿಲ್ಲೆ - ಕನಕಪುರ, ರಾಮನಗರ.
ಕೋಲಾರ ಜಿಲ್ಲೆ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ.
ಚಿಕ್ಕಬಳ್ಳಾಪುರ ಜಿಲ್ಲೆ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ.
ತುಮಕೂರು ಜಿಲ್ಲೆ- ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ.
ಚಿತ್ರದುರ್ಗ ಜಿಲ್ಲೆ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು.
ದಾವಣಗೆರೆ ಜಿಲ್ಲೆ - ಜಗಳೂರು.
ಚಾಮರಾಜನಗರ ಜಿಲ್ಲೆ - ಕೊಳ್ಳೇಗಾಲ.
ಬಳ್ಳಾರಿ ಜಿಲ್ಲೆ – ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ.
ಕೊಪ್ಪಳ ಜಿಲ್ಲೆ- ಗಂಗಾವತಿ.
ರಾಯಚೂರು ಜಿಲ್ಲೆ- ಮಾನ್ವಿ, ರಾಯಚೂರು, ಸಿಂಧನೂರು.
ಕಲಬುರಗಿ ಜಿಲ್ಲೆ – ಜೇವರ್ಗಿ, ಸೇಡಂ.
ಯಾದಗಿರಿ ಜಿಲ್ಲೆ- ಯಾದಗಿರಿ.
ಬೆಳಗಾವಿ ಜಿಲ್ಲೆ- ಅಥಣಿ.
ಬಾಗಲಕೋಟೆ ಜಿಲ್ಲೆ- ಬಾದಾಮಿ, ಭೀಳಗಿ, ಜಮಖಂಡಿ.
ವಿಜಯಪುರ ಜಿಲ್ಲೆ- ಬಸವನಬಾಗೇವಾಡಿ, ಇಂಡಿ, ಸಿಂಧಗಿ, ವಿಜಯಪುರ.
ಗದಗ ಜಿಲ್ಲೆ- ನರಗುಂದ ತಾಲೂಕುಗಳು ಬರ ಪೀಡಿತ ಎಂದು ಸರ್ಕಾರ ಘೋಷಿಸಿ ಆದೇಶಿಸಿದೆ.
ಬರದ ತೀವ್ರತೆಯನ್ನು ಅಂದಾಜಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ತಾಲೂಕುಗಳಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಬರ ನಿರ್ವಹಣೆ ಕೈಪಿಡಿ-2016 ಹಾಗೂ ಪರಿಷ್ಕೃತ ಕೈಪಿಡಿಯಲ್ಲಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿದೆ.
Conclusion:
Last Updated : Oct 29, 2019, 11:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.