ಬೆಂಗಳೂರು: ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಕಿರಿಕ್ ತೆಗೆದು ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದ ವಸಂತಪುರದಲ್ಲಿ ನಡೆದಿದೆ.
ಅಮುದಾ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ನೆರೆಮನೆಯ ವಿಜಯಲಕ್ಷ್ಮೀ, ಕುಮಾರ್, ವಿಶಾಲ್ ವಿರುದ್ಧ ದೂರು ನೀಡಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮುದಾ ಆರೋಪಿಸಿದ್ದಾರೆ.
![the-sack-drying-issue-woman-attacked-by-machet](https://etvbharatimages.akamaized.net/etvbharat/prod-images/kn-bng-01-subramayanagara-crime-7202806_28012022095326_2801f_1643343806_1035.jpg)
ಮನೆಗೆಲಸ ಮಾಡುವ ಆಮುದಾ ವಸಂತಪುರದಲ್ಲಿ ವಾಸವಾಗಿದ್ದಾರೆ. ಜನವರಿ 11ರಂದು ನೆರೆಮನೆಯವರು ಅಮುದಾ ಮನೆಯ ಮುಂದಿನ ತುಳಸಿ ಮಂಟಪದ ಮೇಲೆ ಗೋಣಿ ಚೀಲ ಹಾಕಿದ್ದರಂತೆ. ಇದನ್ನು ಕಂಡ ಅವರು, ಗೋಣಿ ಚೀಲವನ್ನು ತೆಗೆಯಿರಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ನೆರೆಮನೆಯವರು ಗಲಾಟೆ ಮಾಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ವೇಳೆ ಗಲಾಟೆ ತಾರಕ್ಕಕೇರಿ ಅಮುದಾ ಅವರ ತಲೆ ಹಾಗೂ ಭುಜಕ್ಕೆ ಆರೋಪಿಗಳು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿರುವ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಮನೆ ಕಿಟಕಿಯ ಗ್ಲಾಸ್ಗೆ ಕಲ್ಲಿನಿಂದ ಹೊಡೆದು ದಾಂಧಲೆ ನಡೆಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: 3 ವರ್ಷದ ಹೆಣ್ಣು ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ ಯತ್ನ!