ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ಶಂಕಿತರು ಹೆಚ್ಚಾಗಿರುವ ಕಾರಣ ಈ ಪ್ರದೇಶವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಪಾದರಾಯನಪುರದಲ್ಲಿ ಕೋವಿಡ್-19 ಭಯ ಹೆಚ್ಚಿದ್ದು, ರಾತ್ರಿ ನಡೆದ ಘಟನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಸೇರಿದ್ದರು. ಅದರಲ್ಲಿ 54 ಮಂದಿಯನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಅಲ್ಲದೇ ಸೀಲ್ಡೌನ್ ಮತ್ತು ಕ್ವಾರಂಟೈನ್ ಮನೆಗಳ ಸುತ್ತಾ ಮುತ್ತಾ ಪುಂಡರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನು ಅರೆಸ್ಟ್ ಆಗಿರುವವರ ಪೈಕಿ ಯಾರಿಗಾದರೂ ಕೊರೊನಾ ಲಕ್ಷಣಗಳು ಇದೆಯಾ ಅನ್ನೋ ಭಯದಲ್ಲಿ ಪೊಲೀಸರು ಇದ್ದಾರೆ. ರಾತ್ರಿ ಕೆಲಸದಲ್ಲಿ ನಿರತರಾಗಿದ್ದ ಪೊಲೀಸರು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಿಕೊಂಡಿದ್ದು, ಯಾರೂ ಕೂಡ ನೇರವಾಗಿ ಮನೆಗೆ ಹೋಗದಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಲಾಠಿ ಮುಂಖಾತರ ಸೋಂಕು ತಗಲಿರುವ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಪಾದರಾಯನಪುರದಲ್ಲಿ ಬಹುತೇಕ ಮಂದಿಗೆ ಸೋಂಕು ಇದ್ದು, ಪೊಲೀಸರು ಜಾಗೃತಿಯಿಂದ ತನಿಖೆ ನಡೆಸುವುದು ಅನಿವಾರ್ಯವಾಗಿದೆ.
54 ಜನ ಬಂಧಿತ ಆರೋಪಿಗಳನ್ನು ಒಂದು ದೊಡ್ಡ ಹಾಲ್ನಲ್ಲಿ ಇರಿಸಲಾಗಿದ್ದು ಒಂದು ಮೀಟರ್ ಅಂತರ ಕಾಯ್ದಿರಿಸಲಾಗಿದೆ. ಸದ್ಯ ಬಂಧಿತರ ಆರೋಗ್ಯ ತಪಾಸಣೆ ನಡೆಸಿದ ನಂತರ ಪೊಲೀಸರು ಬಂಧಿತರಿಂದ ಮಾಹಿತಿ ಕಲೆ ಹಾಕಲಿದ್ದಾರೆ. ಹಾಗೆಯೇ ತನಿಖಾಧಿಕಾರಿಗಳು ಭಯದ ವಾತವರಣದಲ್ಲಿ ಕೆಲಸ ಮಾಡುತ್ತಿದ್ದಾರೆ.