ETV Bharat / city

ಅಡಮಾನ ಸಾಲ ಖರೀದಿ ಮಿತಿ ಏರಿಕೆ:  ರೇಷ್ಮೆ ರೀಲರ್ಸ್, ಟ್ರೇಡರ್ಸ್ ಸಂತಸ - The government gave good news to silk reellers, traders

ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್​​​ಗಳ ಜೊತೆ ಸಭೆ ನಡೆಸಿದ ರೇಷ್ಮೆ ಇಲಾಖೆ ಸಚಿವ, ಅಡಮಾನ ಸಾಲ ಮಿತಿಯನ್ನು ಒಂದು ಲಕ್ಷದಿಂದ 2 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

The government gave  good news to silk reellers, traders
ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್​​​ಗಳ ಜೊತೆ ಸಭೆ ನಡೆಸಿದ ರೇಷ್ಮೆ ಇಲಾಖೆ ಸಚಿವ
author img

By

Published : May 9, 2020, 5:43 PM IST

ಬೆಂಗಳೂರು: ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್​​​​​ಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ರೀಲರ್ಸ್ ಹಾಗೂ ಟ್ರೇಡರ್ಸ್​​​ಗಳ ಜೊತೆ ಇಂದು ಪ್ರತ್ಯೇಕ ಸಭೆ ನಡೆಸಿದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು, ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನೂ ಸೂಚಿಸಿದ್ದಾರೆ.

ಸಚಿವರು ತೆಗೆದುಕೊಂಡ ನಿರ್ಧಾರವನ್ನು ನೂಲು ಬಿಚ್ಚಣಿಕೆದಾರರು (ರೀಲರ್ಸ್) ಹಾಗೂ ಟ್ರೇಡರ್ಸ್ ಸ್ವಾಗತಿಸಿದ್ದಾರೆ. ಅಡಮಾನ ಸಾಲ ಮಿತಿ ಈವರೆಗೆ ಒಂದು ಲಕ್ಷ ರೂ. ಇತ್ತು. ಅದನ್ನು ಈಗ 2 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಸಚಿವ ನಾರಾಯಣಗೌಡ ಸಭೆಯಲ್ಲಿ ತಿಳಿಸಿದ್ದಾರೆ.

ರೇಷ್ಮೆಗೆ ಹೆಚ್ಚಿನ ದರ ನಿಗದಿ ಮಾಡುವ ಬಗ್ಗೆಯೂ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಆ ಬಳಿಕ ಟ್ರೇಡರ್ಸ್​​​ಗಳ ಜೊತೆ ಸಭೆ ನಡೆಸಿ ಕುಂದುಕೊರತೆ ಆಲಿಸಿದ್ದಾರೆ. ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್-19 ಬರುವುದಕ್ಕೂ ಮುನ್ನ ಹೆಚ್ಚಿನ ಬೆಲೆಗೆ ರೇಷ್ಮೆ ಖರೀದಿಸಲಾಗಿತ್ತು. ಈಗ ಹೊರ ರಾಜ್ಯಗಳಲ್ಲಿ ವಹಿವಾಟು ನಡೆಸುವುದು ಕಷ್ಟವಾಗಿದೆ. ಅಲ್ಲದೇ ಹೊರ ರಾಜ್ಯಗಳಲ್ಲಿ ನಡೆಸಿದ ವಹಿವಾಟಿನ ಹಣ ಕೂಡ ಬಾರದೇ ಬಾಕಿಯಾಗಿದೆ.

ಇದರಿಂದ ಹೊಸದಾಗಿ ಖರೀದಿಗೂ ಸಮಸ್ಯೆ ಆಗಿದೆ. ಲಾಕ್ ಡೌನ್ ಮುಗಿದ ತಕ್ಷಣ ಚೀನಾ, ವಿಯೆಟ್ನಾಂ ಸೇರಿದಂತೆ ವಿದೇಶಗಳಿಂದ ರೇಷ್ಮೆ ಆಮದಾಗುತ್ತೆ. ಆಗ ರಾಜ್ಯದ ರೇಷ್ಮೆ ದರ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರಲ್ಲಿ ಟ್ರೇಡರ್ಸ್ ಮನವಿ ಮಾಡಿದರು.

ಆ್ಯಂಟಿ ಡಂಪಿಂಗ್ ಚಾರ್ಜ್ ಏರಿಕೆ ಸಂಬಂಧ ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಚಿವರು ತಿಳಿಸಿದ್ದಾರೆ. ಅಲ್ಲದೇ ರೇಷ್ಮೆ ಆಮದಿಗೂ ಮಿತಿ ಹೇರುವ ಪ್ರಯತ್ನ ಮಾಡಲಾಗುವುದು. ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ಕಮರ್ಷಿಯಲ್ ವಾಹನಕ್ಕೆ ಯಾವುದೇ ಸಮಸ್ಯೆಯಿಲ್ಲ. ಜೊತೆಗೆ ಅಗತ್ಯವಿದ್ದಲ್ಲಿ ಪಾಸ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈಗಾಗಲೆ ಕೋರಿಯರ್ ಸರ್ವಿಸ್ ಕೂಡ ಆರಂಭವಾಗಿದೆ. ಟ್ರೇಡರ್ಸ್ ಈ ಎಲ್ಲ ಸೌಲಭ್ಯ ಬಳಸಿಕೊಂಡು ವಹಿವಾಟು ನಡೆಸಬಹುದು. ಯಾವುದೇ ಸಂದರ್ಭದಲ್ಲಿ ವಹಿವಾಟು ನಡೆಸಲು ಸಮಸ್ಯೆ ಎದುರಾದರೆ ತಕ್ಷಣ ಸರ್ಕಾರ ನಿಮ್ಮ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.