ETV Bharat / city

ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ, ಸಭಾತ್ಯಾಗ ಮಾಡಿದ್ದೇವೆ.. ವಿಪಕ್ಷ ನಾಯಕ ಸಿದ್ದರಾಮಯ್ಯ

author img

By

Published : Oct 11, 2019, 9:58 PM IST

ಸರ್ಕಾರ ಪ್ರತಿಪಕ್ಷಗಳ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ನಾವು ಕೇಳಿದ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ ಜತೆಗೆ ಬೇಡಿಕೆ ಈಡೇರಿಸಿಲ್ಲ. ಇದರಿಂದಾಗಿ ಬೇಸತ್ತು ಸದನದಿಂದ ಸಭಾತ್ಯಾಗ ಮಾಡಿ ಹೊರ ಬಂದಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

Siddaramaiah

ಬೆಂಗಳೂರು: ಸರ್ಕಾರ ಪ್ರತಿಪಕ್ಷಗಳ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ನಾವು ಕೇಳಿದ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ ಜೊತೆಗೆ ಬೇಡಿಕೆ ಈಡೇರಿಸಿಲ್ಲ. ಇದರಿಂದಾಗಿ ಬೇಸತ್ತು ಸದನದಿಂದ ಸಭಾತ್ಯಾಗ ಮಾಡಿ ಹೊರ ಬಂದಿದ್ದೇವೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ..

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಕಷ್ಟು ವಿಚಾರವಾಗಿ ಚರ್ಚೆಗೆ ಅವಕಾಶ ಕೇಳಿದ್ದೆವು. ವಿಶೇಷವಾಗಿ ನಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಇದು ನಮ್ಮ ಬೇಸರಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ನಾವು ಸಭಾತ್ಯಾಗ ಮಾಡುವ ನಿರ್ಧಾರ ಕೈಗೊಂಡು ಆಚೆ ಬಂದಿದ್ದೇವೆ. ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹ ತಲೆದೋರಿತ್ತು. ಈ ಬಗ್ಗೆ ಚರ್ಚೆ ಮಾಡಿದ್ವಿ. ಪ್ರವಾಹ, ಮಳೆಯಿಂದಾದ ನಾಶ, ಸಂಕಷ್ಟಗಳ ಬಗ್ಗೆ ಮಾತಾಡಿದ್ವಿ. ಇವತ್ತಿನವರೆಗೆ ಶಾಲಾ ಕೊಠಡಿಗಳನ್ನು ಸರ್ಕಾರ ದುರಸ್ಥಿ ಮಾಡಿಲ್ಲ. ಇನ್ನು, ಹದಿನೈದು ದಿನಗಳಲ್ಲಿ ದುರಸ್ತಿ ಮಾಡೋ ಭರವಸೆ ಕೊಟ್ಟಿದ್ದಾರೆ ಎಂದರು.

ಸಂತ್ರಸ್ತರಿಗೆ ಗೃಹೋಪಯೋಗಿ ವಸ್ತುಗಳ‌ ಖರೀದಿಗೆ 10 ಸಾವಿರ ಕೊಡುತ್ತಿದ್ದಾರೆ. ಕನಿಷ್ಟ 20 ಸಾವಿರ ಕೊಡಿ ಅಂದಿದ್ದೇವೆ. ಬೆಳೆ ಪರಿಹಾರ ಹೆಚ್ಚಳ‌ ಮಾಡಬೇಕು. ತರಿ ಜಮೀನಿಗೆ 1 ಲಕ್ಷ, ಖುಷ್ಕಿ ಜಮೀನಿಗೆ 50 ಸಾವಿರ ರೂ. ಕೊಡಿ ಅಂತ ಒತ್ತಾಯಿಸಿದ್ದೇವೆ. ಆದರೆ, ಸರ್ಕಾರ ಇದಕ್ಕೆ ಉತ್ತರ ಕೊಡಲಿಲ್ಲ. 12 ಸಾವಿರ ಶಾಲೆಗಳು ಕುಸಿದಿವೆ. ಕೂಡಲೇ ಶಾಲೆ ದುರಸ್ಥಿ ಮಾಡಬೇಕಿತ್ತು. ತಾತ್ಕಾಲಿಕ ಶೆಡ್​ಗಳನ್ನೂ ಹಾಕಿಕೊಟ್ಟಿಲ್ಲ. ಮಕ್ಕಳು ಎಷ್ಟೋ ದಿನ ಶಾಲೆಗಳಿಗೆ ಹೋಗಿಲ್ಲ ಎಂದರು.

ಖಜಾನೆ ಖಾಲಿ ಅಂತಾ ನಾವು ಹೇಳಲಿಲ್ಲ. ಖಜಾನೆ ಖಾಲಿಯಾಗಿದೆ ಅಂತಾ ಯಡಿಯೂರಪ್ಪ ಮತ್ತು ಕಟೀಲ್ ಹೇಳಿದ್ದು. ಹೆಚ್ ಕೆ ಪಾಟೀಲ್ ಅವ್ರು ನೆರೆಯನ್ನು ರಾಷ್ಟ್ರೀಯ ವಿಪತ್ತು ಅಂತಾ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕೊಡೋಣ ಅಂದ್ರು. ಆದರೆ, ಸರ್ಕಾರ ಇದಕ್ಕೂ ಉತ್ತರಿಸಲಿಲ್ಲ. ಕೇಂದ್ರದ ನಾಯಕರ ಬಳಿ ಇವ್ರು ಮಾತಾಡೋಕ್ಕೆ ಭಯ ಪಡ್ತಾರೆ. ನೆರೆ ಚರ್ಚೆ ಕುರಿತು ಸರ್ಕಾರದ ಉತ್ತರ ನಮಗೆ ಸಮರ್ಪಕ ಅನ್ನಿಸಲಿಲ್ಲ. ಸರ್ಕಾರದ ಉತ್ತರ ನಮಗೆ ತೃಪ್ತಿ ತರಲಿಲ್ಲ ಎಂದರು.

ಕಾವೇರಿ ಸರ್ಕಾರಿ ನಿವಾಸವನ್ನ ಕೇಳಿ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಹೌದು. ಕಾವೇರಿ ನಿವಾಸ ಕೇಳಿ ಸಿಎಂಗೆ ಪತ್ರ ಬರೆದಿದ್ದೀನಿ. ಅದರಲ್ಲಿ‌ ತಪ್ಪೇನಿದೆ ಹೇಳಿ. ಅವರೂ ಕಾವೇರಿಗೆ ಬರೋದಾಗಿ ಆದೇಶ ಮಾಡಿದ್ದಾರೆ. ಅವರ ಆದೇಶವನ್ನು ಅವ್ರು ಬದಲಾವಣೆ ಮಾಡ್ಕೋಬಹುದಲ್ಲ? ಅವ್ರು ಮೊದಲು ರೇಸ್‌ಕೋರ್ಸ್ ಮನೆಗೆ ಆದೇಶ ಮಾಡ್ಕೊಂಡಿದ್ರು. ನಾನು ಕಾವೇರಿ ಮನೇಲೇ ಇದೀನಿ. ಈಗ ಬದಲಾವಣೆ ಮಾಡ್ಬೇಕು ಅಂದ್ರೇ ಕಷ್ಟ. ಮನೆಯ ಸಾಮಾನುಗಳನ್ನೆಲ್ಲ ಹೊತ್ಕೊಂಡು ಹೋಗ್ಬೇಕು. ಬೇರೆ ಮನೆಗೆ ಹೋಗ್ಬೇಕಾದ್ರೆ ಸಾಮಾನುಗಳನ್ನೆಲ್ಲ ಹೊತ್ಕೊಂಡ್ ಹೋಗಬೇಕು. ಬೇರೆ ಮನೆ ಇದೆಯೋ ಇಲ್ವೋ ಅದೂ ಗೊತ್ತಿಲ್ಲ. ಹಾಗಾಗಿ‌ ಕಾವೇರಿಯನ್ನೇ ಕೊಡಿ ಅಂತಾ ಕೇಳಿದ್ದೀನಿ. ಸಿಎಂ ಏನ್ ತೀರ್ಮಾನ ಮಾಡ್ತಾರೋ ನೋಡೋಣ ಎಂದರು.

Intro:newsBody:ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆ ಸಭಾತ್ಯಾಗ ಮಾಡಿ ಬಂದಿದ್ದೇವೆ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರ ಪ್ರತಿಪಕ್ಷಗಳ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ನಾವು ಕೇಳಿದ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ ಬೇಡಿಕೆ ಈಡೇರಿಸಿಲ್ಲ ಇದರಿಂದಾಗಿ ಬೇಸತ್ತು ಸದನದಿಂದ ಸಭಾತ್ಯಾಗ ಮಾಡಿ ಹೊರ ಬಂದಿದ್ದೇವೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಾಕಷ್ಟು ವಿಚಾರವಾಗಿ ಚರ್ಚೆಗೆ ಅವಕಾಶ ಕೇಳಿದ್ದೆವು. ವಿಶೇಷವಾಗಿ ನಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಇದು ನಮ್ಮ ಬೇಸರಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ನಾವು ಸಭಾತ್ಯಾಗ ಮಾಡುವ ನಿರ್ಧಾರ ಕೈಗೊಂಡು ಆಚೆ ಬಂದಿದ್ದೇವೆ ಎಂದರು.
ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹ ತಲೆದೋರಿತ್ತು. ಈ ಬಗ್ಗೆ ಚರ್ಚೆ ಮಾಡಿದ್ವಿ. ಪ್ರವಾಹ, ಮಳೆಯಿಂದಾದ ನಾಶ, ಸಂಕಷ್ಟಗಳ ಬಗ್ಗೆ ಮಾತಾಡಿದ್ವಿ. ಇವತ್ತಿನವರೆಗೆ ಶಾಲಾ ಕೊಠಡಿಗಳನ್ನು ಸರ್ಕಾರ ದುರಸ್ತಿ ಮಾಡಿಲ್ಲ. ಇನ್ನು ಹದಿನೈದು ದಿನಗಳಲ್ಲಿ ದುರಸ್ತಿ ಮಾಡೋ ಭರವಸೆ ಕೊಟ್ಟಿದ್ದಾರೆ ಎಂದರು.
ಸಂತ್ರಸ್ತರಿಗೆ ಗೃಹೋಪಯೋಗಿ ವಸ್ತುಗಳ‌ ಖರೀದಿಗೆ 10 ಸಾವಿರ ಕೊಡ್ತಿದ್ದಾರೆ. ಕನಿಷ್ಟ 20 ಸಾವಿರ ಕೊಡಿ ಅಂದಿದ್ದೇವೆ. ಬೆಳೆ ಪರಿಹಾರ ಹೆಚ್ಚಳ‌ ಮಾಡಬೇಕು. ತರಿ ಜಮೀನಿಗೆ 1 ಲಕ್ಷ, ಖುಷ್ಕಿ ಜಮೀನಿಗೆ 50 ಸಾವಿರ ಕೊಡಿ ಅಂತ ಒತ್ತಾಯಿಸಿದ್ದೇವೆ. ಆದ್ರೆ ಸರ್ಕಾರ ಇದಕ್ಕೆ ಉತ್ತರ ಕೊಡಲಿಲ್ಲ. 12 ಸಾವಿರ ಶಾಲೆಗಳು ಕುಸಿದಿವೆ. ಕೂಡಲೇ ಶಾಲೆ ದುರಸ್ತಿ ಮಾಡಬೇಕಿತ್ತು. ತಾತ್ಕಾಲಿಕ ಶೆಡ್ ಗಳನ್ನೂ ಹಾಕಿಕೊಟ್ಟಿಲ್ಲ ಮಕ್ಕಳಿಗೆ. ಮಕ್ಕಳು ಎಷ್ಟೋ ದಿನ ಶಾಲೆಗಳಿಗೆ ಹೋಗಿಲ್ಲ ಎಂದು ವಿವರಿಸಿದರು.
ಖಜಾನೆ ಖಾಲಿ ಅಂತ ನಾವ್ ಹೇಳಲಿಲ್ಲ. ಖಜಾನೆ ಖಾಲಿಯಾಗಿದೆ ಅಂತ ಯಡಿಯೂರಪ್ಪ ಮತ್ತು ಕಟೀಲ್ ಹೇಳಿದ್ದು. ಕಟೀಲ್ ರ ಹೇಳಿಕೆ ಬಾಲಿಶತನದ್ದು. ಎಚ್ ಕೆ ಪಾಟೀಲ್ ಅವ್ರು ನೆರೆಯನ್ನು ರಾಷ್ಟ್ರೀಯ ವಿಪತ್ತು ಅಂತ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕೊಡೋಣ ಅಂದ್ರು. ಆದ್ರೆ ಸರ್ಕಾರ ಇದಕ್ಕೂ ಉತ್ತರಿಸಲಿಲ್ಲ. ಕೇಂದ್ರದ ನಾಯಕರ ಬಳಿ ಇವ್ರು ಮಾತಾಡೋಕ್ಕೆ ಭಯ ಪಡ್ತಾರೆ. ನೆರೆ ಚರ್ಚೆ ಕುರಿತು ಸರ್ಕಾರದ ಉತ್ತರ ನಮಗೆ ಸಮರ್ಪಕ ಅನ್ನಿಸಲಿಲ್ಲ. ಸರ್ಕಾರದ ಉತ್ತರ ನಮಗೆ ತೃಪ್ತಿ ತರಲಿಲ್ಲ ಎಂದರು.
ಕಾವೇರಿ ನಿವಾಸ ಕೇಳಿದ್ದು ನಿಜ
ಕಾವೇರಿ ಸರ್ಕಾರಿ ನಿವಾಸವನ್ನೇ ಕೇಳಿ ಸಿಎಂ ಪತ್ರ ಬರೆದ ವಿಚಾರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಹೌದು ಕಾವೇರಿ ನಿವಾಸ ಕೇಳಿ ಸಿಎಂಗೆ ಪತ್ರ ಬರೆದಿದೀನಿ. ಅದರಲ್ಲಿ‌ ತಪ್ಪೇನಿದೆ ಹೇಳಿ. ಅವರೂ ಕಾವೇರಿಗೆ ಬರೋದಾಗಿ ಆದೇಶ ಮಾಡಿದಾರೆ. ಅವರ ಆದೇಶವನ್ನು ಅವ್ರು ಬದಲಾವಣೆ ಮಾಡ್ಕೋಬಹುದಲ್ಲ? ಅವ್ರು ಮೊದಲು ರೇಸ್ ಕೋರ್ಸ್ ಮನೆಗೆ ಆದೇಶ ಮಾಡ್ಕೊಂಡಿದ್ರು. ನಾನು ಕಾವೇರಿ ಮನೇಲೇ ಇದೀನಿ. ಈಗ ಬದಲಾವಣೆ ಮಾಡ್ಬೇಕು ಅಂದ್ರೆ ಕಷ್ಟ. ಮನೆಯ ಸಾಮಾನುಗಳನ್ನೆಲ್ಲ ಹೊತ್ಕೊಂಡು ಹೋಗ್ಬೇಕು. ಬೇರೆ ಮನೆಗೆ ಹೋಗ್ಬೇಕಾದ್ರೆ ಸಾಮಾನುಗಳನ್ನೆಲ್ಲ ಹೊತ್ಕೊಂಡ್ ಹೋಗಬೇಕು. ಬೇರೆ ಮನೆ ಇದೆಯೋ ಇಲ್ವೋ ಅದೂ ಗೊತ್ತಿಲ್ಲ. ಹಾಗಾಗಿ‌ ಕಾವೇರಿಯನ್ನೇ ಕೊಡಿ ಅಂತ ಕೇಳಿದೀನಿ. ಸಿಎಂ ಏನ್ ತೀರ್ಮಾನ ಮಾಡ್ತಾರೋ ನೋಡೋಣ ಎಂದರು.
ಮಹಾರಾಷ್ಟ್ರ ಮತ್ತು ಕೇರಳದ ಒಂದು ಕ್ಷೇತ್ರದ ಉಪಚುನಾವಣೆಗೆ ಪ್ರಚಾರಕ್ಕೆ ನನ್ನನ್ನು ಕರೆದಿದ್ದಾರೆ. ನಾಳೆ ತಿಳಿಸ್ತೀನಿ ಅಂತ ಹೇಳಿದೀನಿ ಎಂದು ವಿವರಿಸಿದರು.
ಕೇಂದ್ರದ ವಿರುದ್ಧ ಬೇಸರ
ಎಚ್ ಕೆ ಪಾಟೀಲ್ ಮಾತನಾಡಿ, ನೆರೆಯಿಂದ ನಮ್ಮ ಪ್ರಕಾರ 1 ಲಕ್ಷ ಕೋಟಿ ನಷ್ಟ ಆಗಿದೆ. ಹಾಗಾಗಿ ನೆರೆ ಹಾನಿಯನ್ನು ರಾಷ್ಟ್ರೀಯ ವಿಪತ್ತು ಅಂತ ಪರಿಗಣಿಸಲು ಒತ್ತಾಯಿಸಿದ್ದೇವೆ. ಕೇಂದ್ರ ಸರ್ಕಾರ ರಾಜ್ಯದ ನೆರೆ ಬಗ್ಗೆ ಗಂಭೀರತೆ ತಾಳಿಲ್ಲ. ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿ ನೆರೆ ಹಾನಿಯನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಲು ಒತ್ತಾಯಿಸಲಿ ಎಂದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.