ಬೆಂಗಳೂರು : ನಾಳೆ ಬೆಳಗ್ಗೆ 9.30 ರಿಂದ 10 ಗಂಟೆ ವೇಳೆಗೆ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದ್ ತಿಳಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ ಮುಂಜಾನೆ ಮೆರವಣಿಗೆ ಮೂಲಕ ಪಾರ್ಥೀವ ಶರೀರವನ್ನು ರಾಜ್ ಕುಮಾರ್ ಸ್ಮಾರಕ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. 9.30 ರಿಂದ 10 ಗಂಟೆ ವೇಳೆಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದರು.
ನಾಳೆ ಶಾಂತಿಯಿಂದ, ಪ್ರೀತಿಯಿಂದ ಪುನೀತ್ ಅಂತ್ಯಕ್ರಿಯೆ ಮಾಡಿಸೋಣ. ಯಾವುದೇ ಅಹಿತಕರ ಘಟನೆ ಆಗಬಾರದು. ಹಾಗಾಗಿ, ಎಲ್ಲರೂ ಭಾಗವಹಿಸಿ ಸಹಕರಿಸಬೇಕು.
ಸಕಲ ಸೌಕರ್ಯಗಳನ್ನು ಮಾಡಲಾಗಿದ್ದು, ನಿರಾಶೆಯಾಗದಂತೆ ನೋಡಿಕೊಂಡಿರುವುದಕ್ಕೆ ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.