ಬೆಂಗಳೂರು : ಪುರಾಣದ ಸಾಲ್ವನ ಪಾತ್ರ ಮಾಡುತ್ತಲೇ, ಗತ್ತು-ಗೈರತ್ತಿನಿಂದ ಮಾತಾಡುತ್ತಲೇ, ಆಕಸ್ಮಿಕ ಹೃದಯಾಘಾತದಿಂದ ರಂಗದಲ್ಲೇ ಕುಸಿದು ಬಿದ್ದು ಹುಡುಗೋಡು ಚಂದ್ರಹಾಸ ಪ್ರಾಣ ತ್ಯಜಿಸಿದ್ದಾರೆ.
ಬೈಂದೂರು ಸಮೀಪಎಳಜಿತ ಗ್ರಾಮದ ಜೋಗಿಜಡ್ಡು ಎಂಬಲ್ಲಿ ಜಲವಳ್ಳಿ ಮೇಳದ ಯಕ್ಷಗಾನ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸದೆ. ಅತಿಥಿ ಕಲಾವಿದರಾಗಿ ಚಂದ್ರಹಾಸ ಭಾಗವಹಿಸಿದ್ದರು. ಅವರ ಅಗಲಿಕೆಯಿಂದ ಇಡೀ ಯಕ್ಷಗಾನ ರಂಗ, ಕಲಾವಿದರು, ಮತ್ತು ಅಪಾರ ಅಭಿಮಾನಿಗಳು ದುಃಖತಪ್ತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಕಲಾಪೋಷಕ ಹಾಗೂ ಭಾಗವತರಾದ ಸುರೇಂದ್ರ ಪಣಿಯೂರು ಅವರು, ಒಂದು ಕಾಲಕ್ಕೆ ಶುಂಠಿ ಸತ್ಯನಾರಾಯಣ ಭಟ್ಟರು ಬಚ್ಚಗಾರ್ ಮೇಳ ಬಯಲಾಟವಾಗಿ ತಿರುಗಾಟದಲ್ಲಿ ಹುಡುಗೋಡು ಚಂದ್ರಹಾಸ, ತುಂಬ್ರಿ ಭಾಸ್ಕರ, ಜಲವಳ್ಳಿ ಮಾಧವ ನಾಯಕ್ ಈ ಮೂವರು ಒಟ್ಟಿಗೆ ಮೇಳ ತಿರುಗಾಟ ಶುರು ಮಾಡಿದವರು.ನನ್ನ ಜೊತೆ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾ ಇದ್ದ ಓರ್ವ ಉತ್ತಮ ಕಲಾವಿದ ಹುಡುಗೋಡು ಚಂದ್ರಹಾಸನವರು
ಮುಂದೆ ಸಾಲಿಗ್ರಾಮ ಇನ್ನಿತರ ಮೇಳದಲ್ಲಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿರುವ ಓರ್ವ ಸಭ್ಯ ಸಂಸ್ಕಾರವಂತ ವಾಗ್ಮಿ ಕಲಾವಿದನಾತ.
ಗೋಡೆ ನಾರಾಯಣ ಹೆಗ್ಡೆ ಯವರ ಪಡಿಯಚ್ಚು ಅಭಿನಯ ಅವರದಾಗಿತ್ತು. ಯಕ್ಷಗಾನ ರಂಗದಲ್ಲಿ ಬೇಡಿಕೆ ಇದ್ದಾಗಲೇ ಪೂರ್ಣ ಪ್ರಮಾಣದಲ್ಲಿ ತಿರುಗಾಟ ನಿಲ್ಲಿಸಿ ರಾಜಕೀಯದಲ್ಲಿತೊಡಗಿಸಿಕೊಂಡವರು. ಕೌರವ, ಕಾರ್ತ್ಯವೀರ್ಯ, ಸಾಲ್ವ, ಕೀಚಕ, ಮುಂತಾದ ಪ್ರತಿನಾಯಕ ಪಾತ್ರದಲ್ಲಿ ಸಿದ್ಧಹಸ್ತರು ಇವರನ್ನು ಕಳಕೊಂಡ ಯಕ್ಷಗಾನ ರಂಗ ಬಡವಾದದ್ದು ದಿಟ ಅವರ ಆತ್ಮಕ್ಕೆ ಚಿರಶಾಂತಿಯನ್ನ ದೇವರು ಕರುಣಿಸಲಿ ಎಂದಿದ್ದಾರೆ.