ETV Bharat / city

"ನೀವಿಲ್ಲದೇ ಅನಾಥರಾಗಿದ್ದೇವೆ"… ದೊರೆಸ್ವಾಮಿ ನಿಧನಕ್ಕೆ ಸುಮಲತಾ, ಪ್ರಕಾಶ್​ ರೈ ಕಂಬನಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನಕ್ಕೆ ರಾಜಕೀಯ ಮುಖಂಡರು, ಸಿನಿಮಾ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ದೊರೆಸ್ವಾಮಿ ನಿಧನ
ದೊರೆಸ್ವಾಮಿ ನಿಧನ
author img

By

Published : May 26, 2021, 4:22 PM IST

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಸ್​ ಆಗಿದ್ದರು.

ಪ್ರಕಾಶ್​ ರೈ ಸಂತಾಪ
ಪ್ರಕಾಶ್​ ರೈ ಸಂತಾಪ

ಆದರೆ, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದೊರೆಸ್ವಾಮಿಗೆ ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದ್ದಾರೆ.

ದೊರೆಸ್ವಾಮಿ ನಿಧನಕ್ಕೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. ಇದೀಗ ಬಹುಭಾಷಾ ನಟ ಪ್ರಕಾಶ್ ರೈ ದೊರೆಸ್ವಾಮಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. “ದೊರೆಯೇ.... ಗುರುವೆ.. ನನ್ನ ನೆಲದ ಸಿರಿಯೆ....ನಮ್ಮೆಲ್ಲರ ಸ್ಪೂರ್ತಿಯ ಚಿಲುಮೆಯೆ .. ನಮಗಾಗಿ ಹೋರಾಡಿದ ಯೋಧನೇ.. ನೀವಿಲ್ಲದೇ ಅನಾಥರಾಗಿದ್ದೇವೆ.

ಪ್ರಕಾಶ್​ ರೈ ಸಂತಾಪ
ಪ್ರಕಾಶ್​ ರೈ ಸಂತಾಪ

ನಿಮ್ಮ ಜೀವನದಲ್ಲಿ ಎಲ್ಲಾರಿಗೂ ಮಾದರಿ ಆಗುವಂತೆ ಬದುಕಿದ್ದೀರಿ. ಹಾಗೇ ನೀವು ಯಾವಾಗಲು ನನ್ನ ಹೋರಾಟಗಾರ” ಎಂದು ಹೇಳಿದ ಪ್ರಕಾಶ್ ರೈ ದೊರೆಸ್ವಾಮಿ ಜೊತೆಗೆ ವೇದಿಕೆ ಹಂಚಿಕೊಂಡಿರುವ ಫೋಟೋಗಳನ್ನ ಶೇರ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ಇನ್ನು ಸಂಸದೆ ಸುಮಲತಾ ಅಂಬರೀಷ್ ಕೂಡ ಸ್ವಾತಂತ್ರ್ಯ ಹೋರಾಟಗಾರ, ದೊರೆಸ್ವಾಮಿ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

ಸುಮಲತಾ ಸಂತಾಪ ಸಲ್ಲಿಕೆ
ಸುಮಲತಾ ಸಂತಾಪ ಸಲ್ಲಿಕೆ

“ನಾಡಿನ ಹಿರಿಯ ಚೇತನ. ಸ್ವಾತಂತ್ರ್ಯ ಹೋರಾಟಗಾರ, ಎಚ್.ಎಸ್. ದೊರೆಸ್ವಾಮಿ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಇತ್ತೀಚಿಗಷ್ಟೇ ತಮ್ಮ ಇಳಿ ವಯಸ್ಸಿನಲ್ಲೂ ಕೊರೊನಾ ಗೆದ್ದು, ಎಲ್ಲರಿಗೂ ಸ್ಫೂರ್ತಿಯಾಗಿದ್ದರು. ಅವರ ಕುಟುಂಬ, ಪ್ರೀತಿ ಪಾತ್ರರಿಗೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಅಂತ ಸುಮಲತಾ ಅಂಬರೀಷ್ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.