ಬೆಂಗಳೂರು: ಗೋ ಹತ್ಯೆ ನಿಷೇಧ ಕಾಯ್ದೆ ಪರಿಷತ್ನಲ್ಲಿ ಅಂಗೀಕಾರವಾಗಿದ್ದು, ಈ ಶ್ರೇಯಸ್ಸು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕನಸು ನನಸಾಗಿದೆ. ಎಲ್ಲರ ಸಹಕಾರ ಇದೆ. ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರ ಹೆಚ್ಚಾಗಿದೆ. ಇದರಿಂದ ರೈತರಿಗೆ ನಷ್ಟ ಆಗಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ನವರು ಸುಳ್ಳು ಮಾಹಿತಿ ನೀಡುತ್ತಾರೆ. ರಾಜ್ಯದಲ್ಲಿ 188 ಗೋ ಶಾಲೆಗಳಿವೆ. ವಯಸ್ಸಾದ ಪಶುಗಳ ಬಗ್ಗೆ ನಾವು ಯೋಜನೆ ಮಾಡುತ್ತೇವೆ. ಎಲ್ಲಾವೂ ಒಳ್ಳೆಯದಾಗುತ್ತದೆ ಎಂದರು.