ETV Bharat / city

ದೊಡ್ಡಗೌಡರ ಕುಟುಂಬದಲ್ಲಿ ಶುರುವಾಗಿದೆಯೇ ಟೆನ್ಷನ್...? - kannada newspaper

ತುಮಕೂರಿನಲ್ಲಿ ಸ್ಪರ್ಧೆಗೆ ಇಳಿದಿರುವ ಹೆಚ್.ಡಿ. ದೇವೇಗೌಡರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ನಾಯಕ, ಹಾಲಿ ಸಂಸದ ಮುದ್ದಹನುಮೇಗೌಡರು ಬಂಡಾಯ ಸಾರಿರುವುದು ತಲೆನೋವಾಗಿದೆ.

ದೊಡ್ಡಗೌಡ
author img

By

Published : Mar 23, 2019, 10:50 PM IST

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದಲ್ಲಿ ಆತಂಕ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಹೌದು ಎನ್ನುತ್ತವೆ ಮೂಲಗಳು. ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಗೌಡರ ಕುಟುಂಬದವರಿಗೆ ಪ್ರಬಲ ಎದುರಾಳಿಗಳಿದ್ದು, ಇದೀಗ ಹಾಸನ ಬಳಿಕ ಮತ್ತೊಂದು ಕ್ಷೇತ್ರದ ವಿಚಾರದಲ್ಲಿ ದೊಡ್ಡ ಟೆನ್ಷನ್ ದೇವೇಗೌಡರಿಗೆ ಎದುರಾಗಿದೆ. ದೇವೇಗೌಡರ ಕುಟುಂಬದಲ್ಲಿ ನಿರೀಕ್ಷೆಯೂ ಮಾಡದ ಬೆಳವಣಿಗೆ ನಡೆದು ಹೋಗಿದೆ. ಮುಂದೇನು ಎಂಬುದರ ಬಗ್ಗೆ ಕುಟುಂಬದಲ್ಲಿ ತಳಮಳ ಶುರುವಾಗಿದೆ ಎನ್ನಲಾಗ್ತಿದೆ.

ಹಾಸನದಲ್ಲಿ ಪ್ರಜ್ವಲ್ ರೇವಣ್ಣರಿಗೆ ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋದ ಮಾಜಿ ಸಚಿವ ಎ.ಮಂಜು ಎದುರಾಳಿಯಾದರೆ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಹಿರಿಯ ನಟ, ರಾಜಕಾರಣಿ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಪ್ರತಿಸ್ಪರ್ಧಿಯಾಗಿದ್ದಾರೆ. ಇದೀಗ ತುಮಕೂರಿನಲ್ಲಿ ಸ್ಪರ್ಧೆಗೆ ಇಳಿದಿರುವ ಹೆಚ್.ಡಿ. ದೇವೇಗೌಡರಿಗೆ ಸೆಡ್ಡುಹೊಡೆದ ಕಾಂಗ್ರೆಸ್ ನಾಯಕ, ಹಾಲಿ ಸಂಸದ ಮುದ್ದಹನುಮೇಗೌಡ ಬಂಡಾಯ ಸಾರಿರುವುದು ತಲೆನೋವಾಗಿದೆ. ಇದೇ ಕಾರಣಕ್ಕೆ ದೇವೇಗೌಡರಿಗೆ ಆತಂಕ ಶುರುವಾಗಿದೆ ಎನ್ನಲಾಗಿದೆ.

ಇಂದು ರಾತ್ರಿ ಈ ಕುರಿತು ಸಿಎಂ ಕುಮಾರಸ್ವಾಮಿ ಹಾಗೂ ತುಮಕೂರು ಜೆಡಿಎಸ್ ನಾಯಕರ ಜೊತೆ ದೇವೇಗೌಡರು ಚರ್ಚೆ ನಡೆಸುವ ಸಾಧ್ಯತೆ ಇದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.