ಬೆಂಗಳೂರು: ಟೋಯಿಂಗ್ ಸಿಬ್ಬಂದಿ ಸವಾರರಿಗೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಟೋಯಿಂಗ್ ನಿಯಮಾವಳಿಯಲ್ಲಿ ತಿದ್ದುಪಡಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವೈಜ್ಞಾನಿಕ ಟೋಯಿಂಗ್, ಸಾರ್ವಜನಿಕರೊಂದಿಗೆ ಟ್ರಾಫಿಕ್ ಪೊಲೀಸರ ಅನುಚಿತ ವರ್ತನೆ ಬಗ್ಗೆ ಜನರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಟೋಯಿಂಗ್ ವೇಳೆ ಪೊಲೀಸರ ವರ್ತನೆ, ಹೇಗೆ ಕೇಸ್ ದಾಖಲಿಸಬೇಕು ಎಂಬುವುದು ಸಾಕಷ್ಟು ವಿಚಾರಗಳ ಬಗ್ಗೆ ಇಂದು ಸಂಜೆ ನಿಗದಿಯಾಗಿರುವ ಸಿಎಂ ಅವರೊಂದಿಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ಸದ್ಯ ತಾತ್ಕಾಲಿಕ ವಾಗಿ ಟೋಯಿಂಗ್ ಬಂದ್ ಮಾಡಿರುವ ಸಂಚಾರಿ ಪೊಲೀಸರು ಟೋಯಿಂಗ್ ಸಿಬ್ಬಂದಿಗೂ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಇಂದು ಮಧ್ಯಾಹ್ನ ಸಿಎಂ ಸಭೆಗೂ ಮುನ್ನ ಟ್ರಾಫಿಕ್ ಪೊಲೀಸ್ ಹಿರಿಯ ಅಧಿಕಾರಿಗಳು ಅರಮನೆ ಮೈದಾನದಲ್ಲಿ ಸಭೆ ನಡೆಸಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ