ETV Bharat / city

ಪುನೀತ್‌ ನಿವಾಸಕ್ಕೆ ಟಾಲಿವುಡ್​ ನಟ ನಾಗಾರ್ಜುನ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ - ಅಕ್ಕಿನೇನಿ ನಾಗಾರ್ಜುನ

ಕಳೆದ ಶುಕ್ರವಾರ ವಿಧಿವಶರಾಗಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರ ನಿವಾಸಕ್ಕೆ ಟಾಲಿವುಡ್‌ ನಟ ಅಕ್ಕಿನೇನಿ ನಾಗಾರ್ಜುನ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Telugu Actor Nagarjuna visits Puneeth Rajkumar residence at sadashivanagar, Bengaluru
ಪುನೀತ್‌ ನಿವಾಸಕ್ಕೆ ಟಾಲಿವುಟ್‌ ನಟ ನಾಗಾರ್ಜುನ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ
author img

By

Published : Nov 2, 2021, 5:29 PM IST

Updated : Nov 4, 2021, 7:02 PM IST

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ನಮ್ಮನ್ನು ಬಿಟ್ಟು ಹೋಗಿರುವುದನ್ನು ಕೇಳಿ ಆಘಾತವಾಯಿತು. ಈ ಕುರಿತು ಆಲೋಚಿಸಿದರೆ ನಿಜವಾಗಿಯೂ ಅವರು ನಮ್ಮನ್ನು ಅಗಲಿದ್ದಾರಾ? ಎನಿಸುತ್ತದೆ ಎಂದು ಟಾಲಿವುಡ್‌ ನಟ ಅಕ್ಕಿನೇನಿ ನಾಗಾರ್ಜುನ ಹೇಳಿದರು.

ಪುನೀತ್‌ ನಿವಾಸಕ್ಕೆ ಟಾಲಿವುಡ್​ ನಟ ನಾಗಾರ್ಜುನ ಭೇಟಿ

ಪುನೀತ್‌ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನಿಂದ ಈ ಸಾವನ್ನು ನಂಬಲಾಗುತ್ತಿಲ್ಲ. ಶಿವಣ್ಣನ ಬಳಿ ಏನು ಮಾತನಾಡಬೇಕೋ ತಿಳಿಯದು. ಪುನೀತ್‌ ಬಗ್ಗೆ ಎಲ್ಲರೂ ಒಳ್ಳೆಯ ಮಾತು ಬಿಟ್ಟರೆ ಬೇರೇನೂ ಮಾತನಾಡುತ್ತಿರಲಿಲ್ಲ ಎಂದು ಸ್ಮರಿಸಿದರು.

ಎಷ್ಟೋ ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದ ಪುನೀತ್‌, ಅನಾಥಾಶ್ರಮಗಳನ್ನೂ ನಡೆಸುತ್ತಿದ್ದರು. ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರತಿಭೆ ಇರುವವವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇಂತಹ ವ್ಯಕ್ತಿಯನ್ನು ವ್ಯಕ್ತಿಯನ್ನು ದೇವರು ಯಾಕಿಷ್ಟು ಬೇಗ ತೆಗೆದುಕೊಂಡು ಹೋದರು ಎಂಬುದಕ್ಕೆ ಉತ್ತರವಿಲ್ಲ. ನನಗೆ ಈಗಲೂ ಅವರು ಕುಟುಂಬಕ್ಕೆ ಏನು ಹೇಳಬೇಕು ಅಂತ ತೋಚುತ್ತಿಲ್ಲ. ಪುನೀತ್‌ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಅಕ್ಕಿನೇನಿ ನಾಗಾರ್ಜನ ಸಂತಾಪ ಸಲ್ಲಿಸಿದರು.

Last Updated : Nov 4, 2021, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.