ETV Bharat / city

ತಾಲ್ಲೂಕಿನ ಹೊರಗೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವರ್ಗಕ್ಕೆ ರಾಜ್ಯ ಸಿವಿಲ್ ಸೇವೆಗಳ ಬಿಲ್‌ ಮಂಡನೆ - ವಿಧಾನಸಭೆ ಅಧಿವೇಶನ ನೇರ ಪ್ರಸಾರ

ಜಿಲ್ಲೆಗಳ ಹೊರಗಡೆ ನಿಯೋಜನೆಯಾಗಿರುವ ಶಿಕ್ಷಕರಿಗೆ ವರ್ಗಾವಣೆ ಸ್ಥಳವನ್ನು ಆಯ್ಕೆ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಈ ವಿಧೇಯಕವನ್ನು ಮಂಡಿಸಲಾಗಿದೆ.

Teacher Transfer Control Amendment bill introduced in assembly
ವಿಧಾನಸಭೆಯಲ್ಲಿ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ) ವಿಧೇಯಕ ಮಂಡನೆ
author img

By

Published : Sep 16, 2021, 8:05 PM IST

ಬೆಂಗಳೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ-2021) ವಿಧೇಯಕವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.

ಜಿಲ್ಲೆಗಳ ಹೊರಗಡೆ ನಿಯೋಜನೆಯಾಗಿರುವ ಶಿಕ್ಷಕರಿಗೆ ವರ್ಗಾವಣೆ ಸ್ಥಳವನ್ನು ಆಯ್ಕೆ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಈ ವಿಧೇಯಕವನ್ನು ಮಂಡಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ತಾಲ್ಲೂಕಿನ ಹೊರಗಡೆ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ವಿಶೇಷಚೇತನ ಮಕ್ಕಳಿರುವ ಶಿಕ್ಷಕರು, 50 ವರ್ಷದ ಶಿಕ್ಷಕರು, ಅವಲಂಬಿತ ಮಕ್ಕಳಿರುವ ವಿಚ್ಛೇದಿತ ಶಿಕ್ಷಕರು ಹಾಗು ಅವಲಂಬಿತ ಮಕ್ಕಳಿರುವ ಗರ್ಭಿಣಿ ಶಿಕ್ಷಕಿಯರಿಗೆ 2019-20ನೇ ಸಾಲಿನಲ್ಲಿ ವರ್ಗಾವಣೆ ಮಾಡಲಾದ ಶಿಕ್ಷಕರಿಗೆ ನಿಯಮದಡಿ ವಿನಾಯಿತಿ ಕಲ್ಪಿಸಿಲ್ಲ. ಹೀಗಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಸಚಿವರು ಹೇಳಿದರು.

ತಾಲ್ಲೂಕು ಅಥವಾ ಜಿಲ್ಲೆಯ ಹೊರಗೆ ವರ್ಗಾವಣೆಯಾದ ಶಿಕ್ಷಕರಿಗೆ ತಾಲ್ಲೂಕು ಅಥವಾ ಜಿಲ್ಲೆಯೊಳಗೆ ಸ್ಥಳ ನಿಯುಕ್ತಿಯ ಪ್ರಯೋಜನವನ್ನು ಒಂದು ಬಾರಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಈ ವಿಧೇಯಕ ಕಲ್ಪಿಸುತ್ತಿದೆ. ಈಗಾಗಲೇ ಸರ್ಕಾರ ಅದ್ಯತಾದೇಶದ ಮೂಲಕ ಇದನ್ನು ಜಾರಿಗೆ ತಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.