ETV Bharat / city

ಶಿಕ್ಷಕ - ಪದವೀಧರ ಕ್ಷೇತ್ರಗಳ ಚುನಾವಣೆ: ಶೇ 71.10 ರಷ್ಟು ಮತದಾನ - ನಾಲ್ಕು ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆ

ನವೆಂಬರ್ 02 ರಂದು ಚುನಾವಣಾ ಫಲಿತಾಂಶ ಹೊರಬರಲಿದ್ದು, ಅಂದೇ ಅಭ್ಯರ್ಥಿಗಳ ಹಣೆ ಬರಹ ಗೊತ್ತಾಗಲಿದೆ. ವಿಧಾನ ಪರಿಷತ್​ನ ನಾಲ್ವರು ಸದಸ್ಯರ ಅವಧಿ ಜೂನ್ 30 ಕ್ಕೆ ಕೊನೆಯಾಗಿದ್ದರೂ ಕೊರೊನಾ ಕಾರಣಕ್ಕಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು.

Teacher-Graduate constituency election Voting news
ಶಿಕ್ಷಕ-ಪದವೀಧರರ ಕ್ಷೇತ್ರ ಚುನಾವಣೆ: ಶೇ 71.10 ರಷ್ಟು ಮತದಾನ
author img

By

Published : Oct 28, 2020, 8:14 PM IST

Updated : Oct 28, 2020, 10:32 PM IST

ಬೆಂಗಳೂರು: ವಿಧಾನ ಪರಿಷತ್ತಿಗೆ ಇಂದು ನಡೆದ ನಾಲ್ಕು ಶಿಕ್ಷಕ - ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟು ಶೇ 71.10 ರಷ್ಟು ಮತದಾನ ನಡೆದಿದೆ. ಬಹುತೇಕ ಶಾಂತಿಯುತ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

Teacher-Graduate constituency election Voting news
ಶಿಕ್ಷಕ-ಪದವೀಧರರ ಕ್ಷೇತ್ರ ಚುನಾವಣೆ: ಶೇ 71.10 ರಷ್ಟು ಮತದಾನ

ಅತಿ ಹೆಚ್ಚು ಮತದಾನ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಆಗಿದ್ದರೆ, ಅತಿ ಕಡಿಮೆ ಮತದಾನ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ನಡೆದಿದೆ. ಪಶ್ಚಿಮ ಪದವೀಧರ (ಬೆಳಗಾವಿ) ಕ್ಷೇತ್ರದಲ್ಲಿ ಶೇ 71.10 ರಷ್ಟು ಮತದಾನ ನಡೆದಿದ್ದರೆ, ಆಗ್ನೇಯ ಪದವೀಧರರ (ಬೆಂಗಳೂರು) ಕ್ಷೇತ್ರದಲ್ಲಿ ಶೇ. 75 ರಷ್ಟು ಮತ ಚಲಾವಣೆಯಾಗಿದೆ.

ಇನ್ನು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 73.32 ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ. 66 ರಷ್ಟು ಮತಗಳು ಚಲಾವಣೆಯಾಗಿವೆ.
ಎಲ್ಲ ಕ್ಷೇತ್ರಗಳಲ್ಲೂ ಬಹುತೇಕ ಶಾಂತಿಯುತ ಮತ ಚಲಾವಣೆಯಾಗಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿವೆ.

ನವೆಂಬರ್ 02 ರಂದು ಚುನಾವಣಾ ಫಲಿತಾಂಶ ಹೊರಬರಲಿದ್ದು, ಅಂದೇ ಅಭ್ಯರ್ಥಿಗಳ ಹಣೆಬರಹ ನಿಶ್ಚಯವಾಗಲಿದೆ. ವಿಧಾನ ಪರಿಷತ್​ನ ನಾಲ್ವರು ಸದಸ್ಯರ ಅವಧಿ ಜೂನ್ 30 ಕ್ಕೆ ಕೊನೆಯಾಗಿದ್ದರೂ ಕೊರೊನಾ ಕಾರಣಕ್ಕಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು.

ಕ್ಷೇತ್ರವಾರು ಮತದಾನ ವಿವರ:

* ದಾವಣಗೆರೆ- ಶೇ. 62.55 ರಷ್ಟು ಮತದಾನ

* ಹರಿಹರ- ಶೇ. 77 ರಷ್ಟು ಮತದಾನ

* ಕೊಪ್ಪಳ- ಶೇ. 80.86 ರಷ್ಟು ಮತದಾನ

* ಹೊಸಪೇಟೆ- ಶೇ. 77.92 ರಷ್ಟು ಮತದಾನ

* ಉತ್ತರಕನ್ನಡ- ಶೇ. 71.08 ರಷ್ಟು ಮತದಾನ

* ಬೀದರ್ - ಶಿಕ್ಷಕರ ಮತಕ್ಷೇತ್ರದ ಚುನಾವಣೆ - ಶೇ.74.40 ರಷ್ಟು ಮತದಾನ

* ರಾಯಚೂರು - ಶೇ.74.97ರಷ್ಟು ಮತದಾನ

* ಯಾದಗಿರಿ - ಶೇ.8159 ರಷ್ಟು ಮತದಾನ

Last Updated : Oct 28, 2020, 10:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.