ETV Bharat / city

ರಾಜ್ಯದಲ್ಲಿ ತೆರಿಗೆ ಸಂಗ್ರಹ ಶೇ. 43 ರಷ್ಟು ವೃದ್ಧಿ; ಕೇಂದ್ರದ ಜಿಎಸ್‌ಟಿ ಪರಿಹಾರ ಸ್ಥಗಿತದ್ದೇ ಆತಂಕ! - ರಾಜ್ಯದ ಬೊಕ್ಕಸ ಚೇತರಿಕೆ

ಕೋವಿಡ್‌ ಲಾಕ್‌ಡೌನ್‌ ಸಿಡಲಿಕೆ ಬಳಿಕ ಆರ್ಥಿಕತೆಯಲ್ಲಿ ರಾಜ್ಯ ಸುಧಾರಿಸಿಕೊಳ್ಳುತ್ತಿದ್ದು, ಕಳೆದ ವರ್ಷದ ಏಪ್ರಿಲ್-ಆಗಸ್ಟ್ ವರೆಗಿನ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಈ ವರ್ಷ ಶೇ. 43 ರಷ್ಟು ವೃದ್ಧಿಸಿದೆ. ಏಪ್ರಿಲ್-ಆಗಸ್ಟ್ ವರೆಗಿನ 43,409 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

Tax collection raised in karnataka
ರಾಜ್ಯದಲ್ಲಿ ತೆರಿಗೆ ಸಂಗ್ರಹ ಶೇ. 43 ರಷ್ಟು ವೃದ್ಧಿ; ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಸ್ಥಗಿತದ ಆತಂಕ!
author img

By

Published : Oct 1, 2021, 4:29 AM IST

ಬೆಂಗಳೂರು: ಕೋವಿಡ್ ಲಾಕ್‌ಡೌನ್‌ಗೆ ತತ್ತರಿಸಿದ ರಾಜ್ಯದ ಬೊಕ್ಕಸ ಚೇತರಿಕೆಯ ಹಾದಿ ಹಿಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತೆರಿಗೆ ಸಂಗ್ರಹ ಪ್ರಗತಿ ಉತ್ತಮವಾಗಿದೆ. ಆದರೆ, ಜಿಎಸ್‌ಟಿ ಪರಿಹಾರ ಈ ಆರ್ಥಿಕ ವರ್ಷಕ್ಕೆ ಕೊನೆಗೊಳ್ಳುತ್ತಿರುವುದು ಸರ್ಕಾರವನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಎರಡನೇ ಅಲೆಯ ಲಾಕ್‌ಡೌನ್ ಆರ್ಥಿಕ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತ್ತು. ರಾಜ್ಯದಲ್ಲಿ ಇದೀಗ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ. ಎರಡನೇ ಅಲೆ ಮುಗಿಯುವ ಲಕ್ಷಣ ಕಾಣುತ್ತಿದ್ದು, ಆರ್ಥಿಕ ಚಟುವಟಿಕೆ ಬಹುತೇಕ ಸಡಿಲಿಕೆಯಾಗುತ್ತಿರುವುದರಿಂದ ರಾಜ್ಯದ ಬೊಕ್ಕಸ ನಿಧಾನವಾಗಿ ತುಂಬುತ್ತಿದೆ. ತೆರಿಗೆ ಸಂಗ್ರಹದಲ್ಲಿ ಉತ್ತಮ ಚೇತರಿಕೆ ಕಾಣುತ್ತಿರುವುದು ಸರ್ಕಾರದ ಚಿಂತೆಯನ್ನು ಕಡಿಮೆಗೊಳಿಸಿದೆ. ಕಳೆದ ಲಾಕ್‌ಡೌನ್ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಲಾಕ್‌ಡೌನ್ ನಿಂದ ರಾಜ್ಯ ಬಹುಬೇಗ ಚೇತರಿಕೆ ಕಾಣುವ ಹಾದಿಯಲ್ಲಿದೆ.


ಈ ವರ್ಷ ಶೇ. 43 ರಷ್ಟು ತೆರಿಗೆ ಸಂಗ್ರಹದಲ್ಲಿ ವೃದ್ಧಿ:

ಕಳೆದ ವರ್ಷದ ರಾಷ್ಟ್ರೀಯ ಲಾಕ್‌ಡೌನ್‌‌ನಿಂದ ಚೇತರಿಸಿಕೊಳ್ಳಲು ಪರದಾಡಿದ್ದ ಕರ್ನಾಟಕ, ಈ ಬಾರಿಯ ಲಾಕ್‌ಡೌನ್ ಕೊಟ್ಟ ಏಟಿನಿಂದ ಶೀಘ್ರ ಚೇತರಿಕೆ ಕಾಣುತ್ತಿದೆ. ಈ ಬಾರಿಯ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ವರೆಗಿನ ತೆರಿಗೆ ಸಂಗ್ರಹ ಉತ್ತಮವಾಗಿದೆ.

Tax collection raised in karnataka
ರಾಜ್ಯದಲ್ಲಿ ತೆರಿಗೆ ಸಂಗ್ರಹ ಶೇ. 43 ರಷ್ಟು ವೃದ್ಧಿ; ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಸ್ಥಗಿತದ ಆತಂಕ!
ಆರ್ಥಿಕ ಇಲಾಖೆಯ ಅಂಕಿ ಅಂಶದ ಪ್ರಕಾರ, ಕಳೆದ ವರ್ಷದ ಏಪ್ರಿಲ್-ಆಗಸ್ಟ್ ವರೆಗಿನ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಈ ವರ್ಷ ಶೇ. 43 ರಷ್ಟು ವೃದ್ಧಿಸಿದೆ. ಇದು ಸೊರಗಿದ್ದ ರಾಜ್ಯದ ಬೊಕ್ಕಸಕ್ಕೆ ಬಲ ನೀಡುವಂತೆ ಮಾಡಿದೆ. ಈ ವರ್ಷ ಏಪ್ರಿಲ್-ಆಗಸ್ಟ್ ವರೆಗಿನ ಸ್ವಂತ ರಾಜಸ್ವ ಸಂಗ್ರಹದಲ್ಲಿ 43,409 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30,429 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲು ಸಾಧ್ಯವಾಗಿತ್ತು.ಅದೇ ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲೂ ಈ ಬಾರಿ ಕಳೆದ ವರ್ಷಕ್ಕಿಂತ ಗಣನೀಯ ವೃದ್ಧಿ ಕಂಡಿದೆ. ಏಪ್ರಿಲ್-ಆಗಸ್ಟ್ ವರೆಗೆ 3,966 ಕೋಟಿ ರೂ. ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 1,931 ಕೋಟಿ ರೂ. ತೆರಿಗೆಯೇತರ ರಾಜಸ್ವ ಸಂಗ್ರಹ ಮಾಡಲಾಗಿತ್ತು.‌ ಅಂದರೆ ಈ ವರ್ಷ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲಿ ಸುಮಾರು 105 ರಷ್ಟು ವೃದ್ಧಿ ಕಂಡಿದೆ.ತೆರಿಗೆ ಸಂಗ್ರಹದ ಏರಿಕೆ ಹೀಗಿದೆ:ವಾಣಿಜ್ಯ ತೆರಿಗೆ:ಕಳೆದ ಬಾರಿ-18,280 ಕೋಟಿ ರೂ.ಈ ಬಾರಿ- 26,227 ಕೋಟಿ ರೂ.ಅಬಕಾರಿ ತೆರಿಗೆ:ಕಳೆದ ಬಾರಿ- 7,755 ಕೋಟಿ ರೂ.ಈ ಬಾರಿ- 10,224 ಕೋಟಿ ರೂ.ಮೋಟಾರು ವಾಹನ ತೆರಿಗೆ:ಕಳೆದ ಬಾರಿ- 1,370 ಕೋಟಿ ರೂ.ಈ ಬಾರಿ- 2,183 ಕೋಟಿ ರೂ.ಮುದ್ರಾಂಕ ಮತ್ತು ನೋಂದಣಿ:ಕಳೆದ ಬಾರಿ- 2,848 ಕೋಟಿ ರೂ.ಈ ಬಾರಿ- 4,568 ಕೋಟಿ ರೂ.ಜಿಎಸ್‌ಟಿ ಪರಿಹಾರ ಸ್ಥಗಿತದ್ದೇ ದೊಡ್ಡ ಆತಂಕ:ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಗಸ್ಟ್ ವರೆಗಿನ ರಾಜಸ್ವ ಸಂಗ್ರಹ ಉತ್ತ‌ಮ ಚೇತರಿಕೆ ಕಾಣುತ್ತಿದೆ. ಇದು ಸರ್ಕಾರದ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೆ ಇದರ ಜೊತೆಗೆ ಕೋವಿಡ್ ಹೇರಿರುವ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವನ್ನು ಮುಂಬರುವ ಆರ್ಥಿಕ ಆಘಾತದ ಭಯವೂ ದೊಡ್ಡದಾಗಿ ಕಾಡುತ್ತಿದೆ.ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಜಿಎಸ್‌ಟಿ ಪರಿಹಾರ ಈ ಆರ್ಥಿಕ ವರ್ಷಕ್ಕೆ ಅಂತ್ಯವಾಗಲಿದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಈ ವರ್ಷ 18,109 ಕೋಟಿ ರೂ. ಜಿಎಸ್‍ಟಿ ಪರಿಹಾರ ನೀಡುವುದಾಗಿ ಹೇಳಿದೆ. ಅದರಲ್ಲಿ 8,542 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ಜಿಎಸ್‌ಟಿ ಪರಿಹಾರ ಧನ 2022ಕ್ಕೆ ಮುಕ್ತಾಯವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಖೋತಾ ಆಗುವ ಆತಂಕ ಎದುರಾಗಿದೆ. ಜಿಎಸ್‌ಟಿ ಪರಿಹಾರ ಧನ ಅಂತ್ಯವಾದರೆ ಇಲಾಖೆಗಳ ಅನುದಾನ ಕಡಿತಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ಕೋವಿಡ್ ಲಾಕ್‌ಡೌನ್ ನಿಂದ ಮುಂದಿನ ಐದು ವರ್ಷ ಆರ್ಥಿಕ ಸಂಕಷ್ಟ‌ ಇರಲಿದ್ದು, ಜಿಎಸ್‌ಟಿ ಪರಿಹಾರ ಮೊತ್ತ ಸ್ಥಗಿತ ರಾಜ್ಯದ ಆರ್ಥಿಕತೆಗೆ ದೊಡ್ಡ ಏಟು ನೀಡಲಿದೆ ಎಂಬ ಆತಂಕ ಎದುರಾಗಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮನವಿ:
ಹೀಗಾಗಿ ಜಿಎಸ್‌ಟಿ ಪರಿಹಾರ ಧನವನ್ನು ಮುಂದುವರಿಸುವಂತೆ ಸಿಎಂ ಬೊಮ್ಮಾಯಿ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮನವಿ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಜಿಎಸ್‌ಟಿ ಪರಿಹಾರ ಮೊತ್ತ ಮುಖ್ಯವಾಗಿದೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ಒಂದೆಡೆ ಕೇಂದ್ರ ಸರ್ಕಾರದ ಸಹಾಯಧನ, ತೆರಿಗೆ ಪಾಲಿನಲ್ಲಿ ಕಡಿತವಾಗಿದ್ದು, ಈ ಮಧ್ಯೆ ಜಿಎಸ್‌ಟಿ ಪರಿಹಾರ ಧನ ಸ್ಥಗಿತವಾದರೆ ರಾಜ್ಯದ ಆಡಳಿತ‌ ನಡೆಸುವುದೇ ದುಸ್ತರವಾಗಲಿದೆ.

ಸದ್ಯ ಸಿಎಂ ಬೊಮ್ಮಾಯಿ ಜಿಎಸ್‌ಟಿ ಮೇಲಿನ ಸಚಿವರುಗಳ ಗುಂಪಿನ ಅಧ್ಯಕ್ಷರಾಗಿ ನೇಮಕವಾಗಿರುವುದು ಕರ್ನಾಟಕದ ಪಾಲಿಕೆ ಉತ್ತಮ ಬೆಳವಣಿಗೆಯಾಗಿದೆ. ಜಿಎಸ್‌ಟಿ ಪರಿಹಾರವನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಇದು ಸಹಕಾರಿಯಾಗಲಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಕೋವಿಡ್ ಆರ್ಥಿಕ ಸಂಕಷ್ಟದಿಂದ ಹೊರಬರಲು ಜಿಎಸ್ ಟಿ ಪರಿಹಾರ ಧನವನ್ನೇ ಬಹುತೇಕ ನೆಚ್ಚಿಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.