ಬೆಂಗಳೂರು: ಮಳೆ ಅನಾಹುತ ಮತ್ತು ಸ್ಥಳೀಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನ 8 ವಲಯಗಳಿಗೆ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ದಾವೋಸ್ ಪ್ರವಾಸಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಎಂಟು ವಲಯಗಳ ಜವಾಬ್ದಾರಿಯನ್ನು ಸಚಿವರಿಗೆ ಹಂಚಿಕೆ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಿನದ ಮಳೆ ಅವಾಂತರ ಹಾಗೂ ಮಳೆಗಾಲ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಾಚರಣೆಗೆ ಪೂರಕವಾಗಿ ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಕಾರ್ಯಪಡೆ ನೇತೃತ್ವದ ವಿವರ:
- ಕಂದಾಯ ಸಚಿವ ಆರ್ .ಅಶೋಕ್- ದಕ್ಷಿಣ ವಲಯ.
- ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್- ಪೂರ್ವ ವಲಯ.
- ವಸತಿ ಸಚಿವ ವಿ. ಸೋಮಣ್ಣ- ಪಶ್ಚಿಮ ವಲಯ.
- ಸಹಕಾರ ಸಚಿವ ಎಸ್.ಟಿ ಸೋಮಶೇಖರ್- ಆರ್ಆರ್ ನಗರ ವಲಯ.
- ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್- ಮಹದೇವಪುರ ವಲಯ.
- ಅಬಕಾರಿ ಸಚಿವ ಕೆ. ಗೋಪಾಲಯ್ಯ- ಬೊಮ್ಮನಹಳ್ಳಿ ವಲಯ.
- ತೋಟಗಾರಿಕಾ ಸಚಿವ ಮುನಿರತ್ನ- ಯಲಹಂಕ ಮತ್ತು ದಾಸರಹಳ್ಳಿ ವಲಯ.
ಇದನ್ನೂ ಓದಿ: ಮಳೆಗೆ ತತ್ತರಿಸಿದ ಬೆಂಗಳೂರು: ಜಿಲ್ಲಾ ಉಸ್ತುವಾರಿ ಬದಲಾಗುತ್ತಾ, ಸಿಎಂ ಪ್ಲಾನ್ ಏನು?