ETV Bharat / city

ನೇರವಾಗಿ ಶಿಕ್ಷಣ ಸಚಿವರೊಂದಿಗೆ ಮಾತನಾಡುವ ‘ಸಂವೇದನಾ’ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ - ಸಂವೇದನಾ ಫೋನ್ ಇನ್ ಕಾರ್ಯಕ್ರಮ ನ್ಯೂಸ್​

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಕುರಿತು ಶಾಲಾ ಪರಿಸರದಿಂದಲೇ ಮಾಹಿತಿ ತಿಳಿದುಕೊಳ್ಳಲು ಅನುವಾಗುವಂತಹ ಹಾಗೂ ಶಿಕ್ಷಣ ಸಚಿವರೊಂದಿಗೆ ಮಾತನಾಡುವ ‘ಸಂವೇದನಾ’ ಸಂವಾದ ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು.‌‌

ಫೋನ್ ಇನ್ ಕಾರ್ಯಕ್ರಮ
author img

By

Published : Nov 2, 2019, 9:32 PM IST

ಬೆಂಗಳೂರು: ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಕುರಿತು ಶಾಲಾ ಪರಿಸರದಿಂದಲೇ ಮಾಹಿತಿ ತಿಳಿದುಕೊಳ್ಳಲು ಅನುವಾಗುವಂತಹ ಹಾಗೂ ಶಿಕ್ಷಣ ಸಚಿವರೊಂದಿಗೆ ಮಾತನಾಡುವ ‘ಸಂವೇದನಾ’ ಸಂವಾದ ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು.‌‌

ಶಾಲೆಗಳ, ಶಿಕ್ಷಕರ ಹಾಗೂ ಮಕ್ಕಳ ಸ್ಥಿತಿಗತಿ ಅರಿತುಕೊಳ್ಳಲು ಇಲಾಖೆಯಿಂದಲೇ ‘ಸಂವೇದನಾ’ ಎಂಬ ಹೊಸ ಫೋನ್ ಇನ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಸುಸಜ್ಜಿತವಾಗಿ ಬೆಳಗ್ಗೆ 11ಕ್ಕೆ ಫೋನ್-ಇನ್ ಥಿಯೇಟರ್​ನಲ್ಲಿ ಫೋನ್​ ಕರೆಗಳು ಪ್ರಾರಂಭವಾದವು. ಶಿಕ್ಷಕರು, ಪೋಷಕರು, ಎಸ್​ಡಿಎಂಸಿ ಅಧ್ಯಕ್ಷರು ತಮ್ಮ ಶಾಲೆ, ಶಾಲಾ ಕಟ್ಟಡ, ಶಿಕ್ಷಕರ ಕೊರತೆ, ಕಂಪ್ಯೂಟರ್ ಕೊರತೆ, ಬ್ಯಾಟರಿ, ಸಮವಸ್ತ್ರ, ಮಕ್ಕಳ ಶೂಗಳ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಕೇಳಿದರು.

ಬೀದರ್, ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಗಳ 38 ಮಂದಿ ಸಚಿವರಿಗೆ ಕರೆ ಮಾಡಿ 44 ಪ್ರಶ್ನೆಗಳನ್ನು ಕೇಳಿದರು. ಬಹುತೇಕ ಮಂದಿ ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ನಿರ್ಮಾಣ ಕುರಿತು ಪ್ರಶ್ನೆಗಳನ್ನು ಕೇಳಿದರೆ, ಹಲವರು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೈಗೊಳ್ಳಬಹುದಾದ ಉಪ ಕ್ರಮಗಳ ಕುರಿತು ಸಲಹೆ ನೀಡಿದರು. ನೀಟ್ ಪರೀಕ್ಷೆ ಫಲಿತಾಂಶವನ್ನು ಪಿಯುಸಿ ಪರೀಕ್ಷೆಯ ನಂತರವೇ ಪ್ರಕಟಿಸುವಂತಾಗಬೇಕು. ನೀಟ್​ ಫಲಿತಾಂಶ ಪಿಯು ಪರೀಕ್ಷೆಗಿಂತ ಮೊದಲೇ ಪ್ರಕಟವಾದರೆ ಮಕ್ಕಳು ಪಿಯು ಪರೀಕ್ಷೆಯ ಮೇಲೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ಮಧುಗಿರಿ ತಾಲೂಕಿನ ಬಿಜವಾರದ ಶಿಕ್ಷಕ ನಾಗರಾಜ ಸಲಹೆ ನೀಡಿದರು.

ಸಂವೇದನಾ-ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಸುರೇಶ್ ಕುಮಾರ್, ಮೊದಲನೇ ಸಂವಾದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ ಮಕ್ಕಳು ಸಹ ಮಾತನಾಡಿದ್ದರೆ ಹೆಚ್ಚಿನ ನೈಜ ವಿಚಾರಗಳು ದೊರೆಯುತ್ತಿದ್ದವು. ಮುಂದಿನ ಬಾರಿ ಮಕ್ಕಳು ಮಾತನಾಡುವಂತೆ ಪ್ರೇರೇಪಿಸಲಾಗುವುದು. ಇಂದು ದೊರೆತ ಸ್ಪಂದನೆಯಿಂದಾಗಿ ಈ ಸಂವೇದನಾ ಸಂವಾದವನ್ನು ಮುಂದುವರೆಸುವ ಉತ್ಸುಕತೆ ಉಂಟಾಗಿದ್ದು, ಶಿಕ್ಷಣ-ಶಾಲೆಗಳ ಕುರಿತು ಒಂದು ಉತ್ತಮವಾದ ಮಾಹಿತಿ ದೊರೆತಂತಾಗಿದೆ ಎಂದರು. ತಿಂಗಳಲ್ಲಿ ಎರಡು ಬಾರಿ ಸಂವೇದನಾ ಸಂವಾದ ನಡೆಯಲಿದೆ ಎಂದರು.

Intro:ಹೆಲೋ ಮಿನಿಸ್ಟರ್; ಎಜುಕೇಷನ್ ಮಿನಿಸ್ಟರ್ ರೊಂದಿಗೆ ಫೋನ್ ಇನ್ ಹೊಸ ಕಾರ್ಯಕ್ರಮಕ್ಕೆ ಚಾಲನೆ..

ಬೆಂಗಳೂರು: ಶಿಕ್ಷಣ ಸಚಿವರೊಂದಿಗೆ ಮಾತನಾಡುವ ವೇದಿಕೆ- ‘ಸಂವೇದನಾ’-ಸಂವಾದಕ್ಕೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು..‌‌ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಕುರಿತು ಶಾಲಾ ಪರಿಸರದಿಂದಲೇ ತಿಳಿದುಕೊಳ್ಳಲು ಅನುವಾಗುವಂತೆ ಹಾಗೂ ಶಾಲೆಗಳ, ಶಿಕ್ಷಕರ ಹಾಗೂ ಮಕ್ಕಳ ಸ್ಥಿತಿಗತಿ ಅರಿತುಕೊಳ್ಳಲು ಇಲಾಖೆಯಿಂದಲೇ ‘ಸಂವೇದನಾ’ ಎಂಬ ಹೊಸ ಫೋನ್- ಇನ್ ವೇದಿಕೆಯನ್ನು ಉದ್ಘಾಟನೆ ಮಾಡಲಾಯಿತು..‌

ಸುಸಜ್ಜಿತವಾಗಿ ಸಜ್ಜುಗೊಳಿಸಲಾಗಿದ್ದ ಫೋನ್-ಇನ್ ಥಿಯೇಟರ್ ನಲ್ಲಿ ಬೆಳಗ್ಗೆ 11ಕ್ಕೆ ಫೋನ್ಕರೆಗಳು ಪ್ರಾರಂಭವಾದವು.
ಶಿಕ್ಷಕರು, ಪೋಷಕರು, ಎಸ್ ಡಿಎಂಸಿ ಅಧ್ಯಕ್ಷರುಗಳು ತಮ್ಮ ಶಾಲೆಗಳು, ಶಾಲಾ ಕಟ್ಟಡಗಳು, ಶಿಕ್ಷಕರ ಕೊರತೆ, ಕಂಪ್ಯೂಟರ್ ಕೊರತೆ, ಬ್ಯಾಟರಿ, ಸಮವಸ್ತ್ರದಿಂದ ಹಿಡಿದು ಮಕ್ಕಳ ಶ್ಯೂ ಸಾಕ್ಸ್ ಗುಣಮಟ್ಟದ ವರೆಗೂ ಪ್ರಶ್ನೆಗಳು ಕೇಳಿದರು.

ಬೀದರ್ ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೂ  38 ಮಂದಿ ಸಚಿವರಿಗೆ ಫೋನ್ ಕರೆ ಮಾಡಿ 44 ಪ್ರಶ್ನೆಗಳನ್ನು ಕೇಳಿದರು. ಬಹುತೇಕ ಮಂದಿ ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ನಿರ್ಮಾಣ ಕುರಿತು ಪ್ರಶ್ನೆಗಳನ್ನು ಕೇಳಿದರೆ ಹಲವಾರು ಮಂದಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೈಗೊಳ್ಳಬಹುದಾದ  ಉಪಕ್ರಮಗಳ ಕುರಿತು ಸಲಹೆ ನೀಡಿದರು.

ಇನ್ನು ನೀಟ್ ಪರೀಕ್ಷೆ ಫಲಿತಾಂಶವನ್ನು ಪಿಯುಸಿ ಪರೀಕ್ಷೆಯ ನಂತರವೇ ಪ್ರಕಟಿಸುವಂತಾಗಬೇಕು. ನೀಟ್ ನಲ್ಲಿ ಫಲಿತಾಂಶ ಪಿಯು ಪರೀಕ್ಷೆಗಿಂತ ಮೊದಲೇ ಪ್ರಕಟವಾದರೆ ಮಕ್ಕಳು ಪಿಯು ಪರೀಕ್ಷೆಯ ಮೇಲೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ಮಧುಗಿರಿ ತಾಲೂಕಿನ ಬಿಜವಾರದ  ಶಿಕ್ಷಕ ನಾಗರಾಜ ಸಲಹೆ ನೀಡಿದರಲ್ಲದೇ ನನ್ನ ಸೇವಾವಧಿ ತನಕವೂ ಪ್ರತಿ ತಿಂಗಳೂ ತಮ್ಮ ವೇತನದಲ್ಲಿ ಮಾಸಿಕ ಒಂದು ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ನೈಸರ್ಗಿಕ ವಿಕೋಪ ನಿಧಿಗೆ ಕಡಿತಗೊಳಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಿ ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ನೆಟ್ ಸಮಸ್ಯೆಯಿಂದ ದಾಖಲೆಗಳನ್ನು ಅಪ್ ಲೋಡ್ ಸಮಸ್ಯೆ,
ಸಂಡೂರು ತಾಲೂಕಿನ ತುಂಟಿ ತಾಂಡ್ಯಾದ ಸರ್ಕಾರಿ ಪ್ರೌಢಶಾಲೆ ಬೀಳುವ ಸ್ಥಿತಿಯಲ್ಲಿರುವುದು,, ಕನಕಪುರದ ಉರ್ದು ಶಾಲೆಯ ಶಿಕ್ಷಕರ ಕೊರತೆ, ಕೂಡ್ಲಿಗಿ ತಾಲೂಕಿನ ಅತಿಥಿ ಶಿಕ್ಷಕರ ವೇತನ ಸೇರಿದಂತೆ ಹೀಗೆ‌ಹಲವು ಸಮಸ್ಯೆಗಳ ಸರಮಾಲೆಯೇ ಸಚಿವರ ಮುಂದೆ ಬಂದವು..‌

ಸಂವೇದನಾ-ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್. ಸುರೇಶ್ ಕುಮಾರ್, ಮೊದಲನೇ ಸಂವಾದ  ಕಾರ್ಯಕ್ರಮಕ್ಕೆ ಉತ್ತಮ ಸಂವೇದನೆ ವ್ಯಕ್ತವಾಗಿದೆ. ಆದರೆ ಮಕ್ಕಳು ಸಹ ಮಾತನಾಡಿದ್ದರೆ ಅನುಕೂಲವಾಗಿ ಹೆಚ್ಚಿನ ನೈಜ ವಿಚಾರಗಳು ದೊರೆಯುತ್ತಿದ್ದವು, ಮುಂದಿನ ಬಾರಿ ಮಕ್ಕಳು ಮಾತನಾಡುವಂತೆ ಪ್ರೇರೇಪಿಸಲಾಗುವುದು ಎಂದರು. ಇಂದು ದೊರೆತೆ ಸ್ಪಂದನೆಯಿಂದಾಗಿ  ಈ ಸಂವೇದನಾ-ಸಂವಾದವನ್ನು ಮುಂದುವರೆಸುವ ಉತ್ಸುಕತೆ ಉಂಟಾಗಿದ್ದು, ಶಿಕ್ಷಣ-ಶಾಲೆಗಳ ಕುರಿತು ಒಂದು ಉತ್ತಮವಾದ  ಮಾಹಿತಿ ದೊರೆತಂತಾಗಿದೆ ಎಂದರು. ತಿಂಗಳಲ್ಲಿ ಎರಡು ಬಾರಿ ಸಂವೇದನಾ-ಸಂವಾದ ನಡೆಯಲಿದೆ ಅಂದರು..‌

ಇನ್ನು‌ಇದೇ ವೇಳೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾ.ಶಿ. ಆಯುಕ್ತ ಕೆ.ಜಿ. ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ಎಂ.ಟಿ. ರೇಜು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

KN_BNG_5_EDUCATION_MINISTER_PHONEIN_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.