ETV Bharat / city

ಕೊಳೆತ ಕೋವಿಡ್‌ ಶವ ಪತ್ತೆ ಕೇಸಲ್ಲಿ ಶಾಸಕ ಸುರೇಶ್‌ ಕುಮಾರ್‌ ನುಣುಚಿಕೊಳ್ಳಲು ಯತ್ನ : ಎಎಪಿ

ಕೋವಿಡ್‌ ಸಾವಿಗೆ ಸಂಬಂಧಿಸಿ ಸುಳ್ಳು ಲೆಕ್ಕ ನೀಡುವ ಉದ್ದೇಶದಿಂದಲೇ ಹೀಗೆ ಮಾಡಿರುವ ಸಂಶಯವಿದೆ. ಆಸ್ಪತ್ರೆಯ ಉನ್ನತ ಅಧಿಕಾರಿಗಳನ್ನು ಬಂಧಿಸಿ ತನಿಖೆ ನಡೆಸಿದರೆ ಮಾತ್ರ ಸತ್ಯ ಹೊರಬರಲಿದೆ. ಇನ್ನೂ ಎಷ್ಟು ಶವಗಳನ್ನು ಮುಚ್ಚಿಡಲಾಗಿತ್ತು, ಇದಕ್ಕೆ ಅಸಲಿ ಕಾರಣವೇನು ಎಂಬುದು ಬೆಳಕಿಗೆ ಬರಬೇಕು ಎಂದು ಬಿ ಟಿ ನಾಗಣ್ಣ ಆಗ್ರಹಿಸಿದ್ದಾರೆ..

suresh kumar trying to escape in esi hospital covid dead bodies found case; aap
ಕೊಳೆತ ಕೋವಿಡ್‌ ಶವ ಪತ್ತೆ ಕೇಸಲ್ಲಿ ಶಾಸಕ ಸುರೇಶ್‌ ಕುಮಾರ್‌ ನುಣುಚಿಕೊಳ್ಳಲು ಯತ್ನ; ಎಎಪಿ
author img

By

Published : Nov 30, 2021, 2:26 PM IST

ಬೆಂಗಳೂರು : ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟ 15 ತಿಂಗಳ ಬಳಿಕ ಇಬ್ಬರು ಕೋವಿಡ್‌ ರೋಗಿಗಳ ಶವಗಳು ಪತ್ತೆಯಾದ ಪ್ರಕರಣ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ನಡುವೆ ಘಟನೆಗೆ ಸಂಬಂಧಿಸಿ ಮಾಜಿ ಸಚಿವ ಸುರೇಶ್‌ ಕುಮಾರ್‌ ಸರ್ಕಾರಕ್ಕೊಂದು ಪತ್ರ ಬರೆದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಎಪಿಯ ಬೆಂಗಳೂರು ನಗರ ಉಪಾಧ್ಯಕ್ಷ ಹಾಗೂ ರಾಜಾಜಿನಗರ ಉಸ್ತುವಾರಿ ಬಿ.ಟಿ.ನಾಗಣ್ಣ, ಇಎಸ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಇಬ್ಬರು ಕೋವಿಡ್‌ ರೋಗಿಗಳ ಶವ ಬರೋಬ್ಬರಿ 15 ತಿಂಗಳ ಬಳಿಕ ಪತ್ತೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಕೋವಿಡ್‌ ರೋಗಿಗಳನ್ನು ಸರ್ಕಾರ ಎಷ್ಟು ಹೀನಾಯವಾಗಿ ನೋಡಿಕೊಂಡಿದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆ ಎಂದು ಹೇಳಿದ್ದಾರೆ.

ಸುರೇಶ್‌ ಕುಮಾರ್‌ ಶಾಸಕ ಹಾಗೂ ಸಚಿವರಾಗಿದ್ದ ಸಂದರ್ಭದಲ್ಲೇ ಪ್ರಕರಣ ನಡೆದಿದೆ. ಅವರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ. ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕು.

ಅವರು ಉಸ್ತುವಾರಿ ಸಚಿವರಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಒಂದೇ ದಿನ 24 ಮಂದಿ ಮೃತಪಟ್ಟಿದ್ದರು. ಈಗ ಅವರದೇ ಕ್ಷೇತ್ರದ ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ಬಯಲಾಗಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಸುಳ್ಳು ಲೆಕ್ಕ ತೋರಿಸಲು ಹೀಗೆ ಮಾಡಿದ್ರಾ'?

ಶವಾಗಾರದಲ್ಲಿ ಶವ ಇಟ್ಟ ನಂತರ ಅದರ ಮೇಲೆ ಸ್ಟಿಕ್ಕರ್‌ ಅಂಟಿಸುವ ಪದ್ಧತಿಯನ್ನು ಇಎಸ್‌ಐನಲ್ಲಿ ಅನುಸರಿಸಲಾಗುತ್ತದೆ. ಆದರೆ, ಈ ಶವಗಳಿಗೆ ಸ್ಟಿಕ್ಕರ್‌ ಅಂಟಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕೋವಿಡ್‌ ಸಾವಿಗೆ ಸಂಬಂಧಿಸಿ ಸುಳ್ಳು ಲೆಕ್ಕ ನೀಡುವ ಉದ್ದೇಶದಿಂದಲೇ ಹೀಗೆ ಮಾಡಿರುವ ಸಂಶಯವಿದೆ. ಆಸ್ಪತ್ರೆಯ ಉನ್ನತ ಅಧಿಕಾರಿಗಳನ್ನು ಬಂಧಿಸಿ ತನಿಖೆ ನಡೆಸಿದರೆ ಮಾತ್ರ ಸತ್ಯ ಹೊರಬರಲಿದೆ. ಇನ್ನೂ ಎಷ್ಟು ಶವಗಳನ್ನು ಮುಚ್ಚಿಡಲಾಗಿತ್ತು, ಇದಕ್ಕೆ ಅಸಲಿ ಕಾರಣವೇನು ಎಂಬುದು ಬೆಳಕಿಗೆ ಬರಬೇಕು ಎಂದು ಬಿ ಟಿ ನಾಗಣ್ಣ ಆಗ್ರಹಿಸಿದ್ದಾರೆ.

ರೋಗಿಯ ಕುಟುಂಬ ಸದಸ್ಯರು ಸರ್ಕಾರ ಹಾಗೂ ಆಸ್ಪತ್ರೆಯ ಮೇಲೆ ಭರವಸೆಯಿಟ್ಟು ರೋಗಿಗಳನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್‌ ರೋಗಿ ಮೃತಪಟ್ಟಾಗ ಶವ ಸೂಕ್ತ ರೀತಿಯಲ್ಲಿ ಗೌರವದಿಂದ ಅಂತ್ಯಕ್ರಿಯೆ ಮಾಡುವುದು ಅಥವಾ ಕುಟುಂಬಕ್ಕೆ ಹಸ್ತಾಂತರಿಸುವುದು ಆಸ್ಪತ್ರೆ ಜವಾಬ್ದಾರಿಯಾಗಿದೆ.

ಅದರ ಬದಲು ಈ ರೀತಿ 15 ತಿಂಗಳ ಕಾಲ ಕೊಳೆಯುವಂತೆ ಮಾಡಿರುವುದು ಅತ್ಯಂತ ಅಮಾನವೀಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕೆಂದು ಒತ್ತಾಯಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.