ETV Bharat / city

ರಾಜ್ಯ ರಾಜಕೀಯದಲ್ಲಿ ಮತ್ತೊಂದು ತಿರುವು... ಏನಿದು? ಅನರ್ಹರಿಗೇಕೆ ಭಯ? - ಬಿಜೆಪಿ ಆಪರೇಷನ್​ ಕಮಲ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಪ್ರಕರಣ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಹೀಗಾಗಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್​​​ನತ್ತ ನೆಟ್ಟಿದೆ.

ಯಡಿಯೂರಪ್ಪ ವಿಡಿಯೋ ಬಹಿರಂಗ
author img

By

Published : Nov 5, 2019, 8:00 PM IST

Updated : Nov 5, 2019, 9:09 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಬ್ಬಳ್ಳಿಯ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಪ್ರಕರಣ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿರುವುದರಿಂದ ರಾಜ್ಯ ರಾಜಕೀಯ ಮತ್ತೊಂದು ತಿರುವು ಪಡೆದಿದೆ.

ನವೆಂಬರ್ 11ರೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಉಪಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಆಪರೇಷನ್ ಕಮಲದಲ್ಲಿ ಕೇಂದ್ರ ನಾಯಕರು ಮುಜುಗರ ಎದುರಿಸಬಹುದೆಂಬ ಆತಂಕದಲ್ಲಿರುವ ರಾಜ್ಯ ಬಿಜೆಪಿ ನಾಯಕರಿಗೆ ವಿಡಿಯೋ ಹೊರಬಂದ ಪರಿಣಾಮ ಮತ್ತಷ್ಟು ಕಿರಿಕಿರಿ ಎದುರಿಸುವಂತಾಗಿದೆ.

ನೂರು ದಿನ ಪೂರೈಸಿ ಬೀಗುತ್ತಿರುವ ಬಿಜೆಪಿ ಸರ್ಕಾರಕ್ಕೆ ಈ ವಿಡಿಯೋ ಮತ್ತೊಂದು ಪೆಟ್ಟುಕೊಟ್ಟಿದೆ. ಅಲ್ಲದೆ, ಈ ವಿಡಿಯೋ ಪ್ರತಿಪಕ್ಷಗಳಿಗೆ ಮೃಷ್ಟಾನ್ನ ಭೋಜನವಾಗಿದೆ. ಈ ಎಲ್ಲದರ ಬೆಳವಣಿಗೆ ಗಮನಿಸುತ್ತಿರುವ ಕೇಂದ್ರದ ವರಿಷ್ಠರು ಗರಂ ಆಗಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ವಿಡಿಯೋದಲ್ಲಿ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ದೊಡ್ಡ ತಲೆನೋವಿಗೆ ಕಾರಣವಾಗಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪದೇ ಪದೇ ಅಮಿತ್ ಶಾ ಉತ್ತರಿಸಲಿ ಎಂದು ಆಗ್ರಹಿಸುತ್ತಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಹ ಈ ವಿಷಯ ಪ್ರಧಾನಿ ಮೋದಿ ಅವರಿಗೂ ಗೊತ್ತಿದೆ ಎಂದಿದ್ದಾರೆ. ಹೀಗಾಗಿ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನಾಯಕರು ಮುಜುಗರಕ್ಕೆ ಒಳಗಾಗುವಂತಾಗಿದೆ. ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಮೈತ್ರಿ ಸರ್ಕಾರವನ್ನು ಪತನಗೊಳಿಸಿತು ಎಂದು ಹಿಂದೆ ಆರೋಪಗಳು ಕೇಳಿಬರುತ್ತಿದ್ದವು. ವೈರಲ್​ ಆಗಿರುವ ವಿಡಿಯೋ ಆ ಆರೋಪಗಳಿಗೆ ಪುಷ್ಟಿ ನೀಡಿದೆ.

ಅನರ್ಹ ಶಾಸಕರಿಗೆ ಢವ ಢವ: ಇನ್ನೇನು ತೀರ್ಪು ಹೊರಬೇಕಾಗಿದ್ದ ಸಮಯದಲ್ಲಿ ದಿಢೀರ್ ಬೆಳವಣಿಗೆಯಲ್ಲಿ ಈ ವಿಡಿಯೋ ವಿದ್ಯಾಮಾನ ಅನರ್ಹ ಶಾಸಕರಿಗೂ ಆತಂಕ ಮೂಡಿಸಿದೆ. ತಮ್ಮ ಪರ ತೀರ್ಪು ಬರುವುದೆಂಬ ವಿಶ್ವಾಸದಲ್ಲಿ ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ನ್ಯಾಯಾಲಯ ವಿಡಿಯೋ ಕುರಿತು ವಿಚಾರಣೆಗೆ ಒಪ್ಪಿರುವುದರಿಂದ ಚುನಾವಣೆ ಮುಂದಕ್ಕೆ ಹೋಗಬಹುದೆಂಬ ಆತಂಕದಲ್ಲಿದ್ದಾರೆ ಅನರ್ಹರು. ಒಟ್ಟಾರೆ, ಈಗ ಎಲ್ಲರ ಚಿತ್ತ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.

Intro:ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹುಬ್ಬಳ್ಳಿಯ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಪ್ರಕರಣ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿರುವುದರಿಂದ ರಾಜ್ಯ ರಾಜಕೀಯದಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ. Body:ನವೆಂಬರ್ 11 ರ ಒಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಉಪಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಆಪರೇಷನ್ ಕಮಲ ವಿಷಯದಲ್ಲಿ ಕೇಂದ್ರ ನಾಯಕರು ಮುಜುಗರ ಎದುರಿಸಬಹುದೆಂಬ ಆತಂಕದಲ್ಲಿರುವ ರಾಜ್ಯ ಬಿಜೆಪಿ ನಾಯಕರಿಗೆ ಇದೀಗ ವಿಡಿಯೋ ಹೊರಬಂದಿರುವುದು ಮತ್ತಷ್ಟು ಕಿರಿಕಿರಿ ಎದುರಿಸುವಂತಾಗಿದೆ. ನೂರು ದಿನ ಪೂರೈಸಿ ಬೀಗುತ್ತಿರುವ ಬಿಜೆಪಿ ಸರ್ಕಾರಕ್ಕೆ ಯಡಿಯೂರಪ್ಪನವರದು ಎನ್ನಲಾದ ಈ ವಿಡಿಯೋ ಮತ್ತೊಂದು ಪೆಟ್ಟುಕೊಟ್ಟಿದೆ. ಪ್ರತಿಪಕ್ಷಗಳಿಗೆ ಇದೊಂದು ಅಸ್ತ್ರವಾಗಿದೆ. ಈ ಎಲ್ಲದರ ಬೆಳವಣಿಗೆಯನ್ನು ಗಮನಿಸುತ್ತಿರುವ ಕೇಂದ್ರದ ವರಿಷ್ಠರು ಗರಂ ಆಗಿದ್ದಾರೆ ಎನ್ನಲಾಗಿದೆ.
ಮುಖ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಬಗ್ಗೆ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ದೊಡ್ಡ ತಲೆನೋವಿಗೆ ಕಾರಣವಾಗಿದೆ. ಇನ್ನು ಇದೇ ಅಸ್ತ್ರವನ್ನು ಗುರಿಯಾಗಿರಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಪದೇ ಪದೇ ಅಮಿತ್ ಷಾ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ. ಇನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ಮುಜುಗರಕ್ಕೆ ಒಳಗಾಗುವಂತಾಗಿದೆ.
ಪ್ರತಿಪಕ್ಷಗಳಿಗೆ ಅಸ್ತ್ರವಾದ ಬಿಎಸ್ ವೈ ವಿಡಿಯೋ : ಸಿಎಂ ಯಡಿಯೂರಪ್ಪನವರು ಮಾತನಾಡಿರುವ ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಚುರುಕುಗೊಂಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ಮಾಡಿ ಮೈತ್ರಿ ಸರ್ಕಾರವನ್ನು ಪತನಗೊಳಿಸಿತು. ಯಡಿಯೂರಪ್ಪನವರ ವಿಡಿಯೋ ಹಾಗೂ ಆಡಿಯೋದಿಂದ ಇದೀಗ ಅದು ನಿಜವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಆನರ್ಹ ಶಾಸಕರಿಗೂ ಢವ ಢವ : ಇನ್ನೇನು ತೀರ್ಪು ಮಾತ್ರ ಬಾಕಿ ಇರುವಾಗಲೇ ದಿಢೀರ್ ಬೆಳವಣಿಗೆಯಲ್ಲಿ ಈ ವಿಡಿಯೋ ವಿದ್ಯಮಾನ ಅನರ್ಹ ಶಾಸಕರಿಗೂ ಆತಂಕ ಮೂಡಿದೆ. ತಮ್ಮ ಪರ ತೀರ್ಪು ಬರುವದೆಂಬ ವಿಶ್ವಾಸದಲ್ಲಿ ಉಪ ಚುನಾವಣೆಗೆ ಸಿದ್ಧತೆ ಸಹ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈಗ ನ್ಯಾಯಾಲಯ ವಿಡಿಯೋ ಕುರಿತು ವಿಚಾರಣೆಗೆ ಒಪ್ಪಿರುವುದರಿಂದ ಚುನಾವಣೆ ಮುಂದಕ್ಕೆ ಹೋಗಬಹುದೆಂಬ ಆತಂಕ ಅವರದ್ದು. ಒಟ್ಟಾರೆ, ಈಗ ಎಲ್ಲರ ಚಿತ್ತ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ.
Conclusion:
Last Updated : Nov 5, 2019, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.