ETV Bharat / city

ಏ.24ರಿಂದ ಮೇ 23ರವರೆಗೆ ಹೈಕೋರ್ಟ್ ಪೀಠಗಳಿಗೆ ಬೇಸಿಗೆ ರಜೆ

author img

By

Published : Apr 23, 2021, 9:33 PM IST

ರಜಾ ಅವಧಿಯಲ್ಲಿ ಏಪ್ರಿಲ್ 23 ಕ್ಕಿಂತ ಹಿಂದೆ ಸಲ್ಲಿಕೆಯಾಗಿರುವ ಪ್ರಕರಣಗಳಲ್ಲಿ ತುರ್ತು ವಿಚಾರಣೆ ಅಗತ್ಯವಿದ್ದರೆ ಈ ಸಂಬಂಧ ವಕೀಲರು ಅಥವಾ ಪಾರ್ಟಿ- ಇನ್ - ಪರ್ಸನ್ ಪ್ರಕರಣದ ವಿಚಾರಣೆ ಕೋರಿ ನ್ಯಾಯಾಂಗ ರಿಜಿಸ್ಟ್ರಾರ್ ಅವರ ಇ-ಮೇಲ್ (regjudicial@hck.gov.in) ಗೆ ಮೆಮೋ ಕಳಿಸುವಂತೆ ತಿಳಿಸಲಾಗಿದೆ.

Summer vacation for High Courts
Summer vacation for High Courts

ಬೆಂಗಳೂರು : ಏ.24 ರಿಂದ ಮೇ 23ರವರೆಗೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಹಾಗೂ ಧಾರವಾಡ ಪೀಠಗಳಿಗೆ ಬೇಸಿಗೆ ರಜೆ ನೀಡಲಾಗಿದೆ.

ಈ ಅವಧಿಯಲ್ಲಿ ಹೈಕೋರ್ಟ್ ರಜಾ ಕಾಲದ ಪೀಠಗಳು ಕಾರ್ಯ ನಿರ್ವಹಿಸಲಿವೆ. ಆದರೆ, ಬೆಂಗಳೂರು ಪ್ರಧಾನ ಪೀಠದಲ್ಲಿ ಫಿಸಿಕಲ್ ಕೋರ್ಟ್ ಬದಲಿಗೆ ಸಂಪೂರ್ಣ ವರ್ಚುಯಲ್ ಕೋರ್ಟ್ ನಡೆಸಲಾಗುತ್ತದೆ. ಹೀಗಾಗಿ, ಈ ಅವಧಿಯಲ್ಲಿ ವಕೀಲರು ಹಾಗೂ ಪಾರ್ಟಿ-ಇನ್-ಪರ್ಸನ್ ಆನ್ ಲೈನ್ ಮೂಲಕವೇ ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.

ಇನ್ನು ರಜಾ ಅವಧಿಯಲ್ಲಿ ಏಪ್ರಿಲ್ 23 ಕ್ಕಿಂತ ಹಿಂದೆ ಸಲ್ಲಿಕೆಯಾಗಿರುವ ಪ್ರಕರಣಗಳಲ್ಲಿ ತುರ್ತು ವಿಚಾರಣೆ ಅಗತ್ಯವಿದ್ದರೆ ಈ ಸಂಬಂಧ ವಕೀಲರು ಅಥವಾ ಪಾರ್ಟಿ-ಇನ್-ಪರ್ಸನ್ ಪ್ರಕರಣದ ವಿಚಾರಣೆ ಕೋರಿ ನ್ಯಾಯಾಂಗ ರಿಜಿಸ್ಟ್ರಾರ್ ಅವರ ಇ-ಮೇಲ್ (regjudicial@hck.gov.in) ಗೆ ಮೆಮೋ ಕಳಿಸುವಂತೆ ತಿಳಿಸಲಾಗಿದೆ.

ಈ ಇ-ಮೇಲ್ ಗಳನ್ನು ರಿಜಿಸ್ಟ್ರಾರ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಿದ್ದು, ಅವರು ಪರಿಶೀಲಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಒಂದು ವೇಳೆ ಮೆಮೋ ಸಲ್ಲಿಸುವುದಾದರೆ ಏ.26, ಮೇ.3, 10 ಹಾಗೂ 17ರಂದು ಕಳುಹಿಸುವಂತೆ ನ್ಯಾಯಾಂಗ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್ ನೋಟಿಸ್ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.