ETV Bharat / city

ಜನವರಿ, ಫೆಬ್ರವರಿಯಲ್ಲಿ ಕೊರೊನಾ 2ನೇ ಅಲೆ ಸಾಧ್ಯತೆ.. ಎಚ್ಚರಿಕೆ ಅಗತ್ಯ ಎಂದ ಸಚಿವ ಡಾ.ಕೆ ಸುಧಾಕರ್ - covid 19 2 nd wave

ದೇವಸ್ಥಾನ, ರಾಜಕೀಯ ಸಮಾರಂಭಗಳಲ್ಲಿ ಹೆಚ್ಚು ಜನ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲಾ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಲಹಾ ಸಮಿತಿ ಕೆಲವು ಸಲಹೆಗಳನ್ನು ಕೊಟ್ಟಿದೆ. ಗ್ರಾಪಂ ಚುನಾವಣೆ ನಡೆದರೆ ಮನೆಮನೆಗೆ ವೈರಸ್ ಹರಡಲು ಅವಕಾಶ ಅಂತಾ ಚುನಾವಣಾ ಆಯೋಗದ ಅಧಿಕಾರಗಳೇ ಹೇಳಿದ್ದಾರೆ..

ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್
author img

By

Published : Dec 4, 2020, 1:44 PM IST

ಬೆಂಗಳೂರು : ತಾಂತ್ರಿಕ ಸಲಹಾ ಸಮಿತಿ ವರದಿ ಪ್ರಕಾರ ಕರ್ನಾಟಕದಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.

ಡಿಸೆಂಬರ್, ಜನವರಿ, ಫೆಬ್ರವರಿ ಮೂರು ತಿಂಗಳಲ್ಲಿ ಚಳಿ ಇರುತ್ತದೆ. ತಾಂತ್ರಿಕ ಸಲಹಾ ಸಮಿತಿ ವರದಿಯ ಪ್ರಕಾರ, ಜನವರಿ ಅಥವಾ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ‌ ಬರುವ ಸಾಧ್ಯತೆ ಇದೆ.

ಖಂಡಿತಾ ಬರುತ್ತದೇ ಅಂತಾ ಹೇಳಲು ಆಗುವುದಿಲ್ಲ, ಬರುವ ಸಾಧ್ಯತೆ ಇದೆ. ಅದನ್ನು ನಿಯಂತ್ರಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಆ ಸಲಹೆ ಬಗ್ಗೆ ಸಿಎಂ ಜೊತೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.

ಕೊರೊನಾ ಎರಡನೇ ಅಲೆ ಕುರಿತು ಸುಧಾಕರ್ ಪ್ರತಿಕ್ರಿಯೆ

45 ದಿನ ನಿರ್ಣಾಯಕ ಅವಧಿ : ಡಿ.20 ರಿಂದ ಜ.2ರವರೆಗೆ 45 ದಿನ ನಿರ್ಣಾಯಕ ಅವಧಿಯಾಗಿದೆ. ಈ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ‌ ಕೈಗೊಳ್ಳುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಜನರು ಗುಂಪಾಗಿ ಸೇರುವುದನ್ನು ಪ್ರಾರಂಭಿಸಿದ್ದು, ಅದರ ಬಗ್ಗೆ ನಿಗಾವಹಿಸಬೇಕು. ಎಲ್ಲಾ ಧರ್ಮದ ಹಬ್ಬಗಳನ್ನು ನಿಯಂತ್ರಿಸಬೇಕು.

ಮದುವೆ, ಸಮಾರಂಭದಲ್ಲಿ 100ಕ್ಕಿಂತ ಹೆಚ್ಚು ಮಂದಿ ಸೇರಬಾರದು. ಬಹಿರಂಗ ಸಭೆ, ರಾಜಕೀಯ ಸಭೆ ಸಮಾರಂಭಗಳಲ್ಲಿ 200 ಜನ ಮೀರಬಾರದು ಎಂದು ಸಮಿತಿ ಸೂಚನೆ ನೀಡಿದೆ. ಹಂತ ಹಂತವಾಗಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಸಿದ್ಧತೆ ಮಾಡುವಂತೆ ಸಲಹೆ ನೀಡಿದ್ದಾರೆ. ಹೊಸ ವರ್ಷದ ಆಚರಣೆಯನ್ನು ನಿಯಂತ್ರಿಸುವಂತೆ ತಿಳಿಸಿದ್ದಾರೆ. ಡಿಸೆಂಬರ್ 20ರಿಂದ ಜನವರಿ 2ರವರೆಗೆ ಹೆಚ್ಚಿನ ಕಠಿಣ ಕ್ರಮ‌ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಫೆಬ್ರವರಿ 1ರ ತನಕ ಹೆಚ್ಚಿನ ಕೊರೊನಾ ಟೆಸ್ಟ್​ ಮಾಡಬೇಕು. ಒಂದು ಲಕ್ಷ ಆರ್​ಟಿಪಿಸಿಆರ್ ಟೆಸ್ಟ್ ಮಾಡಬೇಕು ಎಂದು ಸೂಚಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನ ಪಿಪಿಪಿ ಮಾದರಿಯಲ್ಲಿ‌ ಅಗತ್ಯ ಇದ್ದರೆ ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಇವತ್ತನಿಂದ ಫೆಬ್ರವರಿವರೆಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನ, ರಾಜಕೀಯ ಸಮಾರಂಭಗಳಲ್ಲಿ ಹೆಚ್ಚು ಜನ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲಾ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಲಹಾ ಸಮಿತಿ ಕೆಲವು ಸಲಹೆಗಳನ್ನು ಕೊಟ್ಟಿದೆ. ಗ್ರಾಪಂ ಚುನಾವಣೆ ನಡೆದರೆ ಮನೆಮನೆಗೆ ವೈರಸ್ ಹರಡಲು ಅವಕಾಶ ಅಂತಾ ಚುನಾವಣಾ ಆಯೋಗದ ಅಧಿಕಾರಗಳೇ ಹೇಳಿದ್ದಾರೆ.

ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆ. ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡ್ತೇವೆ. ಈ ಬಗ್ಗೆ ಕೋರ್ಟ್, ಚುನಾವಣಾ ಆಯೋಗವೂ ಗಮನ ಹರಿಸಬೇಕಿತ್ತು ಎಂದು ಪರೋಕ್ಷವಾಗಿ ಗ್ರಾಪಂ ಚುನಾವಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

ನೈಟ್ ಕರ್ಫ್ಯೂ ಅಗತ್ಯವಿಲ್ಲ : ನೈಟ್ ಕರ್ಫ್ಯೂ ಅಗತ್ಯ ಇಲ್ಲ. ಸಲಹಾ ಸಮಿತಿ ನೈಟ್ ಕರ್ಫ್ಯೂ ಹೇರುವ ಸಲಹೆಯನ್ನೇ ನೀಡಿಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು. ಜನವರಿ, ಫೆಬ್ರವರಿವರೆಗೆ ಕೊರೊನಾ ನಿಯಂತ್ರಣ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಕೊರೊನಾ ಇನ್ನೂ‌ ಮುಗಿದಿಲ್ಲ, ಲಸಿಕೆ ಸ್ಪಷ್ಟವಾಗಿ ಬರುವವರೆಗೆ ನಿಯಂತ್ರಣಕ್ಕೆ ಒತ್ತು.

ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಬೇಕಿದೆ. ಮೂರನೇ ಹಂತದ ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಿದೆ. ಬೆಂಗಳೂರಿನಲ್ಲೂ ಟ್ರಯಲ್ ಪ್ರಾರಂಭಿಲಾಗಿದೆ. ವಿಶ್ವದ ಹಲವು ಕಡೆಗಳಲ್ಲೂ ಟ್ರಯಲ್ ನಡೆದಿದೆ ಎಂದರು. ಲಸಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಖಾಸಗಿಯವರನ್ನು ಸೇರಿಸಿಕೊಳ್ಳಬೇಕಾ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.