ಬೆಂಗಳೂರು: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾದ ಭದ್ರತಾ ವೈಫಲ್ಯ ಬೆಳಕಿಗೆ ಬಂದ ನಂತರ ಮೋದಿ ಆಯಸ್ಸು ವೃದ್ಧಿಗೆ ದೇಶದ ಹಲವೆಡೆ ಹೋಮ, ಯಾಗಾದಿ ಕಾರ್ಯ ನಡೆಯುತ್ತಿದೆ. ಅದರಂತೆ ಮೋದಿಗಾಗಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಮಹಾ ಮೃತ್ಯುಂಜಯ ಹಾಗೂ ಸುದರ್ಶನ ಹೋಮ ಆಯೋಜನೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಯಸ್ಸು ವೃದ್ಧಿ, ಉತ್ತಮ ಆರೋಗ್ಯ ಹಾಗೂ ಯಶಸ್ಸಿಗೆ ಹಾರೈಸಿ 150 ಮಂದಿ ಪುರೋಹಿತರಿಂದ ಮಹಾ ಮೃತ್ಯುಂಜಯ ಹಾಗೂ ಮಹಾ ಸುದರ್ಶನ ಹೋಮ ನಡೆಸಲಾಗುತ್ತದೆ.
ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡುವ ಎಸ್ಪಿಜಿಗೆ ಹೆಚ್ಚಿನ ಅಧಿಕಾರ: ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್
ವಿಧಾನ ಪರಿಷತ್ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೋದಿ ಯಶಸ್ಸಿಗೆ ಭೂಪಸಂದ್ರದ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಾಳೆ ಬೆಳಗ್ಗೆ 7-30 ರಿಂದ ಮಧ್ಯಾಹ್ನ 12-30ರ ತನಕ ಮಹಾ ಮೃತ್ಯುಂಜಯ ಮತ್ತು ಸುದರ್ಶನ ಹೋಮ ನಡೆಯಲಿದೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ