ETV Bharat / city

ಉಪ ಚುನಾವಣೆಗೆ ಹುರಿಯಾಳುಗಳನ್ನ ಕಣಕ್ಕಿಳಿಸಲು ನಿರ್ಧಾರ: ದಿನೇಶ್​​ ಗುಂಡೂರಾವ್​​​​ - ದಿನೇಶ್ ಗುಂಡೂರಾವ್​​

ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಇಂದು ನಡೆಸಿದ ಸಭೆಯಲ್ಲಿ ಚರ್ಚಿಸಿದ್ದು, ಪಕ್ಷದ ಹಿರಿಯ ನಾಯಕರಿಗೆ ಅದರ ಜವಾಬ್ದಾರಿಯನ್ನು ವಹಿಸಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

KPCC President Dinesh gundurao latest news
author img

By

Published : Aug 1, 2019, 7:41 PM IST

ಬೆಂಗಳೂರು: ರಾಜ್ಯದಲ್ಲಿ ಶೀಘ್ರವೇ ನಡೆಯಲಿರುವ ಉಪ ಚುನಾವಣೆಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಅನರ್ಹರ ಕಾನೂನು ಹೋರಾಟದ ಕುರಿತು ಚರ್ಚಿಸಿದ್ದೇವೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾದ ಕ್ರಮವಾಗಬೇಕು. ಅತೃಪ್ತ ಶಾಸಕರು ಅನರ್ಹಗೊಂಡಿದ್ದು, ಇದೀಗ ಪಕ್ಷದಿಂದಲೂ ಉಚ್ಛಾಟಿಸಲಾಗಿದೆ. ಅಷ್ಟೇ ಅಲ್ಲದೆ, ಅನರ್ಹ ಶಾಸಕರ ಕ್ಷೇತ್ರದ ಬ್ಲಾಕ್ ಸಮಿತಿ ಅಧ್ಯಕ್ಷರನ್ನು ವಿಸರ್ಜಿಸಿದ್ದೇವೆ ಎಂದು ಹೇಳಿದರು.

ದಿನೇಶ್​ ಗುಂಡೂರಾವ್​, ಕೆಪಿಸಿಸಿ ಅಧ್ಯಕ್ಷ

ಹಿರಿಯರಿಗೆ ಜವಾಬ್ದಾರಿ

ಉಪ ಚುನಾವಣೆ 17 ಕ್ಷೇತ್ರಗಳಲ್ಲಿ ನಡೆಯುವುದು ನಿಶ್ಚಿತ. ಪಕ್ಷದ ಹಿರಿಯ ನಾಯಕರಿಗೆ ಈ ಜವಾಬ್ದಾರಿ ಕೊಟ್ಟಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲಿದ್ದೇವೆ. ಅವರ ಮಾರ್ಗದರ್ಶನದಲ್ಲಿ ತಂಡ ರಚನೆಗೆ ನಿರ್ಧಾರಿಸಲಾಗಿದೆ. ಪಕ್ಷಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ನೀಡುವಂತೆ ಅವರು ಸಲಹೆ ನೀಡಿದ್ದಾರೆ. ಅದಕ್ಕೆ ಬದ್ಧರಾಗಿದ್ದೇವೆ ಎಂದರು.

ಲಿಂಗಾಯತ ಸಮುದಾಯದ ಮುಖಂಡರು ನಿನ್ನೆ ಸಿಎಂ ಭೇಟಿ ಮಾಡಿದಾಗ 15 ಶಾಸಕರಿಗೆ ವಿಷ ಕೊಡಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ. ಅವರ ಮಾತಿನಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕುದುರೆ ವ್ಯಾಪಾರ ಮಾಡಿರುವುದು ಅವರ ಬಾಯಿಂದ ಬಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನ ಸೆಳೆಯುವ ಕೆಲಸ ಇಂದಿಗೂ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ವೀಕ್ಷಕರ ಪಟ್ಟಿ ನಾಳೆ ಬಿಡುಗಡೆ

ವೀಕ್ಷಕರ ಟೀಂ ಪಟ್ಟಿ ನಾಳೆ ಬಿಡುಗಡೆ ಮಾಡುತ್ತೇವೆ. ಇನ್ನೂ ಹೆಚ್ಚಾಗಿ ಪಕ್ಷವನ್ನು ಸಂಘಟನೆ ಮಾಡಬೇಕಿದೆ. ಎಲ್ಲವನ್ನೂ ಹೈಕಮಾಂಡ್ ಗಮನಕ್ಕೆ ತಂದು, ಅವರು ನೀಡುವ ನಿರ್ಧಾರದ ಮೇಲೆ ಮುಂದುವರೆಯುತ್ತೇವೆ. ಜೆಡಿಎಸ್ ಜತೆ ಮೈತ್ರಿ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಶಾಸ್ತಿಯಾಗಬೇಕಿದೆ. ಸ್ಪೀಕರ್ ಕಾನೂನಿನನ್ವಯ ಅನರ್ಹ ಮಾಡಿದ್ದಾರೆ. ಸುಪ್ರೀಂಕೋರ್ಟ್ ಕೂಡ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೋರ್ಟ್​ಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದೇವೆ ಎಂದು ವಿವರಿಸಿದರು.

ಟಿಪ್ಪು ಜಯಂತಿ ರದ್ದು ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿ, ವೋಟಿಗಾಗಿ ಏನೆಲ್ಲಾ ಬೇಕೋ ಅದನ್ನ ಬಿಜೆಪಿ ಮಾಡ್ತಿದೆ. ಹಿಂದೂ ಕಾರ್ಯಕರ್ತರ ಪ್ರಕರಣ ಮುಚ್ಚೋಕೆ ಹೊರಟಿದ್ದಾರೆ. ಬರೀ ಹಿಂದೂ ಕಾರ್ಯಕರ್ತರನ್ನೇ ಯಾಕೆ ಬಿಡುಗಡೆ ಮಾಡಬೇಕು. ನಿಸ್ಪಕ್ಷಪಾತವಾಗಿ ಎಲ್ಲರ ಕೇಸ್ ತನಿಖೆ ನಡೆಸಿ ಕೈಬಿಡಲಿ. ಪೊಲೀಸರಿಗೆ ಮುಕ್ತ ತನಿಖೆಗೆ ಅವಕಾಶ ಮಾಡಿಕೊಡಿ. ರಾಜಕೀಯವಾಗಿ ತಪ್ಪಿತಸ್ಥರನ್ನ ರಕ್ಷಿಸುವುದು ಬೇಡ. ಸಿದ್ಧಾರ್ಥ್ ವಿಚಾರದಲ್ಲಿ ಏನಾಗಿದೆ? ದೇಶದಲ್ಲಿ ಕಂಪನಿಗಳು ಮುಚ್ಚುತ್ತಿವೆ. ಇದೆಲ್ಲವನ್ನೂ ಬಿಜೆಪಿ ಮುಚ್ಚು ಹಾಕುತ್ತಿದೆ ಎಂದು ಆರೋಪಿಸಿದರು.

Intro:newsBody:ಉಪಚುನಾವಣೆ ಗೆ ಪ್ರಭಲ ಅಭ್ಯರ್ಥಿ ಕಣಕ್ಕಿಳಿಸಲಿದ್ದೇವೆ: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಶೀಘ್ರವೇ ನಡೆಯಲಿರುವ ಉಪಚುನಾವಣೆಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಇಂದು ಸಭೆ ಸೇರಿ ಚರ್ಚಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯ ನಂತರ ಮಾತನಾಡಿ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯದ ಕ್ರಮ ಆಗಬೇಕು. ಅತೃಪ್ತ ಶಾಸಕರು ಅನರ್ಹಗೊಂಡಿದ್ದು, ಇದೀಗ ಶಾಸಕರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಅವರ ಜತೆ ಹೋಗಬಾರದು. ಆ ಕ್ಷೇತ್ರದ ಬ್ಲಾಕ್ ಸಮಿತಿ ಅಧ್ಯಕ್ಷರನ್ನು ಕೂಡ ವಿಸರ್ಜನೆ ಮಾಡಿದ್ದೇವೆ ಎಂದು ಹೇಳಿದರು.
ಹಿರಿಯರಿಗೆ ಜವಾಬ್ದಾರಿ
ಉಪಚುನಾವಣೆ 17 ಕ್ಷೇತ್ರಗಳಲ್ಲಿ ನಡೆಯುವುದು ನಿಶ್ಚಿತ. ಹಿರಿಯ ನಾಯಕರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಪ್ರತಿ ವಿಧಾನ ಸಭಾ ಕ್ಷೇತ್ರ ಕ್ಕೆ ಒಬ್ಬ ಹಿರಿಯ ರ ನಾಯಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಿದ್ದೇವೆ. ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ಪಕ್ಷಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ಕೊಡಿ ಅಂತ ಹೇಳಿದ್ದಾರೆ. ಅದಕ್ಕೆ ನಾವು ಬದ್ಧರಾಗಿ ಟಿಕೆಟ್ ಕೊಡಲು ನಿರ್ಧಾರ ಮಾಡಿದ್ದೇವೆ. ಒಂದೊಂದು ಕ್ಷೇತ್ರಕ್ಕೆ ಒಬ್ಬ ಹಿರಿಯರ ನಾಯಕತ್ವ ಕೊಡುತ್ತೇವೆ. ಅವರ ಮಾರ್ಗದರ್ಶನದಲ್ಲಿ ತಂಡ ರಚನೆಗೆ ನಿರ್ಧಾರ. ತಂಡದ ವರದಿ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಎಂದರು.
ಲಿಂಗಾಯತ ಸಮುದಾಯದ ಮುಖಂಡರು ನಿನ್ನೆ ಸಿಎಂ ಭೇಟಿ ಮಾಡಿದಾಗ 15 ಶಾಸಕರಿಗೆ ವಿಷ ಕೊಡಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ. ಅವರ ಮಾತಿನಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕುದುರೆ ವ್ಯಾಪಾರ ಮಾಡಿರುವುದು ಅವರ ಬಾಯಿಂದ ಬಂದಿದೆ. ಇಂದು ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಎಂದರು.
ವೀಕ್ಷಕರ ಪಟ್ಟಿ ನಾಳೆ
ವೀಕ್ಷಕರ ಟೀಮ್ ಪಟ್ಟಿ ನಾಳೆ ಬಿಡುಗಡೆ ಮಾಡುತ್ತೇವೆ.17 ಕ್ಷೇತ್ರಗಳಿಗೂ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆದಿದೆ. ನಮ್ಮ ಪಕ್ಷ ಸಂಘಟನೆ ಮಾಡಬೇಕಿದೆ. ಎಲ್ಲವನ್ನೂ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಹೈಕಮಾಂಡ್ ನಿರ್ಧಾರ ಮೇಲೆ ಮುಂದೂವರೆಯುತ್ತೇವೆ. ಜೆಡಿಎಸ್ ಜತೆ ಮೈತ್ರಿ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎನ್ನುವ ಮೂಲಕ ಇಂದಿನ ಸಭೆಯಲ್ಲಿ ಮೈತ್ರಿ ಬೇಡ ಅಂತ ಹೇಳಿರುವುದನ್ನ ಪರೋಕ್ಷವಾಗಿ ತಿಳಿಸಿದರು.
ಅತೃಪ್ತರ ಬಗೆಗಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಆಗಿದೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಶಾಸ್ತಿಯಾಗಬೇಕಿದೆ. ಸ್ಪೀಕರ್ ಕಾನೂನಿನನ್ವಯ ಡಿಸ್ ಕ್ವಾಲಿಫೈ ಮಾಡಿದ್ದಾರೆ. ಸುಪ್ರೀಂಕೋರ್ಟ್ ಕೂಡ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ತೀರ್ಮಾನ ಮಾಡಿದ್ದೇವೆ ಎಂದು ವಿವರಿಸಿದರು.
ಹಿಂದೂ ಮುಖಂಡರ ಮೇಲಿನ ಕೇಸ್ ವಾಪಸ್ ಜೊತೆ ಟಿಪ್ಪು ಜಯಂತಿ ರದ್ದು ವಿಚಾರ ಮಾತನಾಡಿ, ವೋಟಿಗಾಗಿ ಏನೆಲ್ಲಾ ಬೇಕೋ ಅದನ್ನ ಬಿಜೆಪಿಯವರು ಮಾಡ್ತಾರೆ. ಹಿಂಸಾತ್ಮಕ ಘಟನೆಗಳನ್ನ ನಡೆಸ್ತಾರೆ. ಹಿಂದೂ ಕಾರ್ಯಕರ್ತರ ಕೇಸ್ ಮುಚ್ಚೋಕೆ ಹೊರಟಿದ್ದಾರೆ. ಬರೀ ಹಿಂದೂ ಕಾರ್ಯಕರ್ತರನ್ನೇ ಯಾಕೆ ಬಿಡುಗಡೆ ಮಾಡಬೇಕು. ನಿಸ್ಪಕ್ಷಪಾತವಾಗಿ ಎಲ್ಲರ ಕೇಸ್ ತನಿಖೆ ಮಾಡಿ ಕೈಬಿಡಲಿ. ಪೊಲೀಸರಿಗೆ ಮುಕ್ತ ತನಿಖೆಗೆ ಅವಕಾಶ ಮಾಡಿಕೊಡಿ. ರಾಜಕೀಯವಾಗಿ ತಪ್ಪಿತಸ್ಥರನ್ನ ರಕ್ಷಣೆಮಾಡುವುದು ಬೇಡ ಎಂದರು.
ಸಿದ್ಧಾರ್ಥ್ ವಿಚಾರದಲ್ಲಿ ಏನಾಗಿದೆ? ದೇಶದಲ್ಲಿ ಕಂಪನಿಗಳು ಮುಚ್ಚುತ್ತಿವೆ. ಇದೆಲ್ಲವನ್ನೂ ಬಿಜೆಪಿ ಮುಚ್ಚುಹಾಕುತ್ತಿದೆ ಎಂದರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.