ETV Bharat / city

ಗೋ ಉತ್ಪನ್ನಗಳ ಜೊತೆಗೆ ಉಪ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಒತ್ತು

ಗೋವಿನ ಸಾಂಪ್ರದಾಯಿಕ ಉತ್ಪನ್ನಗಳ ಜೊತೆ ನೂತನ ಉಪ ಉತ್ಪನ್ನಗಳ ತಯಾರಿಕೆಗೆ ಮಹತ್ವ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

State Government focusing on increase of Go products
ಗೋಉತ್ಪನ್ನಗಳ ಜೊತೆಗೆ ಉಪಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಒತ್ತು
author img

By

Published : Apr 22, 2022, 3:25 PM IST

ಬೆಂಗಳೂರು: ಗೋವಿನ ಸಾಂಪ್ರದಾಯಿಕ ಉತ್ಪನ್ನಗಳ ಜೊತೆಗೆ ನೂತನ ಉಪ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಒತ್ತು ನೀಡಲು ಮುಂದಾಗಿದೆ. ಫಲಾನುಭವಿಗಳಿಗೆ ಸಹಾಯಧನ, ಸಾಲದ ನೆರವು, ಪ್ರೋತ್ಸಾಹಧನ, ಘಟಕ ವೆಚ್ಚ ನೀಡುವ ಮೂಲಕ ಯೋಜನೆಗಳನ್ನು ಯಶಸ್ವಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿಯೇ 2022-23ನೇ ಸಾಲಿನಲ್ಲಿ ಸುಮಾರು 32 ಕೋಟಿ ರೂ.ಭರಿಸಲಿದೆ. ಈ ಸಾಲಿನಲ್ಲಿ ಸರ್ಕಾರ 31 ಖಾಸಗಿ ಗೋ ಶಾಲೆಗಳಿಗೆ 7.75 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ. ಘಟಕ ವೆಚ್ಚ 25 ಲಕ್ಷ ರೂ. ನಿಗದಿಪಡಿಸಿ, ಶೇ.75ರಷ್ಟು ಸಹಾಯಧನ ನೀಡಲಾಗುತ್ತದೆ.

ಗೋ ಶಾಲೆಗಳಲ್ಲಿ ಉತ್ಪತ್ತಿಯಾಗುವ ಸಗಣಿ, ಗಂಜಲ ಮತ್ತು ಇತರೆ ಉತ್ಪನ್ನ ಬಳಸಿ ಪರಿಸರ ಸ್ನೇಹಿ ಸಗಣಿ ಕಟ್ಟಿಗೆ, ಧೂಪ, ಫಿನಾಯಿಲ್, ಗಣಪತಿ, ಪಂಚಗವ್ಯ, ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಲು ಖಾಸಗಿ ಗೋ ಶಾಲೆಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದಕ್ಕೆ 'ಆತ್ಮನಿರ್ಭರ ಗೋಶಾಲೆ' ಎಂದು ಹೆಸರಿಡಲಾಗಿದೆ.

ಗೋ ಉತ್ಪನ್ನಗಳು: ಹಾಲು, ಬೆಣ್ಣೆ, ತುಪ್ಪ ತಯಾರಿಕೆ ಪ್ರಮುಖವಾದದ್ದು. ಸಾವಯವ ಗೊಬ್ಬರ, ಗೋಬರ್ ಗ್ಯಾಸ್ ಹಾಗೂ ಗವ್ಯ ಉತ್ಪನ್ನಗಳಾದ ಪಂಚ ಗವ್ಯ, ಅಗ್ನಿ ಗವ್ಯ, ಗೋಮೂತ್ರದಿಂದ ಸೋಪು, ಶಾಂಪು ತಯಾರಿಕೆ ಮತ್ತು ಸಗಣಿಯಿಂದ ಆಯಿಲ್ ಪೇಂಟ್ ತಯಾರಿಸಲಾಗುತ್ತದೆ. ಗೋವಿನ ಸಗಣಿಯಿಂದ ಹಣತೆ, ಧೂಪ ಭತ್ತಿ, ಪರಿಸರ ಸ್ನೇಹಿ ಗೋಮಯ ಗಣಪ ತಯಾರಿಕೆ ಸೇರಿದಂತೆ ಗೋ ತ್ಯಾಜ್ಯ ಬಳಸಿ ದ್ರವ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಅಭಿವೃದ್ಧಿಪಡಿಸಿದ ತಾಂತ್ರಿಕತೆ ಬಳಸಿ ರೈತರ ಮಟ್ಟದಲ್ಲಿ ಗೊಬ್ಬರ ಉತ್ಪಾದಿಸಿ ಸಾವಯವ ಕೃಷಿಗೆ ಒತ್ತು ನೀಡಲಾಗುತ್ತದೆ. ಪ್ರಾತ್ಯಕ್ಷಿಕೆ ಮೂಲಕ ಈ ಎಲ್ಲದರ ಮಾಹಿತಿ ನೀಡಲಾಗುತ್ತದೆ. ಗೋಶಾಲೆಗಳಲ್ಲಿ ಉಪ ಉತ್ಪನ್ನ ತಯಾರಿಕೆಗೆ ಪೂರಕ ತರಬೇತಿ ಶಿಬಿರ ಕೂಡ ಆಯೋಜಿಸಲಾಗುತ್ತದೆ.

ಗೋ ಸೇವಕರಿಗೆ ಗೌರವಧನ: ಪಶು ಸಂಗೋಪನಾ ಇಲಾಖೆ, ಕೆಎಂಎಫ್ ಸಂಸ್ಥೆ ಇಲ್ಲದೇ ಇರುವ 1,000 ಜಾನುವಾರು ಹೊಂದಿರುವ ಗ್ರಾಮಗಳಲ್ಲಿ ಅಮೃತ ಗೋ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿ ವರ್ಷ 250 ಕೇಂದ್ರಗಳಂತೆ ಮೂರು ವರ್ಷದಲ್ಲಿ 750 ಕೇಂದ್ರಗಳು ಸ್ಥಾಪನೆಯಾಗಲಿವೆ. 250 ಗೋ ಸೇವಕರಿಗೆ ಪ್ರತಿ ತಿಂಗಳು 5000 ರೂ. ಗೌರವಧನ ನೀಡುವ ಯೋಜನೆಯೊಂದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.

ಔಷಧ ತಯಾರಿಕೆಗೂ ಉತ್ತೇಜನ: ಗೋ ಉತ್ಪನ್ನಗಳಿಂದ ಔಷಧ ತಯಾರಿಸಿ ರೋಗಿಳ ಚಿಕಿತ್ಸೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಸಂಶೋಧನೆ ನಡೆಸಲು ಸರ್ಕಾರ ಉತ್ತೇಜನ ನೀಡಲಿದೆ. ಗೋವಿನ ಸಗಣಿ ಮತ್ತು ಗಂಜಲದಿಂದ ಅನೇಕ ಉತ್ಪನ್ನ ತಯಾರಿಸಲು ಗೋ ಶಾಲೆಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ. ಗೋವಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಕೂಡ ಚಿಂತನೆ ನಡೆದಿದೆ.

ಸಾರ್ಟ್ ಅಪ್‌ಗಳಿಗೂ ಉತ್ತೇಜನ: ಹೈನುಗಾರಿಕೆ ಜೊತೆಗೆ ಸಗಣಿ ಮತ್ತು ಗೋ ಮೂತ್ರ ಆಧರಿಸಿದ ಸಾರ್ಟ್ ಅಪ್‌ಗಳಿಗೂ ಉತ್ತೇಜನ ನೀಡುವ ಗುರಿಯನ್ನು ಹೊಂದಲಾಗಿದೆ. ಗೋವು ಆಧಾರಿತ ಉದ್ಯಮ ಶೀಲತೆಗೆ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶ ಸರ್ಕಾರದ ಮುಂದಿದೆ. ಗೋಶಾಲೆ ಅಭಿವೃದ್ಧಿ, ಗೋ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಸೇರಿ ಹಲವು ಕಡೆ ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅಧ್ಯಯನ ಪ್ರವಾಸ ನಡೆಸಿದ್ದಾರೆ.

ಆತ್ಮನಿರ್ಭರ ಗೋಶಾಲೆ: ಪ್ರತಿ ಜಿಲ್ಲೆಗೊಂದು ಆತ್ಮನಿರ್ಭರ ಗೋಶಾಲೆ ತೆರೆಯುತ್ತಿದ್ದೇವೆ. ಆ ಮೂಲಕ ಗೋಮಾಳ ಜಮೀನು ಉಳಿಸುತ್ತೇವೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಗೋಮಾಳ ಜಮೀನು ಗುರುತಿಸಿದ್ದೇವೆ. ಎಲ್ಲ ಕಡೆ ಗೋಶಾಲೆ ತೆರೆದು ಗೋ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: 3ನೇ ಅಲೆ ಬಂದ್ರೂ ದೇಶದಲ್ಲಿ ಸಾವು-ನೋವು ಸಂಭವಿಸಲಿಲ್ಲ.. ಮೋದಿ ಬದ್ಧತೆಯೇ ಇದಕ್ಕೆ ಕಾರಣ.. ಸಚಿವ ಸುಧಾಕರ್

ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಾಣವಾಗಲಿದ್ದು, ಅದರ ಭೂಮಿಪೂಜೆ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ಇತ್ತೀಚೆಗೆ ನೆರೆವೇರಿತು. ಇನ್ನೂ 100 ಪಶು ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಮಂಜೂರಾತಿ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.