ETV Bharat / city

ಸಂತೋಷ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹ, ಒಂದು ತಿಂಗಳು ಕಾಮಗಾರಿ ಸ್ಥಗಿತಕ್ಕೆ ಗುತ್ತಿಗೆದಾರರ ನಿರ್ಧಾರ

author img

By

Published : Apr 13, 2022, 2:41 PM IST

Updated : Apr 13, 2022, 5:12 PM IST

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಮೃತಪಟ್ಟಿರೋದಕ್ಕೆ ರಾಜ್ಯ ಗುತ್ತೆಗಾರರ ಅಸೋಸಿಯೇಷನ್ ವತಿಯಿಂದ ಸಂತಾಪ ಸೂಚಿಸಿ ಕೈಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಹರಿಹಾಯ್ದಿದ್ದಾರೆ..

Kempanna Press meet over Santhosh suicide case, State Contractors Association president Kempanna Press meet, Santhosh suicide case, Santhosh suicide case update, Santhosh suicide case news, ಸಂತೋಷ್ ಆತ್ಮಹತ್ಯೆ ಪ್ರಕರಣ ಕುರಿತು ಕೆಂಪಣ್ಣ ಸುದ್ದಿಗೋಷ್ಠಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ, ಸಂತೋಷ್ ಆತ್ಮಹತ್ಯೆ ಪ್ರಕರಣ, ಸಂತೋಷ್ ಆತ್ಮಹತ್ಯೆ ಪ್ರಕರಣದ ಅಪ್​ಡೇಟ್​, ಸಂತೋಷ್ ಆತ್ಮಹತ್ಯೆ ಪ್ರಕರಣ ಸುದ್ದಿ,
ರಾಜ್ಯ ಗುತ್ತೆಗಾರರ ಅಸೋಸಿಯೇಷನ್ ವತಿಯಿಂದ ಸುದ್ದಿಗೋಷ್ಠಿ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗುತ್ತೆಗಾರರ ಅಸೋಸಿಯೇಷನ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಹಾಗೂ ನೀರಾವರಿ ಇಲಾಖೆಗಳಲ್ಲಿ ಅತಿ ಹೆಚ್ಚು ಭ್ರಷ್ಟಚಾರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೇ 25ರಿಂದ ಒಂದು ತಿಂಗಳು ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಟೆಂಡರ್ ಕರೆಯೋಕೆ ಶೇ.5ರಷ್ಟು ಕಮೀಷನ್ ಕೊಡ್ಬೇಕು. ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೀತಾ ಇದೆ. ನೀರಾವರಿ ಇಲಾಖೆಯಲ್ಲಿಯೂ ಕಮೀಷನ್ ದಂಧೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ: ಅತ್ಮಹತ್ಯೆ ಪ್ರಕರಣವನ್ನ ಸಿಬಿಐ ಅಥವಾ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರ ಕುಟುಂಬಕ್ಕೆ ₹2 ಕೋಟಿ ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆ ಹೊರಬೇಕು. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡುವಂತೆ ಕೆಂಪಣ್ಣ ಆಗ್ರಹಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಓದಿ: ನೂರಕ್ಕೆ ನೂರರಷ್ಟು ನಾನು ರಾಜೀನಾಮೆ ಕೊಡುವುದಿಲ್ಲ; ಸಚಿವ ಈಶ್ವರಪ್ಪ

ಸಾವಿಗೆ ಯಾರು ಕಾರಣ ಅಂತಾ ಡೆತ್​ನೋಟ್​ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಚಿವರು ಶೇ.40ರಷ್ಟು ಕಮೀಷನ್ ಕೇಳುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಮೋದಿಗೂ ದೂರು ಸಲ್ಲಿಸಿದ್ದರು. ದೆಹಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನೆ ಮಾಡಿದ್ದರೆ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ ಎಂದು ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಒಂದು ತಿಂಗಳು ಕೆಲಸ ಸ್ಥಗಿತ: ಸಂಘದ ವತಿಯಿಂದ ಸಂತಾಪ ಸೂಚಿಸಿ ಮಾತನಾಡಿದ ಅವರು, ಒಂದು ತಿಂಗಳು ಕೆಲಸ ಸ್ಥಗಿತಗೊಳಿಸುವಂತೆ ತೀರ್ಮಾನ ಮಾಡಲಾಗಿದೆ. ಮೇ 25ರಿಂದ ಒಂದು ತಿಂಗಳು ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸುತ್ತೇವೆ. ಭ್ರಷ್ಟಾಚಾರ ಹೆಚ್ಚಿದ್ದರೂ ಸಿಎಂ ಮೌನವಾಗಿರೋದು ಸರಿಯಲ್ಲ. ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೀತಾ ಇದೆ.

ರೌಡಿಗಳ ಮೂಲಕ ಸಂತೋಷ್​ಗೆ ಬೆದರಿಕೆ ಹಾಕಿಸೋ ಕೆಲ್ಸ ಸರ್ಕಾರ ಮಾಡಿದೆ. ನಮ್ಮ ಹತ್ರನೂ ಭ್ರಷ್ಟಾಚಾರದ ದಾಖಲೆಗಳಿವೆ. ದಾಖಲೆ‌ ಬಿಡುಗಡೆಗೆ ನಾವು ಹೆದರುತ್ತಿದ್ದೇವೆ. ಇದು ರೌಡಿಗಳ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇರ ಆರೋಪ ಮಾಡಿದ್ದಾರೆ.

ಓದಿ: ಈಶ್ವರಪ್ಪ ಅಷ್ಟೇ ಅಲ್ಲ, ಎಲ್ಲಾ ಪಕ್ಷದವರೂ ಅಷ್ಟೇ.. ಕಮಿಷನ್​​ ಪಡೆಯದೇ ಗುದ್ದಲಿ ಪೂಜೆ ಮಾಡಲ್ಲ- ಜಗನ್ನಾಥ ಶೇಗಜಿ

ದಾಖಲೆ ಬಿಡುಗಡೆ ಮಾಡೋಕೆ ನಾವು ಹೆದರುತ್ತಿದ್ದೇವೆ. ನಮಗೆ ಕೊಲೆ ಬೆದರಿಕೆ ಬರುತ್ತಿವೆ. ಬೆದರಿಕೆ ಬರ್ತಿರೋದ್ರಿಂದ ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ನೀರಾವರಿ ಇಲಾಖೆಯಲ್ಲಿ ಟೆಂಡರ್​ ಅನ್ನ ಹೈಕ್ ಮಾಡುವ ಕೆಲ್ಸ ಆಗ್ತಿದೆ. ಸಿಎಂ ಬೊಮ್ಮಾಯಿಗೆ 4 ಬಾರಿ ದೂರು ಕೊಟ್ವಿದ್ರೂ ಪ್ರಯೋಜನವಾಗಿಲ್ಲ. ಈ ಸರ್ಕಾರ ಶೇ. 40 ರಷ್ಟು ಕಮೀಷನ್ ಸರ್ಕಾರ ಎಂದು ಆರೋಪಿಸಿದರು.

ಆರೋಗ್ಯ, ನೀರಾವರಿ, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಟಾಪ್ ಭ್ರಷ್ಟಾಚಾರ ಹೊಂದಿರುವ ಇಲಾಖೆಗಳಾಗಿವೆ. ನೀರಾವರಿ ಇಲಾಖೆಯಲ್ಲಿ ಏಜೆಂಟ್‌ನ ನೇಮಕ ಮಾಡಿದ್ದಾರೆ. ಅವ್ರ ಮೂಲಕ ಕಮೀಷನ್ ಪಡೆಯುತ್ತಾರೆ. ಬಿಬಿಎಂಪಿಯಲ್ಲಿ ಶೇ.15ರಷ್ಟು ಕಮೀಷನ್ ದಂದೆ ನಡೀತಿದೆ. ಲಂಚ ಕೊಟ್ಟಿರೋ ದಿನಾಂಕ ಎಲ್ಲವೂ ನಮ್ಮ‌ ಬಳಿ ದಾಖಲೆ ಇವೆ. ಶಾಸಕರ ಮಕ್ಕಳೇ ಗುತ್ತಿಗೆದಾರರಾಗಿ ಕೆಲ್ಸ ಮಾಡ್ತಿದ್ದಾರೆ. ಚಿತ್ರದುರ್ಗದ ಶಾಸಕರೊಬ್ಬರ ಮಗ ಗುತ್ತಿಗೆದಾರರಾಗಿ ಕೆಲ್ಸ ಮಾಡ್ತಿದ್ದಾನೆ. ಇವತ್ತಿನಿಂದ 15 ದಿನ ಕಾಲಾವಕಾಶ ಕೊಡ್ತೀವಿ. ಭ್ರಷ್ಟಚಾರದ ದಾಖಲೆಗಳನ್ನ ಬಳಿಕ‌ ಬಿಡುಗಡೆ ಮಾಡ್ತೀವಿ.

Last Updated : Apr 13, 2022, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.