ETV Bharat / city

ರೈತರ ಬದುಕು ಹಸನಾಗಿಸುವ ಯಾವ ಅಂಶವು ಬಜೆಟ್​ನಲ್ಲಿ ಇಲ್ಲ: ಶ್ರೀಕಂಠೇಗೌಡ

ಕುಮಾರ ಸ್ವಾಮಿ ಸರ್ಕಾರ ಮಾಡಿದ ಸಾಲ ಮನ್ನಾ ಇನ್ನೂ ಕೆಲವು ರೈತರಿಗೆ ಸಿಕ್ಕಿಲ್ಲ. ಇದರಿಂದ ಮತ್ತೆ ಸಾಲ ಮಾಡಲು ರೈತರಿಗೆ ಸಂಕಷ್ಟವಾಗುತ್ತಿದೆ ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ವಿಧಾನ ಪರಿಷತ್​ನಲ್ಲಿ ತಿಳಿಸಿದರು.

srikante gowda
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ
author img

By

Published : Mar 14, 2022, 9:00 PM IST

ಬೆಂಗಳೂರು: ಇಲಾಖಾವಾರು ಇದ್ದ ಬಜೆಟ್ ವಲಯವಾರು ಆಗಿದೆ. ಇದು ಸಮಂಜಸವಲ್ಲ. ಎಲ್ಲಾ ಇಲಾಖೆಗೆ ನ್ಯಾಯ ಒದಗಿಸುವುದು ಕಠಿಣ. ಮುಂದಾದರೂ ಹಿಂದಿನ ವ್ಯವಸ್ಥೆ ಜಾರಿಗೆ ಬರಲಿ ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ವಿಧಾನ ಪರಿಷತ್​ನಲ್ಲಿ ತಿಳಿಸಿದರು.

ಯಶಸ್ವಿನಿ ಕಾರ್ಡ್​ ಮರು ಆರಂಭ, ಮೈಸೂರು ಸಕ್ಕರೆ ಕಾರ್ಖಾನೆ ಸರ್ಕಾರದ ವಶದಲ್ಲೇ ಉಳಿಸಿಕೊಳ್ಳುವ ನಿರ್ಧಾರವನ್ನು ಸ್ವಾಗತಿಸಿದರು.

ನಾನು ನೇರವಾಗಿ ಪ್ರಶ್ನೆ ಕೇಳುತ್ತೇನೆ, ಕುಮಾರಸ್ವಾಮಿ ಒಂದು ಲಕ್ಷ ರೂ.ಸಾಲ ಮನ್ನಾ ಮಾಡಿದರು. ಇನ್ನೂ ಮಂಡ್ಯ ಜಿಲ್ಲೆಯೊಂದರಲ್ಲೇ 3021 ರೈತರಿಗೆ ಸಾಲಮನ್ನಾ ಹಣ ಬಿಡುಗಡೆ ಆಗಿಲ್ಲ. 17 ಕೋಟಿ, 21 ಲಕ್ಷ ರೂ. ಮೊತ್ತ ಬಿಡುಗಡೆ ಆಗಿಲ್ಲ. ರಾಜ್ಯದಲ್ಲಿ 400 ಕೋಟಿ ರೂ. ಹಣ ನೀಡಬೇಕಿದೆ. ಇರುವ ಸಾಲ ಮನ್ನಾ ಆಗಿಲ್ಲ. ಹೊಸ ಸಾಲ ಸಿಗುತ್ತಿಲ್ಲ. ಅರ್ಹ ರೈತರಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದರು.

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ದೊರೆಯುವಂತಾಗ ಬೇಕು. ಭತ್ತ, ರಾಗಿ, ಜೋಳವನ್ನು ಹಾಲಿನ ಮಾರುಕಟ್ಟೆಯಂತೆ ಮಾರಾಟ ಖರೀದಿಗೆ ಅವಕಾಶ ಮಾಡಿ ಕೊಡಬೇಕು ಇದರಿಂದ ರೈತರಿಗೆ ಸಹಕಾರವಾಗುತ್ತದೆ ಎಂದು ಸದನಕ್ಕೆ ತಿಳಿಸಿದರು.

ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ರೂಪಿಸಿ: ಮೇಕೆದಾಟು, ಮಹಾದಾಯಿ, ಕೃಷ್ಣಾ ಮತ್ತು ತುಂಗಭದ್ರಾ ನೀರಾವರಿ ಯೋಜನೆಗಳಿಗೆ ಕಾಲ ಮಿತಿ ಹಾಕಿಕೊಂಡು ಕಾರ್ಯನಿರ್ವಹಿಸ ಬೇಕು. ಕೇಂದ್ರ ಸರ್ಕಾರದ ಪರಿಸರ ಇಲಾಖೆಗೆ ಮನದಟ್ಟು ಮಾಡುವ ಕಾರ್ಯ ಆಗಬೇಕಿದೆ. ಅಗತ್ಯತೆಯನ್ನು ತಿಳಿಸಿ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ನೇಮಕಾತಿ: ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ. ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣ ಕ್ಷೇತ್ರದ ಸಮಸ್ಯೆ ನಿವಾರಣೆ ಆಗಬೇಕು. 2 ಲಕ್ಷ 69 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದಷ್ಟು ಬೇಗ ಹುದ್ದೆಗೆ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು. ಸದನವನ್ನು ನಾಳೆ ಬೆಳಗ್ಗೆ 10.30 ಕ್ಕೆ ಮುಂದೂಡಲಾಯಿತು.

ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ: ನಾಳೆ ಹೈಕೋರ್ಟ್​ನಿಂದ ಅಂತಿಮ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.