ETV Bharat / city

ಗೋಪಾಲಕೃಷ್ಣ ಹೇಳಿದಂತೆ ನಾನು ಶ್ರೀ ವೆಂಕಟೇಶ್ವರನ ಮುಂದೆ ಪ್ರಮಾಣ ಮಾಡಲು ಸಿದ್ಧ: ಎಸ್ ಆರ್ ವಿಶ್ವನಾಥ್

author img

By

Published : Dec 4, 2021, 10:51 AM IST

ಅಲ್ಲಿನ ಜನ ಗೋಪಾಲಕೃಷ್ಣ ಮೇಲೆ ಸಿಟ್ಟಾಗಿದ್ದಾರೆ. ತಿರುಪತಿಯಲ್ಲಿ ಅವನಿಗೆ ಸೇಫ್ ಇಲ್ಲ. ನನಗೆ ತಿರುಪತಿಯಲ್ಲಿ ಬಹಳ ಅಭಿಮಾನಿಗಳು ಇದ್ದಾರೆ. ನಾನು ನಿನ್ನೆಯಷ್ಟೇ ತಿರುಪತಿಗೆ ಹೋಗಿದ್ದೆ. ಗೋಪಾಲಕೃಷ್ಣ ಆಂಧ್ರ ಹೆಸರು ಕೆಡಿಸುತ್ತಿದ್ದಾರೆ, ಅವರನ್ನು ನೋಡಿಕೊಳ್ತೀವಿ ಅಂತಾ ಕೆಲವರು ಹೇಳಿದ್ರು..

ಎಸ್.ಆರ್.ವಿಶ್ವನಾಥ್
ಎಸ್.ಆರ್.ವಿಶ್ವನಾಥ್

ಬೆಂಗಳೂರು : ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹೇಳಿದಂತೆ ನಾನು ಪ್ರಮಾಣ ಮಾಡಲು ಸಿದ್ಧ. ಇಲ್ಲೇ ಬೆಂಗಳೂರಿನಲ್ಲೇ ಶ್ರೀ ವೆಂಕಟೇಶ್ವರನ ದೇವಸ್ಥಾನ ಇದೆ. ಪ್ರಮಾಣ ಮಾಡಲು ನಾನು ಸಿದ್ಧ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸವಾಲು ಹಾಕಿದರು.

ಆರ್.ಟಿ.ನಗರ ನಿವಾಸದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಪೊಲೀಸರು ಅರ್ಧ ತನಿಖೆ ಮಾಡಿದ್ದಾರೆ. ಪೊಲೀಸರೇ ತನಿಖೆ ಮಾಡಲಿ ಅಂತಾ ಸಿಎಂಗೆ ಹೇಳಿದ್ದೇನೆ. ಹೆಚ್ಚಿನ ತನಿಖೆ ಬೇಕಾದರೆ ಆಮೇಲೆ ಸಿಎಂ ನಿರ್ಧಾರ ಮಾಡ್ತಾರೆ. ಸದ್ಯಕ್ಕೆ ಪೊಲೀಸರೇ ತನಿಖೆ ಮಾಡಲಿ ಎಂದರು.

ಓದಿ: ಶಾಸಕ ಎಸ್​ ಆರ್ ವಿಶ್ವನಾಥ್ ಕೊಲೆಗೆ ಸಂಚು ಆರೋಪ : ಪೊಲೀಸ್​ ಠಾಣೆಗೆ ಹಾಜರಾದ ಗೋಪಾಲಕೃಷ್ಣ

ನಿನ್ನೆ ಗೋಪಾಲಕೃಷ್ಣನ ಮಾತುಗಳನ್ನು ಕೇಳುತ್ತಿದ್ದೆ. ಮಾತನಾಡುವಾಗ ನಡುಗುತ್ತಿದ್ದ. ವೆಂಕಟೇಶ್ವರನ ಮೇಲೆ ಪ್ರಮಾಣ ಮಾಡಲಿ ಅಂತಾ ಹೇಳಿದ್ದಾನೆ. ವೆಂಕಟೇಶ್ವರನ ಮೇಲೆ ಆಣೆ ಮಾಡಿದ್ರೆ ಕೇಸ್ ಮುಚ್ಚಿ ಹೋಗುತ್ತಾ?. ತನಿಖೆ ಆಗಲಿ, ತನಿಖೆಯಲ್ಲಿ ಸತ್ಯ ಗೊತ್ತಾಗುತ್ತದೆ. ತಿರುಪತಿಗೆ ಪ್ರಮಾಣ ಮಾಡಲು ಹೋದರೆ, ಗೋಪಾಲಕೃಷ್ಣನಿಗೆ ಕಷ್ಟ.

ಅಲ್ಲಿನ ಜನ ಗೋಪಾಲಕೃಷ್ಣ ಮೇಲೆ ಸಿಟ್ಟಾಗಿದ್ದಾರೆ. ತಿರುಪತಿಯಲ್ಲಿ ಅವನಿಗೆ ಸೇಫ್ ಇಲ್ಲ. ನನಗೆ ತಿರುಪತಿಯಲ್ಲಿ ಬಹಳ ಅಭಿಮಾನಿಗಳು ಇದ್ದಾರೆ. ನಾನು ನಿನ್ನೆಯಷ್ಟೇ ತಿರುಪತಿಗೆ ಹೋಗಿದ್ದೆ. ಗೋಪಾಲಕೃಷ್ಣ ಆಂಧ್ರ ಹೆಸರು ಕೆಡಿಸುತ್ತಿದ್ದಾರೆ, ಅವರನ್ನು ನೋಡಿಕೊಳ್ತೀವಿ ಅಂತಾ ಕೆಲವರು ಹೇಳಿದ್ರು.

ಆದ್ರೆ, ನಾನು, ಅವನು ನನಗೆ ಗೊತ್ತಿರುವವನು ಬೇಡ ಬಿಡಿ ಎಂದೆ. ನಾನು ತಿರುಪತಿಗೆ ಬರಲು ಸಿದ್ಧ. ಆದ್ರೆ, ಅವನಿಗೆ ಆ ಜಾಗ ಸೇಫ್ ಅಲ್ಲ. ಮತ್ತೆ ಅಲ್ಲಿ ಹೆಚ್ಚುಕಡಿಮೆ ಆದರೆ ನನ್ನ ಮೇಲೆ ಬರುತ್ತದೆ ಎಂದರು. ವೈಯಾಲಿಕಾವಲ್​ನಲ್ಲಿ ಇರೋ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ನಾನು ರೆಡಿ. ತಿರುಪತಿಗೆ ಬರಬೇಕು ಅಂದ್ರೆ ಅದಕ್ಕೂ ರೆಡಿ. ಚುನಾವಣೆಗಳಲ್ಲಿ ಆಣೆ ಪ್ರಮಾಣ ನೋಡ್ತಿದ್ದೇವೆ. ಆಣೆ ಪ್ರಮಾಣದಿಂದ ಕೇಸ್ ಕ್ಲೋಸ್ ಆಗಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.