ETV Bharat / city

ಸರ್ಕಾರ ಈಗಲೇ ವ್ಯಾಕ್ಸಿನ್ ಉಚಿತ ಎಂದು ಘೋಷಿಸಬೇಕು : ಎಸ್​ ಆರ್​ ಪಾಟೀಲ್​ ಆಗ್ರಹ

ಕೊರೊನಾ ಸಂಕಷ್ಟದ ಸಮಯದಲ್ಲಿ 500-1,000 ಕೊಟ್ಟು ಜನಸಾಮಾನ್ಯರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಬಲು ಕಷ್ಟ. ಹಾಗಾಗಿ ಸರ್ಕಾರ ಈಗಲೇ ವ್ಯಾಕ್ಸಿನ್ ಉಚಿತ ಎಂದು ಘೋಷಿಸಬೇಕು ಎಂದು ಎಸ್​ ಆರ್​ ಪಾಟೀಲ್​ ಆಗ್ರಹಿಸಿದ್ದಾರೆ.

sr patil
sr patil
author img

By

Published : Apr 25, 2021, 6:03 PM IST

ಬೆಂಗಳೂರು : ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಹೆಸರಿನಲ್ಲಿ ಮುನ್ಸೂಚನೆ ನೀಡದೆ ಲಾಕ್‌ಡೌನ್ ಜಾರಿಗೊಳಿಸಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಘೋಷಿತ ಲಾಕ್‌ಡೌನ್ ಜಾರಿಗೊಳಿಸಿದೆ. ಯಾವುದೇ ಮುನ್ಸೂಚನೆ ನೀಡದೇ, ಪೂರ್ವ ಸಿದ್ಧತೆ ಇಲ್ಲದೇ ರಾಜ್ಯದ ಜನರ ಮೇಲೆ ಲಾಕ್​ಡೌನ್ ಹೇರಲಾಗಿದೆ.

ಪೊಲೀಸ್ ಬಲ ಬಳಸಿ ರಾಜ್ಯಾದ್ಯಂತ ಅಂಗಡಿ-ಮು0ಗಟ್ಟುಗಳನ್ನು ಮುಚ್ಚಿಸಲಾಗಿದೆ. ಲಾಕ್​ಡೌನ್ ಇಲ್ಲ ಎಂದಿದ್ದ ಸರ್ಕಾರ ಅಘೋಷಿತ ಲಾಕ್​ಡೌನ್ ಜಾರಿ ಮಾಡಿದ್ದೇಕೆ..? ಅಧಿಕೃತವಾಗಿ ಲಾಕ್​ಡೌನ್ ಎಂದು ಹೇಳಿದರೆ ಜನಸಾಮಾನ್ಯರಿಗೆ ನೆರವು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್​ಡೌನ್ ಹೇರಿದೆ. ಈ ಮೂಲಕ ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನ ಬಿಜೆಪಿ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದಿದ್ದಾರೆ.

ಕರ್ಫ್ಯೂ ಹೇಗಾಗುತ್ತದೆ..? : ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅನ್ನುವುದಾದರೆ ಇದು ಕರ್ಫ್ಯೂ ಹೇಗಾಗುತ್ತದೆ..?ಕರ್ಫ್ಯೂ ಎಂದರೆ ಹೆಚ್ಚು ಜನ ಸೇರುವ ಸ್ಥಳಗಳ ಮೇಲೆ ನಿರ್ಬಂಧ, ಕೋವಿಡ್ ನಿಯಮಗಳ ಕಠಿಣ ಜಾರಿ ಅಲ್ಲವೇ..? ಕರ್ಫ್ಯೂ ಹೆಸರಲ್ಲಿ ಇಡೀ ರಾಜ್ಯ ಲಾಕ್​ಡೌನ್ ಮಾಡಲಾಗಿದೆ.

ಸರ್ಕಾರ ಇದನ್ನು ಅಧಿಕೃತ ಲಾಕ್​ಡೌನ್ ಎಂದು ಘೋಷಿಸಬೇಕು ಎಂದು ಆಗ್ರಹಿಸುತ್ತೇನೆ. ಸರ್ವಪಕ್ಷ ಸಭೆಯಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡುವುದಿಲ್ಲ ಎಂದಿದ್ದ ಸರ್ಕಾರ ಈಗ ಲಾಕ್​ಡೌನ್ ಜಾರಿಗೊಳಿಸುತ್ತಿರುವುದು ಯಾಕೆ..?ಅಘೋಷಿತ ಲಾಕ್​ಡೌನ್ ನಿಂದ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಅನ್ಯಾಯವಾಗಿದ್ದು ಎಲ್ಲ ಅರ್ಹರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವಂತೆ ಬಿಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇಡೀ ರಾಜ್ಯ ನಲುಗಿದೆ: ಕೊರೊನಾ 2ನೇ ಅಲೆ ವೇಗಕ್ಕೆ ಇಡೀ ಕರ್ನಾಟಕ ನಲುಗುತ್ತಿದೆ. ಮೇ 1 ರಿಂದ 18 ವರ್ಷ ಮೀರಿದವರಿಗೂ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈಗ 45 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ನೀಡಲಾಗುತ್ತಿದೆ.

18ವರ್ಷ ಮೇಲ್ಪಟ್ಟವರಿಗೂ ಉಚಿತ ವ್ಯಾಕ್ಸಿನ್ ನೀಡಬೇಕು ಎಂದು ಬಿಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ. ರಾಜ್ಯದ ಬಿಜೆಪಿ ಸರ್ಕಾರ 1 ಕೋಟಿ ವ್ಯಾಕ್ಸಿನ್ ಖರೀದಿಗೆ ನಿರ್ಧಾರ ಮಾಡಿದೆ. ಈಗಾಗಲೇ ಹಲವು ರಾಜ್ಯಗಳು ಉಚಿತವಾಗಿ ವ್ಯಾಕ್ಸಿನ್ ನೀಡುವ ಘೋಷಣೆ ಮಾಡಿವೆ.

ಹೀಗಾಗಿ, ಮುಖ್ಯಮಂತ್ರಿಗಳು ರಾಜ್ಯದಲ್ಲೂ ಉಚಿತವಾಗಿ ವ್ಯಾಕ್ಸಿನ್ ಕೊಡುವ ಘೋಷಣೆ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ 500-1,000 ಕೊಟ್ಟು ಜನಸಾಮಾನ್ಯರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಬಲು ಕಷ್ಟ.

ಹಾಗಾಗಿ ಸರ್ಕಾರ ಈಗಲೇ ವ್ಯಾಕ್ಸಿನ್ ಉಚಿತ ಎಂದು ಘೋಷಿಸಬೇಕು. ವ್ಯಾಕ್ಸಿನ್ ವಿಷಯದಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿಗೆ ಒಳಗಾಗದೇ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಕೊಡುವ ನಿರ್ಧಾರ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.