ಬೆಂಗಳೂರು: ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಶಮನಕ್ಕಾಗಿ ಮತ್ತು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠರು ದೇವರ ಮೊರೆ ಹೋಗಿದ್ದು, ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನಿನ್ನೆ ರಾತ್ರಿಯಿಂದಲೇ ಹೋಮ, ಹವನ ಹಾಗೂ ವಿಶೇಷ ಪೂಜೆಯಲ್ಲಿ ತೊಡಗಿದ್ದಾರೆ.
ದೈವ ಭಕ್ತರಾಗಿರುವ ಗೌಡರ ಕುಟುಂಬ, ಹೋಮ-ಹವನ ಮಾಡಿಸುವುದರಲ್ಲಿ ಒಂದು ಕೈ ಮುಂದು. ಹಾಗಾಗಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ನಿನ್ನೆ ರಾತ್ರಿಯಿಂದಲೇ ವಿಶೇಷ ಪೂಜೆ ನಡೆಯುತ್ತಿದೆ. ದೇವೇಗೌಡರು, ಹೆಚ್.ಕೆ. ಕುಮಾರಸ್ವಾಮಿ ಹಾಗೂ ಆಪ್ತರು ಮಾತ್ರ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಕಚೇರಿ ಸಿಬ್ಬಂದಿಯನ್ನು ಹೊರಗಿಟ್ಟು ಹೋಮ ಮಾಡಿಸುತ್ತಿದ್ದು, ಮಾಧ್ಯಮಗಳಿಗೂ ಪ್ರವೇಶ ನಿಷೇಧಿಸಲಾಗಿದೆ.
ಕಚೇರಿ ಗೇಟ್ಗೂ ಬೀಗ ಹಾಕಿಕೊಂಡು ದೀಪಾವಳಿ ಹಬ್ಬ ಮುಗಿದ ನಂತರ ವಿಶೇಷ ಪೂಜೆ ಮಾಡಿಸುತ್ತಿದ್ದು ,ಗೌಪ್ಯ ಹೋಮ-ಹವನದ ಗುಟ್ಟೇನು? ಎಂಬ ಪಶ್ನೆ ಎದ್ದಿದೆ.