ETV Bharat / city

ಕಾಂಗ್ರೆಸ್​​ ಸಂಘಟಿಸಲು ರಾಜ್ಯ ನಾಯಕರಿಗೆ ಸ್ಪೆಷಲ್​​​ ಟ್ರೈನಿಂಗ್​​: ವೇಣುಗೋಪಾಲ್​ - ಕಾಂಗ್ರೆಸ್

ರಾಜ್ಯ ನಾಯಕರಿಗೆ ಪಕ್ಷವನ್ನು ಯಾವ ರೀತಿ ಸಂಘಟಸಿಬೇಕು ಎಂಬುದನ್ನು ತಿಳಿಸಲು ಮೂರು ದಿನ ನಾಯಕತ್ವ ಕುರಿತು ತರಬೇತಿ ಶಿಬಿರ ನಡೆಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಕೆ ಸಿ ವೇಣುಗೋಪಾಲ್
author img

By

Published : Jun 26, 2019, 9:06 PM IST

ಬೆಂಗಳೂರು: ರಾಜ್ಯ ನಾಯಕರಿಗೆ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು ಎಂಬುದನ್ನು ತಿಳಿಸಲು ಮೂರು ದಿನ ನಾಯಕತ್ವ ಕುರಿತು ತರಬೇತಿ ಶಿಬಿರ ನಡೆಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕ ಮಾತನಾಡಿದ ಅವರು, ಮೂರು ವಾರದೊಳಗೆ ಕೆಪಿಸಿಸಿ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕಕ್ಕೆ ಸೂಚನೆ ನೀಡಲಾಗಿದೆ. ನಂತರ ಡಿಸಿಸಿ, ಬ್ಲಾಕ್ ಮಟ್ಟದಲ್ಲೂ ಪದಾಧಿಕಾರಿಗಳ ನೇಮಕವಾಗುತ್ತೆ. ಬೂತ್​ ಮಟ್ಟದಲ್ಲಿ ಕೂಡ ಸಮಿತಿಗಳನ್ನು ಪುನರ್ ಸಂಘಟಿಸಿ ಪಕ್ಷ ಸಂಘಟನೆಗೆ ನಿರ್ಧರಿಸಲಾಗಿದ್ದು, ಪದಾಧಿಕಾರಿಗಳ ಆಯ್ಕೆಗೆ ಅವರ ಅರ್ಹತೆಯೇ ಮಾನದಂಡವಾಗಿರಲಿದ ಎಂದರು.

ಕೆ.ಸಿ.ವೇಣುಗೋಪಾಲ್​, ಕಾಂಗ್ರೆಸ್ ರಾಜ್ಯ​ ಉಸ್ತುವಾರಿ

ಲೋಕಸಭೆ ಪರಾಜಿತ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಿದ್ದು, ಲೋಕಸಭೆ ಚುನಾವಣೆಯಲ್ಲಾದ ಹಿನ್ನೆಡೆಯ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇವೆ ಎಂದರು. ಸಭೆಯಲ್ಲಿ ಹಿರಿಯರಿಂದ ಬೂತ್​ ಮತ್ತು ಬ್ಲಾಕ್ ಸಮಿತಿಗಳ ನಡುವೆ ಪಂಚಾಯತಿ ಮಟ್ಟದ ಸಮಿತಿ ಕೂಡ ರಚನೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಇವೆಲ್ಲದರ ಮರು ಸಂಘಟನೆ ಮುಂದಿನ ಮೂರು ತಿಂಗಳಲ್ಲಿ ಆಗಲಿದೆ ಎಂದರು.

Intro:newsBody:ಕಾಂಗ್ರೆಸ್ ಪಕ್ಷವನ್ನು ಭೂತ್ ಮಟ್ಟದಿಂದ ಮರು ಸಂಘಟಿಸುತ್ತೇವೆ: ವೇಣುಗೋಪಾಲ್

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಭೂತ್ ಮಟ್ಟದಿಂದ ಮರು ಸಂಘಟಿಸಲು ತೀರ್ಮಾನಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸರಣಿ ಸಭೆಗಳ ಮುಕ್ತಾಯದ ಬಳಿಕ ಮಾತನಾಡಿ, ಬೆಳಗ್ಗೆಯಿಂದ ಎರಡು ಸಭೆ ನಡೆಸಿದ್ದೇವೆ. ಮೂರು ವಾರದೊಳಗೆ ಕೆಪಿಸಿಸಿ ಪದಾಧಿಕಾರಿಗಳ ಸಮಿತಿಗಳಿಗೆ ನೇಮಕಕ್ಕೆ ಸೂಚನೆ ನೀಡಲಾಗಿದೆ. ನಂತರ ಡಿಸಿಸಿ, ಬ್ಲಾಕ್ ಮಟ್ಟದಲ್ಲೂ ಪದಾಧಿಕಾರಿಗಳ ನೇಮಕ ಆಗುತ್ತೆ. ಭೂತ್ ಮಟ್ಟದಲ್ಲಿ ಕೂಡ ಸಮಿತಿಗಳನ್ನು ಪುನರ್ ಸಂಘಟಿಸಿ ಪಕ್ಷ ಸಂಘಟನೆಗೆ ನಿರ್ಧರಿಸಿದ್ದೇವೆ. ಎಲ್ಲಾ ಹಂತದಲ್ಲೂ ಆಯ್ಕೆಮಾಡುವಾಗ ಪದಾಧಿಕಾರಿಗಳ ಅರ್ಹತೆಯೇ ಮಾನದಂಡವಾಗಿ ಇರಲಿದೆ ಎಂದರು.
ಪಕ್ಷ ಸಂಘಟನೆಗೆ ಒತ್ತು ಕೊಡಲು ತೀರ್ಮಾನ ಕೈಗೊಂಡಿದ್ದೇವೆ. ಮೂರು ದಿನ ನಾಯಕತ್ವ ಕುರಿತು ತರಬೇತಿ ಶಿಬಿರ ನಡೆಸಲು ನಿರ್ಧಾರ ಕೈಗೊಳ್ಳುತ್ತೇವೆ. ಇಂದು ಬೆಳಿಗ್ಗೆ ಲೋಕಸಭೆ ಪರಾಜಿತ ಅಭ್ಯರ್ಥಿ ಗಳ ಜೊತೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಿದ್ದೇನೆ. ಎರಡರಲ್ಲಿಯೂ ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆಯ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇವೆ. ಪಕ್ಷ ಸಂಘಟನೆ ದೃಷ್ಟಿಯಲ್ಲಿ ಹೇಗೆ ಮುಂದುವರಿಯಬೇಕು ಎಂಬ ಕುರಿತು ಮಾಹಿತಿ ಪಡೆದಿದ್ದೇವೆ. ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಹಿರಿಯರಿಂದ ಭೂತ್ ಮತ್ತು ಬ್ಲಾಕ್ ಸಮಿತಿಗಳ ನಡುವೆ ಪಂಚಾಯತಿ ಮಟ್ಟದ ಸಮಿತಿ ಕೂಡ ರಚನೆಯಾಗಬೇಕೆಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗಿದೆ. ಇವೆಲ್ಲಾ ಮರು ಸಂಘಟನೆ ಮುಂದಿನ ಮೂರು ತಿಂಗಳಲ್ಲಿ ಆಗಲಿದೆ ಎಂದರು.
ಇಂದಿನ ಸಭೆಯಲ್ಲಿ ರಾಜ್ಯಮಟ್ಟದ ನಾಯಕತ್ವ ತರಬೇತಿ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಿದ್ದೇವೆ. ಇಲ್ಲಿ ಪಕ್ಷದ ಹಿನ್ನಡೆ, ಸಂಘಟನೆ ಹಾಗೂ ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಯಬೇಕೆಂಬ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿವರಿಸಲಿದ್ದಾರೆ ಎಂದರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.