ETV Bharat / city

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ವ್ಯವಸ್ಥೆ - Special Train service from Bangalore

ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಯಶವಂತಪುರ ಹಾಗೂ ವಿಜಯಪುರಗಳ ನಡುವೆ ಹಬ್ಬದ ವಿಶೇಷ ಎಕ್ಸ್​ಪ್ರೆಸ್ ರೈಲು ಸೇವೆಯನ್ನ ಒದಗಿಸುತ್ತಿದೆ. ನವೆಂಬರ್ 3 ರಿಂದ ವಿಜಯಪುರದಿಂದ ಹಾಗೂ ನವೆಂಬರ್ 7 ರಂದು ಯಶವಂತಪುರದಿಂದ ಪ್ರತ್ಯೇಕ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲು ನಿರ್ಧರಿಸಿದೆ..

Special Train service from Bangalore
ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ವ್ಯವಸ್ಥೆ
author img

By

Published : Oct 31, 2021, 9:06 PM IST

ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಪ್ರಯಾಣಿಕರು ತಮ್ಮ-ತಮ್ಮ ಊರುಗಳಿಗೆ ತೆರಳುವುದರಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ರೈಲ್ವೆ ಸೇವೆಯನ್ನ ಒದಗಿಸಲು ಇಲಾಖೆ ಮುಂದಾಗಿದೆ.

ವಿಶೇಷ ಎಕ್ಸ್‌ಪ್ರೆಸ್‌ ರೈಲು
ವಿಶೇಷ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ

ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಯಶವಂತಪುರ ಹಾಗೂ ವಿಜಯಪುರಗಳ ನಡುವೆ ಹಬ್ಬದ ವಿಶೇಷ ಎಕ್ಸ್​ಪ್ರೆಸ್ ರೈಲು ಸೇವೆಯನ್ನ ಒದಗಿಸುತ್ತಿದೆ.

ನವೆಂಬರ್ 3ರಿಂದ ವಿಜಯಪುರದಿಂದ ಹಾಗೂ ನವೆಂಬರ್ 7ರಂದು ಯಶವಂತಪುರದಿಂದ ಪ್ರತ್ಯೇಕ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲು ನಿರ್ಧರಿಸಿದೆ.

ಮೊದಲನೇ ದರ್ಜೆ, ಎರಡನೇ ದರ್ಜೆ, ಹನ್ನೆರಡು ಸ್ಲೀಪರ್ ಹಾಗೂ ಎರಡು ಲಗ್ಗೇಜ್ ಕಮ್ ಬ್ರೇಕ್ ವ್ಯಾನ್/ದಿವ್ಯಾಂಗ ಸ್ನೇಹಿ ಬೋಗಿಗಳು ಸೇರಿ ಒಟ್ಟು 20 ಬೋಗಿಗಳು ಇರಲಿವೆ.

ವಾರದ ವಿಶೇಷ ರೈಲು:

  • ರೈಲು ಸಂ.02741/02742: ವಾಸ್ಕೊ ಡ ಗಾಮ - ಪಾಟ್ನಾ ಜಂಕ್ಷನ್ - ವಾಸ್ಕೊ ಡ ಗಾಮ ಹಬ್ಬದ ವಿಶೇಷ ಸಾಪ್ತಾಹಿಕ ಎಕ್ಸ್ ಪ್ರೆಸ್​ ರೈಲು ಇರಲಿದೆ. ಇದು ಪ್ರತಿ ಬುಧವಾರದಂದು ವಾಸ್ಕೋ ಡ ಗಾಮದಿಂದ ನಿರ್ಗಮಿಸಲಿದೆ. ನವೆಂಬರ್ 3 ರಿಂದ ಈ ಸೇವೆ ಅನ್ವಯವಾಗಲಿದೆ.
  • ರೈಲು ಸಂ.02741: ಪಾಟ್ನಾ ಜಂಕ್ಷನ್ - ವಾಸ್ಕೊ ಡ ಗಾಮ ಹಬ್ಬದ ವಿಶೇಷ ಸಾಪ್ತಾಹಿಕ ಎಕ್ಸ್ ಪ್ರೆಸ್ ಪ್ರತಿ ಶನಿವಾರದಂದು ಓಡಾಟ ನಡೆಸಲಿದೆ. ಇದು ನವೆಂಬರ್ 6 ರಿಂದ ಅನ್ವಯವಾಗಲಿದೆ.
    ವಿಶೇಷ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ
    ವಿಶೇಷ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ

ಬೆಂಗಳೂರಿನಿಂದ ಕಾರವಾರ :

  • ರೈಲು ಸಂ. 06585/06586: ಕೆಎಸ್​ಆರ್ ಬೆಂಗಳೂರಿನಿಂದ ಕಾರವಾರ ಹಾಗೂ ಕಾರವಾರದಿಂದ ಕೆಎಸ್​ಆರ್ ಬೆಂಗಳೂರಿಗೆ ನಿತ್ಯ ವಿಶೇಷ ಎಕ್ಸ್ ಪ್ರೆಸ್ ಇರಲಿದೆ. ನವೆಂಬರ್ 1 ರಿಂದ ಕೆಎಸ್​ಆರ್ ಬೆಂಗಳೂರು ನಿಲ್ದಾಣದಿಂದ ಸಂಚಾರಿಲಿದೆ.
  • ರೈಲು ಸಂ.06211/06212: ಯಶವಂತಪುರ - ಕಾರವಾರ - ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ಸೇವೆಯು ಇರಲಿದ್ದು, ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರಗಳಂದು ಯಶವಂತಪುರದಿಂದ ಓಡಾಡಲಿದೆ. ಕಾರವಾರದಿಂದ ಯಶವಂತಪುರದ ವಿಶೇಷ ಎಕ್ಸ್ ಪ್ರೆಸ್ ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರಗಳಂದು ಸಂಚಾರಲಿದೆ. ಇದು ನವೆಂಬರ್ 2 ರಿಂದ ಕಾರವಾರದಿಂದ ಅನ್ವಯವಾಗಲಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.