ETV Bharat / city

ಹಿಜಾಬ್-ಕೇಸರಿ ಸಂಘರ್ಷವನ್ನು ದುರುಪಯೋಗ ಮಾಡಿಕೊಳ್ಳೋದು ಬೇಡ : ಸ್ಪೀಕರ್ ಕಾಗೇರಿ ಮನವಿ

author img

By

Published : Feb 12, 2022, 9:27 PM IST

Updated : Feb 12, 2022, 10:06 PM IST

ಈ ಬಾರಿಯ ಅಧಿವೇಶನದಲ್ಲಿ ಎರಡು ವಿಧೇಯಕಗಳು ನನ್ನ ಕಚೇರಿಗೆ ಬಂದಿವೆ. ಕರ್ನಾಟಕ ಸ್ಟ್ಯಾಂಪ್ ವಿಧೇಯಕ ಮತ್ತು ಕರ್ನಾಟಕ ಕ್ರಿಮಿನಲ್ ತಿದ್ದುಪಡಿ ವಿಧೇಯಕ. ಇಲ್ಲಿಯತನಕ 2 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಬಂದಿವೆ. ಈ ಬಾರಿಯ ಜಂಟಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ..

speaker-kageri
ಸ್ಪೀಕರ್ ಕಾಗೇರಿ

ಬೆಂಗಳೂರು : ಹಿಜಾಬ್-ಕೇಸರಿ ವಿವಾದ ನ್ಯಾಯಾಂಗದ ತೀರ್ಪು ಗೌರವಿಸೋಣ. ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಕೊಡುವುದು ಬೇಡ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಮಧ್ಯಂತರ ತೀರ್ಪು ಕೊಟ್ಟಿದೆ. ನಾವು ನ್ಯಾಯಾಂಗದ ತೀರ್ಪನ್ನು ಗೌರವಿಸಬೇಕು. ಈ ಪರಿಸ್ಥಿತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುವ ಕೆಲಸವಾಗುತ್ತದೆ. ಆದರೆ, ಇದಕ್ಕೆ ಅವಕಾಶ ನೀಡದೆ‌ ಕೋರ್ಟ್ ತೀರ್ಪನ್ನು ಗೌರವಿಸೋಣ ಎಂದರು.

ಹಿಜಾಬ್-ಕೇಸರಿ ವಿವಾದದ ಕುರಿತು ಸ್ಪೀಕರ್​ ಕಾಗೇರಿ ಮಾತನಾಡಿರುವುದು..

ಗ್ರ್ಯಾಂಡ್ ಸ್ಟೆಪ್ಸ್​ನಿಂದ ರಾಜ್ಯಪಾಲರ ಎಂಟ್ರಿ : ಈ ಬಾರಿಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣಕ್ಕಾಗಿ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಸೌಧಕ್ಕೆ ಪ್ರವೇಶಿಸಲಿದ್ದಾರೆ. ಈ ಹಿಂದೆಯೂ ಗ್ರ್ಯಾಂಡ್ ಸ್ಟೆಪ್ಸ್​ನಿಂದ ಪ್ರವೇಶ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ ಅದು ಇರಲಿಲ್ಲ. ಆದ್ರೆ, ಈ ಬಾರಿ ಅಧಿವೇಶನಕ್ಕೆ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ರಾಜ್ಯಪಾಲರು ಪ್ರವೇಶಿಸಲಿದ್ದಾರೆ. ಅದಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಅಧಿವೇಶನದಲ್ಲಿ ಎರಡು ವಿಧೇಯಕಗಳು ನನ್ನ ಕಚೇರಿಗೆ ಬಂದಿವೆ. ಕರ್ನಾಟಕ ಸ್ಟ್ಯಾಂಪ್ ವಿಧೇಯಕ ಮತ್ತು ಕರ್ನಾಟಕ ಕ್ರಿಮಿನಲ್ ತಿದ್ದುಪಡಿ ವಿಧೇಯಕ. ಇಲ್ಲಿಯತನಕ 2 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಬಂದಿವೆ. ಈ ಬಾರಿಯ ಜಂಟಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.

ಚುನಾವಣಾ ಸುಧಾರಣೆ ಮೇಲೆ ಚರ್ಚೆ : ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಸದನ ಕಾರ್ಯಕಲಾಪ ಸಮಿತಿಯಲ್ಲಿ ಚರ್ಚಿಸಿ, ಈ ವಿಷಯ ಕುರಿತು ಸದನದಲ್ಲಿ ವಿಸ್ತೃತ ಚರ್ಚೆಗೆ ಕಾಲಾವಕಾಶ ಮಾಡಿಕೊಡಲು ಸೂಕ್ತ ದಿನಾಂಕ ಮತ್ತು ಸಮಯವನ್ನು ನಿರ್ಧಾರ ಮಾಡಲಾಗುವುದು ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.

ಓದಿ: ತವರು ಮನೆಯಲ್ಲಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ

Last Updated : Feb 12, 2022, 10:06 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.