ETV Bharat / city

ಶೋಭಾಯಾತ್ರೆಯಲ್ಲಿ ಡಿಜೆಗೆ ನಿರ್ಬಂಧ, ಪ್ರಚೋದನಕಾರಿ ಭಾಷಣ ಮಾಡಿದ್ರೆ ಕ್ರಮ: ಎಸ್​​ಪಿ ವಂಶಿಕೃಷ್ಣ - Shobhyatra on ramnavami procession

ಶೋಭಾಯಾತ್ರೆ ಹಿನ್ನೆಲೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ವಿವಿಧ ಸಮುದಾಯಗಳ‌ ಮುಖಂಡರ‌ ಜತೆ ಶಾಂತಿ‌ ಸಭೆ ನಡೆಸಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ‌ ಸೂಚನೆ ಕೊಟ್ಟಿದ್ದೇವೆ. ಮೆರವಣಿಗೆ‌ ಸಂಬಂಧ ಕೆಲ‌ ಇಲಾಖೆಗಳಿಗೆ ಪತ್ರ ಕೂಡ ಬರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನಾ ವಂಶಿಕೃಷ್ಣ ತಿಳಿಸಿದರು.

SP Kona Vamsi Krishna
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನಾ ವಂಶಿಕೃಷ್ಣ
author img

By

Published : Apr 10, 2022, 6:59 AM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಶ್ರೀರಾಮನವಮಿ ಅಂಗವಾಗಿ ನಡೆಯಲಿರುವ ಶೋಭಾಯಾತ್ರೆ ಮೆರವಣಿಗೆಯಲ್ಲಿ ಯಾರಾದರೂ ಪ್ರಚೋದನಾಕಾರಿ ಭಾಷಣ ಅಥವಾ ಕೃತ್ಯ ನಡೆಸಿದರೆ ಮುಲಾಜಿಲ್ಲದೇ‌ ಕಾನೂನು‌ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನಾ ವಂಶಿಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಇಂದು ಹಿಂದೂಪರ ಸಂಘಟನೆಗಳಿಂದ ಶ್ರೀರಾಮ ಶೋಭಾಯಾತ್ರೆ ಕಾರ್ಯಕ್ರಮ ಇರುವ ಹಿನ್ನೆಲೆ ನಗರದಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಭದ್ರತಾ‌‌ ಕ್ರಮಗಳನ್ನು‌ ಪರಿಶೀಲಿಸಲು ಬಂದ ವೇಳೆ ಈ ಎಚ್ಚರಿಕೆ ರವಾನಿಸಿದ್ದಾರೆ.

ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ರೆ ಕ್ರಮ: ಎಸ್​​ಪಿ ಕೋನಾ ವಂಶಿಕೃಷ್ಣ

ಇದೇ ವೇಳೆ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು, ಶೋಭಾಯಾತ್ರೆ ಹಿನ್ನೆಲೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ವಿವಿಧ ಸಮುದಾಯಗಳ‌ ಮುಖಂಡರ‌ ಜತೆ ಶಾಂತಿ‌ ಸಭೆ ನಡೆಸಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ‌ ಸೂಚನೆ ಕೊಟ್ಟಿದ್ದೇವೆ. ಮೆರವಣಿಗೆ‌ ಸಂಬಂಧ ಕೆಲ‌ ಇಲಾಖೆಗಳಿಗೆ ಪತ್ರ ಕೂಡ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಶೋಭಾಯಾತ್ರೆಯಲ್ಲಿ 2 ಕೆಎಸ್ಆರ್​​ಪಿ ತುಕಡಿ, 5 ಡಿಎಆರ್ ತುಕಡಿ, 25 ಮಂದಿ ಸಿಪಿಐ, ಪಿಎಸ್​​ಐಗಳು, 500 ಸಿಬ್ಬಂದಿಯನ್ನು‌ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಮೆರವಣಿಗೆ ಆರಂಭ ಹಾಗೂ ಮುಕ್ತಾಯದ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಘಟಕರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಡಿಜೆ ಬಳಕೆಗೆ ನಿರ್ಬಂಧ: ಶೋಭಾಯಾತ್ರೆಯಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಉಪಕರಣ(ಡಿ.ಜೆ) ಬಳಕೆಯನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬಳಸಿದ್ದಲ್ಲಿ ತಕ್ಷಣವೇ ಸೀಜ್‌ ಮಾಡಲಾಗುವುದು. ಮೆರವಣಿಗೆ ಮಾರ್ಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಬಂಧಿಸಲಾಗುವುದು. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸಂಘಟಕರಿಗೆ ನಿರ್ದೇಶನ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ‌ ಅಲ್ಲಲ್ಲಿ ಡ್ರೋಣ್ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ರಾಮಭಕ್ತರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಯಾವ ಉಗ್ರರಿಗಿಂತ ಕಮ್ಮಿಯಿಲ್ಲ.. ಅನ್ನಕ್ಕೆ ಮಣ್ಣು ಹಾಕುವುದು ಯಾವ ಧರ್ಮ.. ಹೆಚ್‌ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.