ಬೆಂಗಳೂರು: ಎಸ್ಐಟಿ ವಶದಲ್ಲಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ನ ವಿಚಾರಣೆಯನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದು ನಿನ್ನೆಯಿಂದ ಎಸ್ಐಟಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತ್ತು. ಇಂದು ಸಹ ಡೋರ್ ಕ್ಲೋಸ್ ಮಾಡಿಕೊಂಡು ಮನ್ಸೂರ್ ವಿಚಾರಣೆ ಮುಂದುವರೆಸಿದ್ದಾರೆ.
ತನಿಖಾಧಿಕಾರಿಗಳನ್ನು ಬಿಟ್ಟರೆ ಮನ್ಸೂರ್ ಇರುವ ಕೊಠಡಿಗೆ ಯಾರ ಎಂಟ್ರಿಯೂ ಇಲ್ಲದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಹಾಗೂ ಮನ್ಸೂರ್ ಜೊತೆ ಯಾವುದೇ ಪೊಲೀಸ್ ಸಿಬ್ಬಂದಿ ಮಾತನಾಡದಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.