ETV Bharat / city

ಹಣದ ಕೊರತೆ ನೆಪವೊಡ್ಡಿ 'ಅನುಗ್ರಹ' ಯೋಜನೆ ನಿಲ್ಲಿಸಬೇಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ

ಜಾನುವಾರುಗಳು ಸತ್ತಾಗ ಹತ್ತು ಸಾವಿರ ರೂಪಾಯಿವರೆಗೆ ಪರಿಹಾರ ನೀಡುವ 'ಅನುಗ್ರಹ' ಯೋಜನೆಯನ್ನು ಹಣದ ಕೊರತೆಯ ನೆಪ ಹೇಳಿ ನಿಲ್ಲಿಸಬಾರದು ಎಂದು ಸಿದ್ದರಾಮಯ್ಯ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

author img

By

Published : Apr 28, 2020, 3:11 PM IST

siddu
siddu

ಬೆಂಗಳೂರು: ಕುರಿ, ಮೇಕೆ, ಹಸು, ಎಮ್ಮೆ, ಎತ್ತು‌ ಮುಂತಾದ ಜಾನುವಾರುಗಳು ಸತ್ತಾಗ ಹತ್ತು ಸಾವಿರ ರೂಪಾಯಿವರೆಗೆ ಪರಿಹಾರ ನೀಡುವ 'ಅನುಗ್ರಹ' ಯೋಜನೆಯನ್ನು ಹಣದ ಕೊರತೆಯ ನೆಪ ಹೇಳಿ ನಿಲ್ಲಿಸಬಾರದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಅದಕ್ಕೆ ಅವಶ್ಯಕ ಅನುದಾನ ಒದಗಿಸಿ ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

siddaramayy asks not to stop anugraha project
ಸಿದ್ದರಾಮಯ್ಯ ಪತ್ರ

ಪಶುಪಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವೇಣಗುಡ್ಡದ ಬಳಿ ಕರಬೂಜ ಹಣ್ಣು ಹಾಗೂ ಬಳ್ಳಿ ತಿಂದು ರಾಮಕೃಷ್ಣಪ್ಪ ಎಂಬ ಕುರಿಗಾಹಿಗೆ ಸೇರಿದ ಸುಮಾರು 60 ಕುರಿಗಳು ಹೊಟ್ಟೆ ಒಡೆದು ಸತ್ತಿವೆ. ಈ ರೀತಿಯ ಪ್ರಕರಣಗಳು ರಾಜ್ಯಾದ್ಯಂತ ಸಂಭವಿಸುತ್ತಿವೆ. ಇದರಿಂದ ಪಶುಪಾಲಕರು ತೀವ್ರ ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಸತ್ತರೆ ಗರಿಷ್ಠ ಹತ್ತು ಸಾವಿರ ರೂಪಾಯಿವರೆಗೆ ಪರಿಹಾರ ನೀಡುವ 'ಅನುಗ್ರಹ' ಯೋಜನೆ ಜಾರಿಗೆ ತಂದಿದ್ದೆವು. ಇದು ಪರಿಣಾಮಕಾರಿಯಾಗಿತ್ತು. ಇದರಿಂದ ಪಶುಪಾಲಕರಿಗೆ ಸಣ್ಣದೊಂದು ಭದ್ರತೆಯ ಭರವಸೆ ಇತ್ತು.

ಸಿದ್ದರಾಮಯ್ಯ ಟ್ವೀಟ್

ಈ ಯೋಜನೆಗೆ ನೂರಾರು ಕೋಟಿಯ ಅನುದಾನದ ಅವಶ್ಯತೆಯೂ ಇರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಅನುಗ್ರಹ ಯೋಜನೆಯನ್ನು ನಿಲ್ಲಿಸಿ ಪಶುಪಾಲಕರ ವಿರೋಧಿ ನಿಲುವನ್ನು ಸರ್ಕಾರ ತೆಗೆದುಕೊಳ್ಳಬಾರದು. ರಾಮಕೃಷ್ಣಪ್ಪ ಮುಂತಾದ ಪಶುಪಾಲಕರಿಗೆ ಪರಿಹಾರವನ್ನು ತುರ್ತಾಗಿ ನೀಡಬೇಕೆಂದು ಒತ್ತಾಯಿಸುತ್ತೇನೆ. ಹಾಗೆಯೇ ಅನುಗ್ರಹ ಯೋಜನೆಗೆ ಈ ಹಣಕಾಸು ವರ್ಷದಲ್ಲಿ ಅನುದಾನ ನಿಗದಿ ಮಾಡಲು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.