ETV Bharat / city

ಬೆಲೆ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​​ಗೆ ಕೇಳಿ?: ಆರಗ ಜ್ಞಾನೇಂದ್ರಗೆ ಸಿದ್ದರಾಮಯ್ಯ ಟಾಂಗ್ - ಬೆಂಗಳೂರು

'ಎಲ್ಲ ವಸ್ತುಗಳ ದರ ಏರಿಕೆಗೆ ಇಂಧನ ದರ ಹೆಚ್ಚಳವೊಂದೇ ಕಾರಣವಲ್ಲ. ದೋಸೆ ದರ ಏರಲು ಅಕ್ಕಿಯ ದರ ಏರಿದ್ದು ಕಾರಣ'- ಆರಗ ಜ್ಞಾನೇಂದ್ರ

Siddaramaiah
ಸಿದ್ದರಾಮಯ್ಯ
author img

By

Published : Sep 15, 2021, 8:41 PM IST

ಬೆಂಗಳೂರು: ಬೆಲೆ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​​ಗೆ ಕೇಳಿ ಗೊತ್ತಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಬೆಲೆ ಏರಿಕೆ ವಿಚಾರ-ಆರಗ ಜ್ಞಾನೇಂದ್ರಗೆ ಸಿದ್ದರಾಮಯ್ಯ ಟಾಂಗ್

ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆಯಲ್ಲಿ ಮಾತನಾಡುತ್ತಾ, ಜನವರಿಯಲ್ಲಿ ಕಾಫಿ ಬೆಲೆ 15 ರೂ. ಇತ್ತು. ಈಗ 30 ರೂ.ಗೆ ಏರಿಕೆಯಾಗಿದೆ. ದೋಸೆಗೆ 25 ರೂ. ಇದ್ದದ್ದು, ಈಗ 50 ರೂ. ಆಗಿದೆ ಎಂದರು.

ಈ ವೇಳೆ ಎಲ್ಲದಕ್ಕೂ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಕಾರಣವಾ?. ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.‌ ಅಲ್ಲದೇ ಎಲ್ಲ ವಸ್ತುಗಳ ದರ ಏರಿಕೆಗೆ ಇಂಧನ ದರ ಹೆಚ್ಚಳವೊಂದೇ ಕಾರಣವಲ್ಲ. ದೋಸೆ ದರ ಏರಲು ಅಕ್ಕಿಯ ದರ ಏರಿದ್ದು ಕಾರಣ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೌದು ದೋಸೆ ಬೆಲೆ ಹೆಚ್ಚಲು ಡೀಸೆಲ್ ದರ ಏರಿಕೆ ಕಾರಣ. ಡೀಸೆಲ್ ದರ ಹೆಚ್ಚಾದರೆ ಸಾಗಾಣಿಕೆ ದರ ಹೆಚ್ಚಾಗುತ್ತದೆ. ಗ್ಯಾಸ್ ದರ ಹೆಚ್ಚಳ ಆದರೆ ಅಡುಗೆ ಬೆಲೆ ಹೆಚ್ಚಳ ಆಗುತ್ತದೆ. ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್​​ಗೆ ಕೇಳಿ ನೋಡಿ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಕಿಚಾಯಿಸಿದ‌ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.