ಬೆಂಗಳೂರು : ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೂಡಲೇ ಪಿಎಸ್ಐನ ಅರೆಸ್ಟ್ ಮಾಡಬೇಕು. ಅವನನ್ನ ಈಗ ಸಸ್ಪೆಂಡ್ ಮಾಡಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸೋದು ಅಮಾನವೀಯ.
ಅದು ಒಬ್ಬ ಪಿಎಸ್ಐ ಮಾಡಿರೋದು ಸರಿಯಲ್ಲ. ರಕ್ಷಣೆ ಕೊಡಬೇಕಾದವರೆ ಈ ರೀತಿ ಮಾಡಿದರೆ ಹೇಗೆ? ಮೊದಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲೇ ಘಟನೆ ನಡೆದರೂ ಸಿ ಟಿ ರವಿ ಸುಮ್ಮನಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ದಲಿತರ ವಿರೋಧಿಗಳು. ಅವರು ಯಾವತ್ತು ದಲಿತರ ಪರವಾಗಿದ್ದಾರೆ? ಎಂದರು.
ಓದಿ: ಮೂತ್ರ ಕುಡಿಸಿದ ಪ್ರಕರಣ ಸಿಐಡಿ ತನಿಖೆಗೆ: ಪಿಎಸ್ಐ ಅರ್ಜುನ್ ಅಮಾನತು