ಬೆಂಗಳೂರು: ಕೇಂದ್ರ ಮಾಜಿ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ವಿಧಾನಸಭೆ ಕಲಾಪದಲ್ಲಿ ಸಂತಾಪ ಸೂಚಿಸಲಾಯಿತು. ಸಂತಾಪಕ ಸೂಚಕದ ಮೇಲೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಫರ್ನಾಂಡಿಸ್ ಅವರು ಉಡುಪಿಯವರು.
ಒಬ್ಬ ಮುನ್ಸಿಪಾಲ್ ಸದಸ್ಯನಾಗಿ ರಾಷ್ಟ್ರ ನಾಯಕನ ಮಟ್ಟಿಗೆ ಅವರು ರಾಜಕಾರಣದಲ್ಲಿ ಬೆಳದಿದ್ದರು. ಟಿಎ ಪೈ ಅಂತ ಘಟಾನುಘಟಿಯನ್ನು ಎದುರಿಸಿ ಸೋಲಿಸಿದ್ರು ಎಂದು ನೆನಪಿಸಿಕೊಂಡರು.
ಒಬ್ಬ ಸಾಮಾನ್ಯ ಮುನ್ಸಿಪಾಲ್ ಸದಸ್ಯ 1980ರಲ್ಲಿ ಟಿಎ ಪೈ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ರು. ಆ ಕಾಲದಲ್ಲೇ ಬಹಳ ಹೆಸರು ಮಾಡಿದ್ದ ಟಿಎ ಪೈ ಅವರನ್ನು ಸೋಲಿಸಿ ಮೊದಲ ಬಾರಿ ಗೆಲ್ಲುತ್ತಾರೆ. ಸತತವಾಗಿ 5 ಬಾರಿ ಲೋಕಸಭೆಗೆ ಆಯ್ಕೆ ಆಗುತ್ತಾರೆ. 4 ಬಾರಿ ರಾಜ್ಯಸಭೆಗೆ ನಾಮ ನಿರ್ದೇಶ ನ ಹೊಂದುತ್ತಾರೆ ಎಂದು ಅವರ ರಾಜಕೀಯ ಹಾದಿಯನ್ನು ಸ್ಮರಿಸಿದರು.
'ನಿಮಗೆ ಕಾಂಗ್ರೆಸ್‌ನಲ್ಲಿ ಒಳ್ಳೆ ಭವಿಷ್ಯ ಇದೆ'
41 ವರ್ಷಗಳ ಸುದೀರ್ಘವಾಗಿ ರಾಷ್ಟ್ರ ರಾಜಕಾರಣದಲ್ಲಿದ್ದ ಫರ್ನಾಂಡಿಸ್ ಅವರು ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದವರು. ಕಾಂಗ್ರೆಸ್‌ಗೆ ಬಂದು ಬಹಳ ಒಳ್ಳೆ ಕೆಲಸ ಮಾಡಿದ್ದೀರಿ. ನಿಮಗೆ ಈ ಪಕ್ಷದಲ್ಲಿ ಉಜ್ವಲವಾದ ಭವಿಷ್ಯ ಇದೆ ಎಂದು ಹೇಳಿದ್ದರು. ನಿಷ್ಠಗೆ ಇನ್ನೊಂದು ಹೆಸರೇ ಫರ್ನಾಂಡಿಸ್ ಎಂದು ಗುಣಗಾನ ಮಾಡಿದರು.